Saas ಮೂಲಕ AI ನ ಅನ್ಲಾಕ್ ಮಾಡುವಿಕೆ
ಸ್ವಯಂಚಾಲಿತ ಟೆಸ್ಟ್ ರಚನೆ
ಶಿಕ್ಷಕರ ಅಮೂಲ್ಯ ಸಮಯವನ್ನು ಉಳಿಸಲು ಮತ್ತು ವೈಯಕ್ತಿಕ ಪಕ್ಷಪಾತವನ್ನು ತಪ್ಪಿಸಲು ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಂದ ಉನ್ನತ ಗುಣಮಟ್ಟದ, ವೈಯಕ್ತೀಕರಿಸಿದ ಟೆಸ್ಟ್‌ಗಳ ರಚನೆಯನ್ನು ಸ್ವಯಂಚಾಲಿತಗೊಳಿಸುವುದು ಸ್ವಯಂಚಾಲಿತ ಟೆಸ್ಟ್ ರಚನೆಯ ಗುರಿಯಾಗಿದೆ.
ಖರ್ಚುವೆಚ್ಚ ಮತ್ತು ಜನಸಂಖ್ಯಾಶಾಸ್ತ್ರದ ಕಾರಣದಿಂದಾಗಿ ಬಹುತೇಕ ವಿದ್ಯಾರ್ಥಿಗಳು ಅತ್ಯುತ್ತಮ ಸಂಪನ್ಮೂಲಗಳನ್ನು ಪಡೆಯುವ ಸೌಲಭ್ಯದ ಕೊರತೆಯನ್ನು ಅನುಭವಿಸುತ್ತಾರೆ. ಅಲ್ಲದೆ, ಶಿಕ್ಷಕರ ಸಮಯವು ನಿರ್ಣಾಯಕವಾಗಿದೆ. ಸ್ವಯಂಚಾಲಿತ ಟೆಸ್ಟ್‌ನ ರಚನೆಯ ಸಹಾಯದಿಂದ, ಪ್ರಶ್ನೆಪತ್ರಿಕೆಗಳನ್ನು ರಚಿಸುವುದಕ್ಕಿಂತ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯಲೆಂಬ ಉದ್ದೇಶದಿಂದ ನಾವು ಶಿಕ್ಷಕರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ವ್ಯಕ್ತಿಯು ತನ್ನ ದೈಹಿಕ ಶ್ರಮದಿಂದ ರಚಿಸುತ್ತಿರುವಾಗ ಒಂದು ಉನ್ನತ-ಗುಣಮಟ್ಟದ ಪರೀಕ್ಷಾ ಪ್ರಶ್ನೆಪತ್ರಿಕೆಯ ರಚನಾಕಾರ್ಯವು ಒಂದು ಸವಾಲಿನ ಪ್ರಕ್ರಿಯೆಯಾಗಿದೆ.
ಈ ಸಮಸ್ಯೆಯನ್ನು ಬಗೆಹರಿಸಲೆಂದು, ನಾವು ಟೆಸ್ಟ್‌ನ ಪ್ರಶ್ನೆಪತ್ರಿಕೆಗಳನ್ನು ವಿನ್ಯಾಸಗೊಳಿಸುವಲ್ಲಿ ಬಹು ಮಾನದಂಡಗಳನ್ನು ಪರಿಗಣಿಸುವ ಬುದ್ಧಿವಂತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ:
- ಪಠ್ಯಕ್ರಮದ ಕವರೇಜ್,
- ಟಾಪಿಕ್ ವೈಟೇಜ್,
- ಕ್ಲಿಷ್ಟತಾ ಮಟ್ಟಗಳು,
- ಹಿಂದಿನ ವರ್ಷದ ಪ್ರವೃತ್ತಿಗಳು,
- ವಿವಿಧ ಪ್ರಕಾರದ ಪ್ರಶ್ನೆಗಳು,
- ಬಳಕೆದಾರರ ಪರಿಕಲ್ಪನಾ ಪಾಂಡಿತ್ಯ (ವೈಯಕ್ತೀಕರಣ)
- ಬಳಕೆದಾರರ ನಡವಳಿಕೆಯ ಪ್ರೊಫೈಲ್ (ವೈಯಕ್ತೀಕರಣ)
ಗರಿಷ್ಠ ಗ್ರಾಹಕೀಯಗೊಳಿಸುವುದರೊಂದಿಗೆ ತ್ವರಿತ ಸಮಯದಲ್ಲಿ ಪ್ರಶ್ನೆಪತ್ರಿಕೆಗಳನ್ನು ರಚಿಸಲು ಈ ಉಪಯುಕ್ತತೆಯು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಇದು Embibe ಅಭಿವೃದ್ಧಿಪಡಿಸಿದ ಟೆಸ್ಟ್ ಗುಣಮಟ್ಟ ಸ್ಕೋರ್ ಅಲ್ಗಾರಿದಮ್ ಅನ್ನು ಬಳಸಿಕೊಂಡು ಉತ್ತಮ ಗುಣಮಟ್ಟವನ್ನು ಖಚಿತಪಡಿಸುತ್ತದೆ.
ಟೆಸ್ಟ್‌ನ ಗುಣಮಟ್ಟ ಸ್ಕೋರ್‌ಗಳು ಮತ್ತು ಪ್ರಶ್ನೆ ತಾರತಮ್ಯ ಅಂಶ
ಟೆಸ್ಟ್‌ನ ಗುಣಮಟ್ಟ ಸ್ಕೋರ್ ಅನ್ನು ರಚಿಸಿದ ಟೆಸ್ಟ್ ಅಧ್ಯಾಯಗಳ ಕ್ಲಿಷ್ಟತೆ ಮತ್ತು ಕವರೇಜ್‌ಗೆ ಸಂಬಂಧಿಸಿದಂತೆ ಶಿಕ್ಷಕರು/ಶಿಕ್ಷಣಸಂಸ್ಥೆಯು ಆಯ್ಕೆ ಮಾಡಿದ ಮಾನದಂಡಗಳ ಪ್ರಕಾರವಾಗಿದೆಯೇ ಎಂದು ಪರಿಶೀಲಿಸಲು ಬಳಸಲಾಗುತ್ತದೆ.
ಪ್ರಶ್ನೆಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ, ಬಳಕೆದಾರರು-ಹಲವು ಬಾರಿ ಪ್ರಯತ್ನಿಸಿದ ಪ್ರಶ್ನೆಗಳ ದತ್ತಾಂಶವನ್ನು ಬಳಸಿಕೊಂಡು, ಅವುಗಳಲ್ಲಿರುವ ವ್ಯತ್ಯಾಸದ ಅಂಶವನ್ನು ಗುರುತಿಸಿ ಅಂದಾಜಿಸಲೆಂದು ಐಟಂ ರೆಸ್ಪಾನ್ಸ್ ಥಿಯರಿಯನ್ನು ಬಳಸಲಾಗಿದೆ. ವ್ಯತ್ಯಾಸ ಗುರುತಿಸುವ ವಿವೇಚನಾ ಶಕ್ತಿ ಅಧಿಕವಾಗಿರುವ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಈ ಒಂದು ಕ್ರಮವು ಟೆಸ್ಟ್‌ನ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸುತ್ತದೆ.
ನಿಮ್ಮ ಸ್ವಂತ ಟೆಸ್ಟ್ ರಚಿಸಿ
ಕಸ್ಟಮ್ ಆಯ್ಕೆ ಮಾಡಿದ ಅಧ್ಯಾಯಗಳು ಮತ್ತು ಕ್ಲಿಷ್ಟತಾ ಮಟ್ಟಗಳನ್ನು ಬಳಸಿಕೊಂಡು ಗ್ರಾಹಕೀಯಗೊಳಿಸಿದ ರೀತಿಯಲ್ಲಿ ಒಂದು ನಿರ್ದಿಷ್ಟ ಗುರಿ ಮತ್ತು ಪರೀಕ್ಷೆಗಾಗಿ ಟೆಸ್ಟ್ ರಚಿಸುವಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ನಿಮ್ಮ ಸ್ವಂತ ಟೆಸ್ಟ್ ರಚಿಸಿ ಎಂಬ ಫೀಚರ್ ಅನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ವಿದ್ಯಾರ್ಥಿಯು ಆಯ್ಕೆ ಮಾಡಿದ ನಿರ್ಬಂಧಗಳನ್ನು ಪೂರೈಸಲು ಹಾಗೂ ವಿದ್ಯಾರ್ಥಿಗೆ ವೈಯಕ್ತೀಕರಿಸಿದ ವಿವಿಧ ಪ್ರಶಸ್ತಗೊಳಿಸಿದ ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ಈ ಟೆಸ್ಟ್ ಅನ್ನು ರಚಿಸಲಾಗುತ್ತದೆ.
ಜ್ಞಾನ ನಿರ್ಣಾಯಕ ಟೆಸ್ಟ್
ಉತ್ತಮ ಜ್ಞಾನ ನಿರ್ಣಾಯಕ ಟೆಸ್ಟ್ (i) ನಿರ್ದಿಷ್ಟ ಕೌಶಲ್ಯ ಜೊತೆಗಾಗಿ ವಿಭಿನ್ನ ಸಾಮರ್ಥ್ಯಗಳ ವಿದ್ಯಾರ್ಥಿಗಳ ನಡುವೆ ಭೇದ ತೋರಬಹುದು, (ii) ಮೂಲಾಧಾರ ದತ್ತಾಂಶದೊಂದಿಗೆ ಹೊಂದಿಕೆಯಿರಬೇಕು ಮತ್ತು (iii) ಸಾಧ್ಯವಾದಷ್ಟು ಕಡಿಮೆ ಮೌಲ್ಯಮಾಪನ ಪ್ರಶ್ನೆಗಳೊಂದಿಗೆ ಇದನ್ನು ಸಾಧಿಸಬಹುದು. ಗುರಿಯನ್ನು ಸಾಧಿಸಲು ಅಗತ್ಯವಾದ ಪರಿಕಲ್ಪನೆಗಳನ್ನು ವಿದ್ಯಾರ್ಥಿಯು ಎಷ್ಟು ಕರಗತ ಮಾಡಿಕೊಂಡಿದ್ದಾನೆ ಎಂಬುದನ್ನು ನಿರ್ಣಯಿಸಲು ಸಹಾಯ ಮಾಡಲು ನಾವು ವಿದ್ಯಾರ್ಥಿಗೆ ವೈಯಕ್ತೀಕರಿಸಿದ ಸಾಧನೆಯ ಪಯಾಣದ ಭಾಗವಾಗಿ ಜ್ಞಾನ ನಿರ್ಣಾಯಕ ಟೆಸ್ಟ್‌ಗಳನ್ನು ರಚಿಸುತ್ತೇವೆ. ಇದನ್ನು 2 ಟೆಸ್ಟ್‌ಗಳನ್ನು ಬಳಸಿ ಮಾಡಲಾಗುತ್ತದೆ:
- ಪೂರ್ವಾಪೇಕ್ಷಿತ ಟೆಸ್ಟ್: ವಿದ್ಯಾರ್ಥಿಯು ಆಯ್ಕೆ ಮಾಡಿದ ಒಂದು ಗುರಿಯನ್ನು ಸಾಧಿಸಬೇಕಾದರೆ, ಅತ್ಯಾವಶ್ಯಕವಾದ ಮೂಲಭೂತ ಪೂರ್ವಾಪೇಕ್ಷಿತ ಪರಿಕಲ್ಪನೆಗಳಿಗೆ ಅನುಗುಣವಾಗಿರುವ ಪ್ರಶ್ನೆಗಳನ್ನು ಈ ಟೆಸ್ಟ್ ಅನ್ನು ಒದಗಿಸುತ್ತದೆ.
- ಅಚೀವ್ ಟೆಸ್ಟ್: ನಿಗದಿತ ಪರೀಕ್ಷೆ ಮತ್ತು ಗುರಿಯ ಪ್ರಮುಖ ಪರಿಕಲ್ಪನೆಗಳನ್ನು ಕುರಿತಂತೆ ಈ ಟೆಸ್ಟ್ ಅನ್ನು ಪ್ರಶ್ನೆಗಳನ್ನು ಒದಗಿಸುತ್ತದೆ.
ಉಲ್ಲೇಖಗಳು:
- ಧವಲಾ, ಸೋಮಾ, ಚಿರಾಗ್ ಭಾಟಿಯಾ, ಜಾಯ್ ಬೋಸ್, ಕೆಯೂರ್ ಫಾಲ್ದು ಮತ್ತು ಅದಿತಿ ಅವಸ್ತಿ. “ಆಟೋ ಜನರೇಶನ್ ಆಫ್ ಡಯಾಗ್ನೊಸ್ಟಿಕ್ ಅಂಡ್ ದೇರ್ ಕ್ವಾಲಿಟಿ ಎವಾಲ್ಯುಯೇಷನ್.” ಇಂಟರ್ನ್ಯಾಷನಲ್ ಎಜುಕೇಷನಲ್ ಡಾಟಾ ಮೈನಿಂಗ್ ಸೊಸೈಟಿ (2020).
- ದೇಸಾಯಿ, ನಿಶಿತ್, ಕೆಯೂರ್ ಫಲ್ಡು, ಅಚಿಂತ್ ಥಾಮಸ್ ಮತ್ತು ಅದಿತಿ ಅವಸ್ತಿ. “ಎ ಸಿಸ್ಟಮ್ ಅಂಡ್ ಮೆಥಡ್ ಫಾರ್ ಪ್ರೊಡ್ಯೂಸಿಂಗ್ ಆನ್ ಎವಾಲ್ಯುಯೇಷನ್ ಅಂಡ್ ಮೆಷರಿಂಗ್ ಇಟ್ಸ್ ಕ್ವಾಲಿಟಿ.” ಯು.ಎಸ್. ಪೇಟೆಂಟ್ ಅಪ್ಲಿಕೇಶನ್ 16/684,434, ಅಕ್ಟೋಬರ್ 1, 2020 ರಂದು ಸಲ್ಲಿಸಲಾಗಿದೆ.
- ವಿನ್ಸೆಂಟ್ ಲೆಬ್ಲಾಂಕ್, ಮೈಕೆಲ್ ಎ. ಎ. ಕಾಕ್ಸ್, “ಇಂಟರ್ ಪ್ರಿಟೇಶನ್ ಆಫ್ ದಿ ಪಾಯಿಂಟ್-ಬೈಸೆರಿಯಲ್ ಕೋರಿಲೇಶನ್ ಕೊಯೆಫೀಶಿಯೆಂಟ್ ಇನ್ ದಿ ಕಾಂಟೆಕ್ಸ್ಟ್ ಆಫ್ ಎ ಸ್ಕೂಲ್ ಎಕ್ಸಾಮಿನೇಶನ್” ಜನವರಿ 2017, ಕ್ವಾಂಟಿಟೇಟಿವ್ ಮೆಥಡ್ಸ್ ಫಾರ್ ಸೈಕಾಲಜಿ 13(1):46-56
- ಲಿಂಡೆನ್, W. D., ಮತ್ತು R. ಹ್ಯಾಂಬಲ್ಟನ್. “ಹ್ಯಾಂಡ್‌ಬುಕ್ ಆಫ್ ಮಾಡರ್ನ್ ಐಟಮ್ ರೆಸ್ಪಾನ್ಸ್ ಥಿಯರಿ.” (1997), ಬಯೋಮೆಟ್ರಿಕ್ಸ್ 54:1680
- ರೊನಾಲ್ಡ್ ಕೆ ಹ್ಯಾಂಬಲ್ಟನ್ ಮತ್ತು ವಿಮ್ ಜೆ ಲಿಂಡೆನ್. ಹ್ಯಾಂಡ್ ಬುಕ್ ಆಫ್ ಮಾಡರ್ನ್ ಐಟಂ ರೆಸ್ಪಾನ್ಸ್ ಥಿಯರಿ. ಸಂಪುಟ ಎರಡು: ಸ್ಟಾಟಿಸ್ಟಿಕಲ್ ಟೂಲ್ಸ್. ಸಿಆರ್‌ಸಿ ಪ್ರೆಸ್, ಯುಎಸ್ಎ, 2016.
- ಗುವಾಂಗ್ ಸೆನ್, ಯುಕ್ಸಿಯಾವೊ ಡಾಂಗ್, ವಾನ್ಲಿನ್ ಗಾವೊ, ಲಿನಾ ಯು, ಸೈಮನ್ ಸೀ, ಕ್ವಿಂಗ್ ವಾಂಗ್, ಯಿಂಗ್ ಯಾಂಗ್ ಮತ್ತು ಹಾಂಗ್ಬಿಯಾವೊ ಜಿಯಾಂಗ್. ಆನ್ ಇಂಪ್ಲಿಮೆಂಟೇಶನ್ ಆಫ್ ಆನ್ ಆಟೊಮ್ಯಾಟಿಕ್ ಎಕ್ಸಾಮಿನೇಶನ್ ಪೇಪರ್ ಜನರೇಶನ್ ಸಿಸ್ಟಮ್. ಮೆಥಮ್ಯಾಟಿಕಲ್ ಆಂಡ್ ಕಂಪ್ಯೂಟರ್ ಮಾಡೆಲಿಂಗ್, 51, 2010.
- “ಆಟೊಜನರೇಶನ್ ಆಫ್ ಡಯಗ್ನೋಸ್ಟಿಕ್ ಟೆಸ್ಟ್ ಆಂಡ್ ದೆಯರ್ ಕ್ವಾಲಿಟಿ ಎವಾಲ್ಯುಯೇಶನ್ – ಇಡಿಎಂ:2020”, ಎಡಿಎಂ 2020 ಪ್ರಸ್ತುತಿ, ಜುಲೈ 2020, https://www.youtube.com/watch?v=7wZz0ckqWFs
- ಲಾಲ್ವಾನಿ, ಅಮರ್ ಮತ್ತು ಸ್ವೀಟಿ ಅಗರವಾಲ್. “ವ್ಯಾಲಿಡೇಟಿಂಗ್ ರಿವೈಸ್ಡ್ ಬ್ಲೂಮ್ಸ್ ಟ್ಯಾಕ್ಸಾನಮಿ ಯೂಸಿಂಗ್ ಡೀಪ್ ನಾಲೆಡ್ಜ್ ಟ್ರೇಸಿಂಗ್” ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಕುರಿತ ಅಂತಾರಾಷ್ಟ್ರೀಯ ಶೃಂಗದಲ್ಲಿ, ಪುಟಗಳು 225-238. ಸ್ಪ್ರಿಂಗರ್, ಚಾಮ್,2018.
- ಫಾಲ್ಡು, ಕೆಯೂರ್, ಅದಿತಿ ಅವಸ್ತಿ ಮತ್ತು ಅಚಿಂತ್ ಥಾಮಸ್. “ಅಡಾಪ್ಟೀವ್ ಲರ್ನಿಂಗ್ ಮೆಶಿನ್ ಫಾರ್ ಸ್ಕೋರ್ ಇಂಪ್ರೂವ್ ಮೆಂಟ್ ಆಂಡ್ ಪಾರ್ಟ್ಸ್ ದೇರಾಫ್” ಯು.ಎಸ್. ಪೇಟೆಂಟ್ 10,854,099, ಡಿಸೆಂಬರ್ 1, 2020 ರಂದು ನೀಡಲಾಗಿದೆ.
- ದೊಂಡಾ, ಚಿಂತನ್, ಸಾಯನ್ ದಾಸ್ ಗುಪ್ತ, ಸೋಮ ಎಸ್. ಧವಲಾ, ಕೆಯೂರ್ ಫಲ್ದು, ಮತ್ತು ಅದಿತಿ ಅವಸ್ತಿ. “ಎ ಫ್ರೇಮ್ ವರ್ಕ್ ಫಾರ್ ಪ್ರಿಡಿಕ್ಟಿಂಗ್, ಇಂಟರ್ ಪ್ರಿಟಿಂಗ್, ಆಂಡ್ ಇಂಪ್ರೂವಿಂಗ್ ಲರ್ನಿಂಗ್ ಔಟ್ ಕಮ್ಸ್” arXiv ಪ್ರಿಪ್ರಿಂಟ್ arXiv:2010.02629 (2020).
- ಫಾಲ್ಡು, ಕೆಯೂರ್, ಅಚಿಂತ್ ಥಾಮಸ್ ಮತ್ತು ಅದಿತಿ ಅವಸ್ತಿ. “ಸಿಸ್ಟಮ್ ಆಂಡ್ ಮೆಥಡ್ ಫಾರ್ ರೆಕಮಂಡಿಂಗ್ ಪರ್ಸನಲೈಝ್ಡ್ ಕಂಟೆಂಟ್ ಯೂಸಿಂಗ್ ಕಾಂಟೆಕ್ಸ್ಚುವಲೈಝ್ಡ್ ನಾಲೆಡ್ಜ್ ಬೇಸ್.” ಯು.ಎಸ್. ಪೇಟೆಂಟ್ ಅಪ್ಲಿಕೇಶನ್ 16/586,512, ಅಕ್ಟೋಬರ್ 1, 2020 ರಂದು ಸಲ್ಲಿಸಲಾಗಿದೆ.
- ಫಾಲ್ಡು, ಕೆಯೂರ್, ಅಚಿಂತ್ ಥಾಮಸ್ ಮತ್ತು ಅದಿತಿ ಅವಸ್ತಿ. “ಸಿಸ್ಟಂ ಆಂಡ್ ಮೆಥಡ್ ಫಾರ್ ಬಿಹೇವಿಯರಲ್ ಅನಾಲಿಸಿಸ್ ಆಂಡ್ ರೆಕಮಂಡೇಶನ್ಸ್.” ಯು.ಎಸ್. ಪೇಟೆಂಟ್ ಅಪ್ಲಿಕೇಶನ್ 16/586,525, ಅಕ್ಟೋಬರ್ 1, 2020 ರಂದು ಸಲ್ಲಿಸಲಾಗಿದೆ.
https://en.wikipedia.org/wiki/Wasserstein_metric