ಡೇಟಾ ಇಲ್ಲದೆ AI ಅಸಾಧ್ಯ :)

ಕೆಲವರು ತಾವಿದನ್ನು ಸಾಧಿಸಿದ್ದೇವೆ ಎನ್ನುತ್ತಾರೆ. ನಾವು 11 ವರ್ಷ ತೆಗೆದುಕೊಂಡೆವು.

attemps
2,191,368,092
user
507,195,823
data-lake
85 TB
time-spent
38,009,691
 

ನಮ್ಮ ಬಳಕೆದಾರರಿಗೆ ಮುಂದಿನ ಪೀಳಿಗೆಯ ಕಲಿಕೆಯನ್ನು ಒದಗಿಸಲು ನಾವು ತಂತ್ರಜ್ಞಾನದೊಂದಿಗೆ ಅತ್ಯುತ್ಸಾಹದಿಂದ ಮುನ್ನಡೆಯುತ್ತಿದ್ದೇವೆ. ಸ್ವತಃ ನೀವೇ ಈ ಶಕ್ತಿಯುತ ಸಾಧನಗಳನ್ನು ಒಮ್ಮೆ ಬಳಸಿ, ನಾವಿಲ್ಲಿ ಏನು ಮತ್ತು ಹೇಗೆ ಮಾಡುತ್ತಿದ್ದೇವೆ ಎಂಬುದನ್ನು ಮನಗಾಣಬಹುದು.

ಸ್ವಯಂಚಾಲಿತ ಟೆಸ್ಟ್‌ ರಚನೆ ಶಿಕ್ಷಕರ ಅಮೂಲ್ಯ ಸಮಯವನ್ನು ಉಳಿಸಲು ಮತ್ತು ವೈಯಕ್ತಿಕ ಪಕ್ಷಪಾತವನ್ನು ತಪ್ಪಿಸಲು ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಂದ ಉನ್ನತ ಗುಣಮಟ್ಟದ, ವೈಯಕ್ತೀಕರಿಸಿದ ಟೆಸ್ಟ್‌ಗಳ ರಚನೆಯನ್ನು ಸ್ವಯಂಚಾಲಿತಗೊಳಿಸುವುದು ಸ್ವಯಂಚಾಲಿತ ಟೆಸ್ಟ್‌ ರಚನೆಯ ಗುರಿಯಾಗಿದೆ. ಖರ್ಚುವೆಚ್ಚ ಮತ್ತು ಜನಸಂಖ್ಯಾಶಾಸ್ತ್ರದ ಕಾರಣದಿಂದಾಗಿ ಬಹುತೇಕ ವಿದ್ಯಾರ್ಥಿಗಳು ಅತ್ಯುತ್ತಮ ಸಂಪನ್ಮೂಲಗಳನ್ನು ಪಡೆಯುವ ಸೌಲಭ್ಯದ ಕೊರತೆಯನ್ನು ಅನುಭವಿಸುತ್ತಾರೆ. ಅಲ್ಲದೆ, ಶಿಕ್ಷಕರ ಸಮಯವು ನಿರ್ಣಾಯಕವಾಗಿದೆ. ಸ್ವಯಂಚಾಲಿತ ಟೆಸ್ಟ್‌ನ ರಚನೆಯ ಸಹಾಯದಿಂದ, ಪ್ರಶ್ನೆಪತ್ರಿಕೆಗಳನ್ನು ರಚಿಸುವುದಕ್ಕಿಂತ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯಲೆಂಬ ಉದ್ದೇಶದಿಂದ ನಾವು ಶಿಕ್ಷಕರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ವ್ಯಕ್ತಿಯು ತನ್ನ ದೈಹಿಕ ಶ್ರಮದಿಂದ ರಚಿಸುತ್ತಿರುವಾಗ ಒಂದು ಉನ್ನತ-ಗುಣಮಟ್ಟದ ಪರೀಕ್ಷಾ ಪ್ರಶ್ನೆಪತ್ರಿಕೆಯ ರಚನಾಕಾರ್ಯವು ಒಂದು ಸವಾಲಿನ ಪ್ರಕ್ರಿಯೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲೆಂದು, ನಾವು ಟೆಸ್ಟ್‌ನ ಪ್ರಶ್ನೆಪತ್ರಿಕೆಗಳನ್ನು ವಿನ್ಯಾಸಗೊಳಿಸುವಲ್ಲಿ ಬಹು ಮಾನದಂಡಗಳನ್ನು….

ಅನ್ವೇಷಿಸಿ

ಇನ್‌ಸ್ಟಾ ಸಾಲ್ವರ್ ಗಣಿತದ ಪದಗಳ ಸಮಸ್ಯೆಗಳನ್ನು ಪರಿಹರಿಸುವುದು ಸುಲಭದ ಕೆಲಸವಲ್ಲ. ಇದಕ್ಕೆ ಸಂಕೀರ್ಣ ಗಣಿತದ ಪರಿಕಲ್ಪನೆಗಳನ್ನು ಪರಿಹರಿಸುವ ಮತ್ತು ಗಣಿತದ ಪರಿಕಲ್ಪನೆಗಳನ್ನು ಲೆಕ್ಕಾಚಾರ ಮಾಡುವ ನಕ್ಷೆಯನ್ನು ರೂಪಿಸಲು ನೈಸರ್ಗಿಕ ಭಾಷೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥೈಸುವ ಸಾಮರ್ಥ್ಯದ ಅಗತ್ಯವಿದೆ. Embibe ನ ಕಂಟೆಂಟ್ ಬುದ್ಧಿವಂತ ಸಂಗ್ರಹದಲ್ಲಿ 2000 ಕ್ಕಿಂತ ಹೆಚ್ಚು ಪರಿಹಾರಕಗಳು ಇವೆ. ಇದೊಂದು NP-ಕ್ಲಿಷ್ಟ ಸಮಸ್ಯೆಯಾಗಿದೆ, ಅಲ್ಲಿ ವಿವೇಚನಾಯುಕ್ತ ವಿಧಾನದೊಂದಿಗೆ ಮೌಲ್ಯಮಾಪನ-ಯೋಗ್ಯ ಗಣಿತ ಪದದ ಒಂದು ಸಮಸ್ಯೆಯನ್ನು ಪರಿಹರಿಸುವ ಒಂದು ವಿಶಿಷ್ಟ ಸಂಕೀರ್ಣತೆಯಾಗಿದ್ದು, ಅದು  220 ಕ್ಕಿಂತ ಹೆಚ್ಚು ಇದೆ.  ಸಂಕೀರ್ಣ ಗಣಿತ ಪದ ಸಮಸ್ಯೆಗಳಿಗೆ ಹಂತ-ಹಂತದ ಪರಿಹಾರಗಳೊಂದಿಗೆ ವಿದ್ಯಾರ್ಥಿಗಳಿಗೆ ತಕ್ಷಣ ಸಹಾಯ ಮಾಡಲು ಇನ್‌ಸ್ಟಾ ಸಾಲ್ವರ್  ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಆಳವಾದ ಕಲಿಕಾ ಭಾಷಾ ಮಾದರಿಗಳಲ್ಲಿ ಇತ್ತೀಚಿನ ಪ್ರಗತಿಗಳನ್ನು ಬಳಸುತ್ತದೆ ಮತ್ತು ಗಣಿತ….

ಅನ್ವೇಷಿಸಿ

ಸಂದೇಹ ಪರಿಹಾರಗಳು ಸ್ಪೂರ್ತಿ ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ಹೆಚ್ಚು ಕಲಿಯಲು, ಕಠಿಣ ಅಭ್ಯಾಸ ಮಾಡಲು ಮತ್ತು ಬೆಳೆಯಲು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು Embibe ಅನ್ನು ಬಳಸುತ್ತಾರೆ. ಮತ್ತು ಈ ಪ್ರಯಾಣದ ಮೂಲಕ, ಪ್ರಶ್ನೆಗಳು ಅಥವಾ ಸಂದೇಹಗಳ ಗುಂಪಿನ ಮೇಲೆ ಅನಿರೀಕ್ಷಿತವಾಗಿ ಹುಡುಕಲು ಯುಕ್ತವಾಗಿದೆ. ಆದ್ದರಿಂದ, ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವುದನ್ನು ಯಾವಾಗಲೂ ಪ್ರೋತ್ಸಾಹಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಂದೇಹ ನಿವಾರಣೆ ಉತ್ಪನ್ನವನ್ನು ಹೊಂದಿದ್ದೇವೆ. ಹೆಸರೇ ಸೂಚಿಸುವಂತೆ, ಇದು ಒಬ್ಬ ವಿದ್ಯಾರ್ಥಿಯ ಸಂದೇಹಗಳನ್ನು ಪರಿಹರಿಸಲು ನೆರವಾಗಬೇಕೆಂಬ ಗುರಿಯುಳ್ಳ ಒಂದು ವೇದಿಕೆಯಾಗಿದೆ. ಈ ಸಹಾಯವನ್ನು ವಿಷಯದ ತಜ್ಞರಿಂದ ನೀಡಬಹುದಾದರೂ, ವಿದ್ಯಾರ್ಥಿಗಳ ಮನಸಿನಲ್ಲಿ ಮೂಡುವ ಸಂಶಯಗಳ ಅಗಾಧ ಪರಿಮಾಣ ಸರಿಸಮಾನಾಂತರವಾಗಿ ಬಗೆಹರಿಸುವುದು ಬಹು ಕಠಿಣದ ಕೆಲಸವಾಗಿದೆ. ಅಂಥ ವಿಸ್ತಾರತೆಯನ್ನು ಆ ತಜ್ಞರಿಂದಲೇ ದೈಹಿಕ ಶ್ರಮದಿಂದ ಪ್ರತಿಯೊಂದು ಸಂದೇಹವನ್ನು ಮರಳಿ….

ಅನ್ವೇಷಿಸಿ

ಮೆಟಾಟ್ಯಾಗ್‌ಗಳ ರ್‍ಯಾಂಕರ್ ಶಿಕ್ಷಣ ತಂತ್ರಜ್ಞಾನ ಕ್ಷೇತ್ರದಲ್ಲಿ, ವಿಷಯವಸ್ತುವನ್ನು ಪ್ರವೇಶಿಸಲು ಮತ್ತು ಪತ್ತೆಹಚ್ಚಲು ಎಲ್ಲಾ ಬಳಕೆದಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಾಧ್ಯವಾಗುವಂತೆ ಮಾಡುವುದು ಒಂದು ಪ್ರಮುಖ ಕಾರ್ಯವಾಗಿದೆ. ಅದನ್ನು ಮಾಡುವ ಸಲುವಾಗಿ, ಉತ್ಪನ್ನಗಳ ಒಟ್ಟಾರೆ ಬಳಕೆದಾರರ ಅನುಭವದೊಂದಿಗೆ ಜೋಡಿಸಲಾದ ಸಂಬಂಧಿತ ಟ್ಯಾಗ್‌ಗಳಿಂದಲೇ ವಿಷಯವನ್ನು ಟ್ಯಾಗ್ ಮಾಡುವಂತೆ ಕಂಪನಿಗಳು ಮಾನವ ಟಿಪ್ಪಣಿ ಬರಹಗಾರರನ್ನು ಅಥವಾ ವಿಷಯ ತಜ್ಞರನ್ನು ಬಳಸಿಕೊಳ್ಳುತ್ತವೆ. Embibe ನ ನಾಲೆಡ್ಜ್ ಗ್ರಾಫ್ 74,000+ ಜಾಲ ಘಟಕಗಳನ್ನು ಹೊಂದಿದೆ, ಪ್ರತಿಯೊಂದೂ ಜ್ಞಾನದ ಪ್ರತ್ಯೇಕ ಘಟಕವನ್ನು ಪ್ರತಿನಿಧಿಸುತ್ತದೆ. ಹೆಚ್ಚುವರಿಯಾಗಿ, 1,89,380 ಪರಸ್ಪರಸಂಪರ್ಕಗಳು ಮತ್ತು 2,15,062 ಸಾಮರ್ಥ್ಯಗಳಿವೆ. ನೂರಾರು ಪಠ್ಯಕ್ರಮಗಳಾದ್ಯಂತ ಸಾವಿರಾರು ಪರೀಕ್ಷೆಗಳಲ್ಲಿ ಕಂಟೆಂಟ್ ಅನ್ನು ವಿಸ್ತರಿಸಿದಂತೆ, ಟ್ಯಾಗ್ ಮಾಡುವ ಪ್ರಕ್ರಿಯೆಯು ಹೆಚ್ಚು ದುಬಾರಿ ಮತ್ತು ಸಮಯ ತೆಗೆದುಕೊಳ್ಳುತ್ತದೆ. ಇನ್ನೂ ಹೆಚ್ಚಾಗಿ, ಡೇಟಾಸೆಟ್‌ನ ದೈಹಿಕ ಶ್ರಮದ ಟ್ಯಾಗಿಂಗ್ ಆದಾಗ….

ಅನ್ವೇಷಿಸಿ

ಜ್ಞಾನದ ಆಪ್ತಮಿತ್ರ Emibibe ನಲ್ಲಿ, ವಿದ್ಯಾರ್ಥಿಗಳ ಕಲಿಕೆಯ ಪಯಣವನ್ನು ಸಬಲೀಕರಿಸಲು ನಾವು ಬದ್ಧರಾಗಿದ್ದೇವೆ. ಜ್ಞಾನದ ಆಪ್ತಮಿತ್ರ (ನಾಲೆಜ್ ಬಡಿ) ಎನ್ನುವುದು ಒಂದು ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಆಗಿದೆ. ವಿದ್ಯಾರ್ಥಿಗಳು ತಮ್ಮ ಪ್ರಶ್ನೋತ್ತರಗಳನ್ನು ಹಾಗೂ ಸಂದೇಹ ಪರಿಹಾರವನ್ನು ಬಳಸುವ ಮೂಲಕ ತಮ್ಮ ಕಲಿಕೆಯ ಮಟ್ಟವನ್ನು ಪರಿಷ್ಕರಿಸುವಲ್ಲಿ ಈ ಚಾಟ್‌ಬಾಟ್ ಸಹಾಯ ಮಾಡುತ್ತದೆ.   ಸ್ವಯಂ ಪ್ರಶ್ನೆ ಸೃಷ್ಟಿಸುವುದಕ್ಕೆ ಮತ್ತು ಉತ್ತರಿಸುವುದಕ್ಕೆಂದು ಆಳವಾದ ಕಲಿಕಾ ಮಾದರಿಗಳನ್ನು ಪೂರೈಸುವ ರೀತಿಯಲ್ಲಿ ಸ್ಪಷ್ಟವಾದ ವಿಷಯವಸ್ತುವಿನ ಜ್ಞಾನದ ಪೂರಕ ಪ್ರಧಾನಾಂಶವಾಗಿದೆ. ಒಂದು ವಿಷಯದ ಬಗ್ಗೆ ಒಬ್ಬ ವಿದ್ಯಾರ್ಥಿಗೆ ಇರಬೇಕಾದ ಬುದ್ಧಿವಂತಿಕೆಯ ಬೆನ್ನೆಲುಬಿನಂತೆ Emibibe ನ ಜ್ಞಾನ ನಕ್ಷೆ ಸಹಕಾರಿಯಾಗಿದೆ. ಇದು ಲಕ್ಷಾಂತರಕ್ಕಿಂತ ಹೆಚ್ಚಿನ ಸಂಖ್ಯೆಯ ಸಂಬಂಧಗಳನ್ನು ಬಳಸಿಕೊಂಡು ಪರಸ್ಪರ ಸಂಪರ್ಕದಲ್ಲಿರುವ ಸಾವಿರಾರು ಪರಿಕಲ್ಪನೆಗಳನ್ನು ಮತ್ತು ಸಕ್ಷಮತೆಗಳನ್ನು ಈ ನಕ್ಷೆ ಹೊಂದಿದೆ…..

ಅನ್ವೇಷಿಸಿ

ಮೇಧಾಸ್ ಮೇಧಾಸ್ ಎಂಬುದು ಒಂದು ಸಂಸ್ಕೃತ ಪದವಾಗಿದ್ದು, ಅದರರ್ಥ ಜ್ಞಾನ, ತಿಳಿವಳಿಕೆ ಮತ್ತು ಬುದ್ಧಿವಂತಿಕೆಯಾಗಿದೆ. Embibe ನಲ್ಲಿ, ಪ್ರಶ್ನೆ ಸೃಷ್ಟಿಸುವುದು, ಪ್ರಶ್ನೆಗೆ ಉತ್ತರಿಸುವುದು, ಸಂದೇಹ ಪರಿಹಾರ, ಇನ್‌ಸ್ಟಾ-ಸಾಲ್ವರ್‌ನಂತಹ ಮುಂತಾದ ವಿಷಯದ ಗುಪ್ತಚರ ಕಾರ್ಯಗಳನ್ನು ಸಶಕ್ತಗೊಳಿಸಲೆಂದೇ ಇದು ಒಂದು ನೈಸರ್ಗಿಕ ಭಾಷಾ ತಿಳುವಳಿಕೆಯ ವೇದಿಕೆಯಾಗಿದೆ.  ಕೃತಕ ಬುದ್ಧಿಮತ್ತೆ ಎಂಬುದು ಒಂದು ಸುದೀರ್ಘಕಾಲ ಉಪಯೋಗಕ್ಕೆ ಬರುವ ಸರಕಾಗಿದೆ, ಆಳವಾದ ಕಲಿಕಾ ತಂತ್ರಗಳಿಂದ ಒಂದು ವ್ಯಾಪಕ ಶ್ರೇಣಿಯ ಕಾರ್ಯಕ್ಷೇತ್ರ ಪ್ರಯೋಗಗಳಲ್ಲಿ ಅದರ ಸಾಮರ್ಥ್ಯಕ್ಕೆಂದೇ ಒಂದು ಘನವಾದ ಪ್ರಕರಣವಾಗಿದೆ. ಆದಾಗ್ಯೂ, ಕೃತಕ ಬುದ್ಧಿಮತ್ತೆಯ ಪ್ರಸಕ್ತ ಸ್ಥಿತಿಯು ಬ್ಲ್ಯಾಕ್-ಬಾಕ್ಸ್ ಮಾಡೆಲ್‌ಗಳ ಪ್ರಾಬಲ್ಯಕ್ಕೆ ಒಳಪಟ್ಟಿದ್ದು, ಈ ಮಾಡೆಲ್‌ಗಳು ತರಬೇತಿ ದತ್ತಾಂಶದಲ್ಲಿ ಸಂಖ್ಯಾಶಾಸ್ತ್ರೀಯವಾಗಿ ಸೆರೆಹಿಡಿದಿರುವ ಸುಪ್ತ ಮಾದರಿಗಳನ್ನು ಕಲಿಯುವ ಮೂಲಕ ತರಬೇತಿ ಪಡೆದಿರುತ್ತವೆ. ಈ ಮಾದರಿಗಳನ್ನು ಕೇವಲ ವಿವರಿಸಲು ಆಗದಿರುವುದು ಮಾತ್ರವಲ್ಲ, ಅದರ….

ಅನ್ವೇಷಿಸಿ

ವೈಯಕ್ತೀಕರಿಸಿದ ಸಾಧನೆಯ ಪಯಣ ವಿದ್ಯಾರ್ಥಿಗಳಿಗೆ ಸದ್ಯದ ದಿನಗಳಲ್ಲಿ ಅವರ ಜ್ಞಾನದ ಮಟ್ಟವನ್ನು ಒರೆಹಚ್ಚುವ ಕಾರ್ಯದಲ್ಲಿ ತೊಡಗುವಂತೆ ಅನುಕೂಲವಾಗುವಂತೆ ಕಲಿಕೆಯ ಸೌಲಭ್ಯ ಒದಗಿಸಬೇಕು. ಅದಕ್ಕಾಗಿ ಒಂದು ಪೂರ್ವನಿರ್ಧಾರಿತ ಕಾಲಾವಧಿ, ಒಂದು ಪೂರ್ವನಿರ್ಧಾರಿತ ಪಠ್ಯಕ್ರಮ, ಒಬ್ಬ ವಿದ್ಯಾರ್ಥಿಯ ಉದ್ದೇಶಿತ ಪರೀಕ್ಷೆಗೆ ಪರಿಕಲ್ಪನೆಗಳ ಪ್ರಾಮುಖ್ಯತೆ ಮತ್ತು ಪ್ರತಿಯೊಂದು ಕ್ಷೇತ್ರದ ಪರಿಕಲ್ಪನೆಯಲ್ಲೂ ಪರಿಣತಿಯನ್ನು ಸಾಧಿಸಲು ಬೇಕಾದ ಅತ್ಯುತ್ತಮ ಕಲಿಕೆಯ ಮಾರ್ಗವನ್ನು ಒದಗಿಸುವ ಗುರಿಯನ್ನು ಮುಟ್ಟಬೇಕೆಂಬುದೇ ವೈಯಕ್ತೀಕರಿಸಿದ ಸಾಧನೆಯ ಪಯಣದ(PAJ) ಧ್ಯೇಯವಾಗಿದೆ. ಕಲಿಕೆಯ ಫಲಿತಾಂಶಗಳನ್ನು ತಲುಪಿಸಲು AI ವೇದಿಕೆಯಾದ Embibeಗೆ PAJಯು ಅತ್ಯುನ್ನತ ಪ್ರಾಮುಖ್ಯತೆಯನ್ನು ಹೊಂದಿದೆ. Embibeನಲ್ಲಿ, ಕಲಿಕೆಯ ಫಲಿತಾಂಶಗಳನ್ನು ಸಾಧಿಸಲು ಸಂಬಂಧಿಸಿದ ಸಾಂದರ್ಭಿಕ ನಾಲೆಡ್ಜ್ ಗ್ರಾಫ್ ಮತ್ತು ನಡವಳಿಕೆಯ ಪ್ರೊಫೈಲ್‌ನ ಮೇಲೆ ನಾವು ವಿದ್ಯಾರ್ಥಿಗಳ ಪರಿಕಲ್ಪನೆಯ ಪಾಂಡಿತ್ಯವನ್ನು ಮಾಪನ ಮಾಡುತ್ತೇವೆ. ಅಧಿಕವಾಗಿ ವೈಯಕ್ತೀಕರಿಸಿದ ರೀತಿಯಲ್ಲಿ ಕಲಿಕೆ, ಅಭ್ಯಾಸ ಮತ್ತು….

ಅನ್ವೇಷಿಸಿ

ಅನುವಾದ ಭಾರತದಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸದ ವಿಷಯಗಳನ್ನು ತಮ್ಮತಮ್ಮ ಮಾತೃಭಾಷೆಯಲ್ಲಿ ಪೂರೈಸುವುದೇ ಅನುವಾದ ಯೋಜನೆಯ ಒಂದು ಗುರಿಯಾಗಿದೆ.    ಭಾರತದಲ್ಲಿ ಬಹುತೇಕವಾಗಿ ಉನ್ನತ-ಗುಣಮಟ್ಟದ ಶೈಕ್ಷಣಿಕ ವಿಷಯ ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿದೆ. ನಾವು ಈ ವಿಷಯಗಳನ್ನು ಭಾರತೀಯ ಮಾತೃ ಭಾಷೆಗಳಿಗೆ ಭಾಷಾಂತರಿಸಲು ಸಾಧ್ಯವಾದರೆ ಅದು ವಿದ್ಯಾರ್ಥಿಗಳಿಗೆ ಬಹುದೊಡ್ಡ ಸಹಾಯವಾಗುತ್ತದೆ. ಆ ಕಾರ್ಯವನ್ನು ಮಾಡುವ ಸಲುವಾಗಿ, ನಾವು ಭಾರತದ ಎಲ್ಲಾ ಪ್ರಮುಖ ಮಾತೃ ಭಾಷೆಗಳಿಗೆ ಆಂತರಿಕ ನ್ಯೂರಲ್ ಮೆಷಿನ್ ಟ್ರಾನ್ಸ್‌ಲೇಷನ್ ಮಾದರಿಗಳನ್ನು ರಚಿಸಿದ್ದೇವೆ. ಪ್ರತಿಯೊಂದು ಮಾದರಿಯು ಶೈಕ್ಷಣಿಕ ಇಂಗ್ಲಿಷ್ ವಾಕ್ಯಗಳನ್ನು ಇನ್‌ಪುಟ್ ರೂಪದಲ್ಲಿ ಪಡೆಯುತ್ತದೆ ಹಾಗೇ ಅನುವಾದಿತ ವಾಕ್ಯಗಳನ್ನು ಒದಗಿಸಿದ ಉದ್ದೇಶಿತ ಭಾಷೆಯ ರೂಪದಲ್ಲಿ ಔಟ್‍ಪುಟ್ ಅನ್ನಾಗಿ ಫಲಿತಾಂಶವನ್ನು ನೀಡುತ್ತದೆ. ಪ್ರಸ್ತುತ, ನಾವು 11 ಭಾರತೀಯ ಭಾಷೆಗಳ ಕಾರ್ಯಗಳಿಗೆ ಬೆಂಬಲ ನೀಡುತ್ತಿದ್ದೇವೆ: ಕೆಲವೊಮ್ಮೆ ಗೂಗಲ್ ಅನುವಾದವು….

ಅನ್ವೇಷಿಸಿ

ಪೇಟೆಂಟ್ ಮತ್ತು ರೀಸರ್ಚ್ ಹೈಲೈಟ್‌ಗಳು

49 ಪ್ರಕಟಣೆಗಳು ಮತ್ತು 17 ಪೇಟೆಂಟ್‌ಗಳು