Robot

Embibe ಆ್ಯಪ್‌ಗೆ ಕೊನೆಯ ಕೆಲವೇ ಕೆಲವು ದಿನಗಳ ಉಚಿತ ಪ್ರವೇಶ !

ಕಲಿಕಾ ಫಲಿತಾಂಶಗಳನ್ನು ಇಂದೇ ಪ್ರವೇಶಿಸಲು ಪ್ರಾರಂಭಿಸಿ ಬಟನ್ ಕ್ಲಿಕ್ ಮಾಡಿ

ವಿದ್ಯಾರ್ಥಿಯ ಕಲಿಕೆಯ ಶೈಲಿಗಳನ್ನು ಗುರುತಿಸುವುದು

ವಿದ್ಯಾರ್ಥಿಯ ಕಲಿಕೆಯ ಶೈಲಿಗಳನ್ನು ಗುರುತಿಸುವುದು

ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಪರಿಕಲ್ಪನೆಗಳನ್ನು ಕಲಿತು ಅರ್ಥ ಮಾಡಿಕೊಳ್ಳುತ್ತಾರೆ. ಒಬ್ಬ ವಿದ್ಯಾರ್ಥಿಯು ಪರಿಕಲ್ಪನೆಯ ಬಗ್ಗೆ ಓದಲು ಮತ್ತು ಪರಿಕಲ್ಪನೆಗೆ ಸಂಬಂಧಿಸಿದ ಅಭ್ಯಾಸದ ಪ್ರಶ್ನೆಗಳನ್ನು ಪರಿಹರಿಸಲು ತೊಡಗಿಕೊಳ್ಳಬಹುದು, ಇನ್ನೊಬ್ಬ ವಿದ್ಯಾರ್ಥಿಯು ವಿಡಿಯೋವನ್ನು ವೀಕ್ಷಿಸಲು ಮತ್ತು ಅದರ ಮೇಲೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸಬಹುದು.

Embibe ವೇದಿಕೆಯಲ್ಲಿ ಸುಮಾರು 7+ ವರ್ಷಗಳಿಂದ ವಿದ್ಯಾರ್ಥಿಗಳು ವಿಷಯದ ಕುರಿತಾಗಿ ನಡೆಸಿದ ಸಂವಾದ ಮತ್ತು ಪ್ರಶ್ನೆಗಳ ದತ್ತಾಂಶ ಹೊಂದಿದ್ದೇವೆ ಮತ್ತು ನಾವು ನಿರಂತರವಾಗಿ ವಿದ್ಯಾರ್ಥಿಗಳ ನಡವಳಿಕೆಯ ಆಶ್ಚರ್ಯಕರ ಸಂಗತಿಗಳನ್ನು ತಿಳಿಯಲು ಈ ದತ್ತಾಂಶವನ್ನು ಹೆಕ್ಕಿ ತೆಗೆಯುತ್ತಿದ್ದೇವೆ. ವಿದ್ಯಾರ್ಥಿ ಕಲಿಕೆಯ ಶೈಲಿಯ ಗುರುತಿಸುವಿಕೆಯು Embibe ನ ಪರಿಣಾಮಕಾರಿ ಸಂಶೋಧನಾ ಕ್ಷೇತ್ರವಾಗಿದೆ ಮತ್ತು ನಮ್ಮ ವ್ಯಕ್ತಿವಿಶಿಷ್ಟ ಇಂಜಿನ್‍ಗೆ ತಾರ್ಕಿಕವಾಗಿ ಮುಂದಿನ ಹೆಜ್ಜೆಯಾಗಿದೆ.