EMBIBE ಸ್ಕೋರ್ ಪ್ರಮಾಣ : ಫಲಿತಾಂಶದ ಸುಧಾರಣೆಗಾಗಿ ಯಂತ್ರ ಕಲಿಕೆ
ಅಳೆಯುವಿಕೆಯು ಸುಧಾರಣೆಯ ಹೃದಯಭಾಗದಲ್ಲಿದೆ ಎಂಬುದು – ಅಳೆಯಬಹುದಾದದನ್ನು ಸುಧಾರಿಸಬಹುದು ಎಂಬುದು ನಮ್ಮ ನಂಬಿಕೆ. ವಿದ್ಯಾರ್ಥಿಗಳು ಟೆಸ್ಟ್ನಲ್ಲಿ ಗಳಿಸುವ ಸಾಮರ್ಥ್ಯವನ್ನು ಅಂಕದ ಅಳತೆಗೋಲಿನಲ್ಲಿ Embibe ಸ್ಕೋರ್ ಪ್ರಮಾಣ ಸೆರೆಹಿಡಿಯುತ್ತದೆ. Embibe ನ ಸ್ಕೋರ್ ಪ್ರಮಾಣವು ಈ ಕೆಳಕಂಡ ಗುಣಲಕ್ಷಣಗಳನ್ನು ಹೊಂದಿದೆ.
- ಪ್ರತಿಫಲನ: Embibe ನ ಸ್ಕೋರ್ ಪ್ರಮಾಣವು ವಿದ್ಯಾರ್ಥಿಯ ಕಾರ್ಯಕ್ಷಮತೆಯ ಸುಪ್ತ ಗುಣಲಕ್ಷಣಗಳ ಆಧಾರದ ಮೇಲೆ ವಿದ್ಯಾರ್ಥಿಯ ಸಾಮರ್ಥ್ಯವನ್ನು ಪ್ರತಿಬಿಂಬಿಸುವಂತಿರಬೇಕು.
- ಭವಿಷ್ಯಸೂಚಕ: ವಿದ್ಯಾರ್ಥಿಗಳ ಪ್ರಸ್ತುತ ಕಾರ್ಯಕ್ಷಮತೆಯ ಆಧಾರದ ಮೇಲೆ ಭವಿಷ್ಯ ಸೂಚ್ಯಕವಾಗಿರಬೇಕು.
- ದೃಢತೆ: ಒಂದು ಕನಿಷ್ಠ ಅಥವಾ ಉತ್ತಮ ಟೆಸ್ಟ್, ವಿದ್ಯಾರ್ಥಿಗಳು ಗಳಿಸುವ ಅಂಕಗಳ ಮೇಲೆ ತದ್ವಿರುದ್ದವಾಗಿ ಪ್ರಭಾವವನ್ನು ಬೀರಬಾರದು.
- ಸಾಮಾನ್ಯೀಕರಣ: ವಿಭಿನ್ನ ಟೆಸ್ಟ್ ತೊಂದರೆ ಮಟ್ಟಗಳಲ್ಲಿನ ಅಂಶಕ್ಕೆ ಇದನ್ನು ಸಾಮಾನ್ಯೀಕರಿಸಬೇಕು.
ಈ ಕೆಳಗಿನ ಪರಿಗಣನೆಯನ್ನು ವಿದ್ಯಾರ್ಥಿಯ ಸ್ಕೋರ್ ಪ್ರಮಾಣವನ್ನು ಲೆಕ್ಕಾಚಾರ ಮಾಡಲು ಕೆಲವು ಅಳತೆಗೋಲುಗಳನ್ನು ಬಳಸಿಕೊಂಡು Embibe ಅಲ್ಗಾರಿದಮ್ ಅನ್ನು ಭಿವೃದ್ಧಿಪಡಿಸಿದೆ:
- ಸುಪ್ತ ಗುಣಲಕ್ಷಣಗಳು: ಸುಪ್ತ ಗುಣಲಕ್ಷಣಗಳು ಅಥವಾ ಲಕ್ಷಣಗಳು Embibe ಸ್ಕೋರ್ ಪ್ರಮಾಣವು ವಿದ್ಯಾರ್ಥಿಯ ಅಂತರ್ಗತ ಸಾಮರ್ಥ್ಯದ ಮೇಲೆ ಪ್ರತಿಫಲನಗೊಳ್ಳುತ್ತದೆ. ಈ ಸುಪ್ತ ಗುಣಲಕ್ಷಣಗಳು ಪ್ರಯತ್ನದ ಮಟ್ಟದ ಘಟನೆಯ ದತ್ತಾಂಶದಿಂದ ಪಡೆಯಲಾಗಿದೆ. ಅಂದರೆ ವಿದ್ಯಾರ್ಥಿಗಳು ನಮ್ಮ ವೇದಿಕೆಯಲ್ಲಿ ಟೆಸ್ಟ್ ತೆಗೆದುಕೊಳ್ಳುವಾಗ ಮತ್ತು ಅಭ್ಯಾಸ ಮಾಡುವ ಅವಧಿಯಿಂದ ವಿವರಿಸಲಾಗಿದೆ.
- ಉತ್ತಮ ಸೆಷನ್ಗಳು: N ಅನ್ನು ಉತ್ತಮ ಟೆಸ್ಟ್ ಮತ್ತು /ಅಥವಾ ಅಭ್ಯಾಸದ ಅವಧಿಗಳು ಎಂದು ಪರಿಗಣಿಸಿ, Embibe ನ ಸ್ಕೋರ್ ಪ್ರಮಾಣ ಪ್ರತಿಫಲನಗೊಳಿಸಲಾಗುತ್ತದೆ. ಇಲ್ಲಿ N ಬದಲಾಯಿಸಬಹುದು. ವಿದ್ಯಾರ್ಥಿಯ ಕಾರ್ಯಕ್ಷಮತೆಯಲ್ಲಿ ದೃಢವಾದ ಮುಖ್ಯ ಅಂಶಗಳನ್ನು ತೆಗೆದುಕೊಳ್ಳಲಾಗುವುದು. ಮುಂದೆ, ಹರಾತ್ಮಕ ಶ್ರೇಢಿಯನ್ನು ಹೆಚ್ಚಿನ ಸ್ಕೋರಿಂಗ್ ಸೆಷನ್ಗಳಿಂದ ಕಡಿಮೆ ಸ್ಕೋರಿಂಗ್ ಸೆಷನ್ಗಳಿಗೆ ಸವೆಸಿದ ಪ್ರಾಮುಖ್ಯತೆಯ ತೂಕವನ್ನು ಅಳೆಯಲು ಬಳಸಲಾಗುತ್ತದೆ.
- ಇತ್ತೀಚಿನ ಸೆಷನ್ಗಳು: ಕೊನೆಯ K ಟೆಸ್ಟ್ ಗಳ ಚಲಿಸುವ ವಿಂಡೋವನ್ನು ಪರಿಗಣಿಸಿ ಮತ್ತು/ಅಥವಾ ಅಭ್ಯಾಸದ ಸೆಷನ್ನ Embibe ಸ್ಕೋರ್ ಪ್ರಮಾಣವನ್ನು ಸೂಚಿಸುತ್ತದೆ. ಅದೂ ಅಲ್ಲದೇ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಒಂದು ವೇಳೆ ಪ್ರತೀ ತರಗತಿಯ ಅವಧಿಯ ನಂತರ ಸಾಮಾನ್ಯ ತರಗತಿಯ ಅವಧಿಯ ಸ್ಕೋರ್ ಮೇಲ್ಮುಖ ಪ್ರವೃತ್ತಿಯನ್ನು ತೋರಿಸಿದರೆ, ವಿದ್ಯಾರ್ಥಿಯು ಭವಿಷ್ಯತ್ತಿನಲ್ಲೂ ಚೆನ್ನಾಗಿ ನಿಭಾಯಿಸುತ್ತಾನೆ ಎಂಬುದಾಗಿದೆ.
Embibe ಸ್ಕೋರ್ ಪ್ರಮಾಣವು ಮೂರು ಲಂಬ ರೇಖೆಯಲ್ಲಿ ಪ್ರದರ್ಶಿಸಲಾಗಿದೆ – ಶೈಕ್ಷಣಿಕ, ವರ್ತನೆ ಮತ್ತು ಟೆಸ್ಟ್-ತೆಗೆದುಕೊಳ್ಳುವುದು. ಈ ವಿಭಿನ್ನ ಅಕ್ಷಗಳು ಶೈಕ್ಷಣಿಕ ಸಾಮರ್ಥ್ಯ, ನಡವಳಿಕೆಯ ಪ್ರಮಾಣ ಮತ್ತು ಟೆಸ್ಟ್ ಅನ್ನು ತೆಗೆದುಕೊಳ್ಳುವ ಕೌಶಲ್ಯದ ಮೇಲೆ ವಿದ್ಯಾರ್ಥಿಯ ಸುಪ್ತ ಗುಣಲಕ್ಷಣಗಳ ಗುಂಪುಗಳನ್ನು ಸೆರೆಹಿಡಿಯುತ್ತವೆ.
Embibe ಸ್ಕೋರ್ ಪ್ರಮಾಣ ~ ಶೈಕ್ಷಣಿಕ ಪ್ರಮಾಣ + ನಡವಳಿಕೆಯ ಪ್ರಮಾಣ + ಟೆಸ್ಟ್ ತೆಗೆದುಕೊಳ್ಳುವ ಪ್ರಮಾಣ
ಈ ಲೇಖನದಲ್ಲಿ ಅಳವಡಿಸಿರುವ ಅಧ್ಯಯನದಲ್ಲಿ, ನಾವು ಹಲವು ಸಾವಿರ ಶೈಕ್ಷಣಿಕ ಸೆಷನ್ಗಳಲ್ಲಿ ಸಮರ್ಪಕವಾದ ಪರೀಕ್ಷಾ ಸೆಷನ್ಗಳನ್ನು ಪರಿಗಣಿಸಿದ್ದೇವೆ. ಒಬ್ಬ ವಿದ್ಯಾರ್ಥಿಯು ಕೆಲವು ಕನಿಷ್ಠ ಪ್ರಾರಂಭ ಸಮಯವನ್ನು ಕಳೆದಿದ್ದರೆ ಮತ್ತು ಕೆಲವು ಕನಿಷ್ಠ ಸಂಖ್ಯೆಯ ಪ್ರಶ್ನೆಗಳಿಗೆ ಪ್ರಯತ್ನಿಸಿದರೆ ಮಾತ್ರ ಪರೀಕ್ಷಾ ಸೆಷನ್ ಸಮರ್ಪಕವೆಂದು ಪರಿಗಣಿಸಲಾಗುತ್ತದೆ.
ಶೈಕ್ಷಣಿಕ ಪ್ರಮಾಣವು ವಿಷಯದ ಜ್ಞಾನಕ್ಕೆ ಸಂಬಂಧಿಸಿದೆ. ಗರಿಷ್ಟ ಮಟ್ಟದ ವೈಯುಕ್ತಿಕ ಕಲಿಕೆಯ ಪ್ರತಿಕ್ರಿಯೆಗೆ ಅನುಗುಣವಾಗಿ ವಿದ್ಯಾರ್ಥಿಯು ಅವರ ಶೈಕ್ಷಣಿಕ ಪ್ರಮಾಣವನ್ನು ಸತತ ಟೆಸ್ಟ್ ತೆಗೆದುಕೊಳ್ಳುವುದರ ಮೂಲಕ ಅಭಿವೃದ್ಧಿ ಪಡಿಸಿಕೊಳ್ಳಬಹುದು – ಇದು ಒಂದು ರೀತಿಯಲ್ಲಿ ಶೈಕ್ಷಣಿಕ ಶಿಫಾರಸು. ವಿದ್ಯಾರ್ಥಿಗಳ ಶೈಕ್ಷಣಿಕ ದೌರ್ಬಲ್ಯಗಳಿಗೆ ಅನುಗುಣವಾಗಿ ಹೆಚ್ಚಿನ ಪ್ರಭಾವದ ಪ್ರಶ್ನೆಗಳನ್ನು ಹೊಂದಿರುವ ವೈಯಕ್ತೀಕರಿಸಿದ ಪ್ರ್ಯಾಕ್ಟೀಸ್ಗೆ ಶೈಕ್ಷಣಿಕ ಪ್ಯಾಕ್ ಅನ್ನು ಶಿಫಾರಸು ಮಾಡಲಾಗಿದೆ. ಇದರ ಪರಿಣಾಮವಾಗಿ ಶೈಕ್ಷಣಿಕ ಪ್ರಮಾಣದಲ್ಲಿ ಪ್ರಗತಿಯನ್ನು ನೀವು ಚಿತ್ರ 1 ರಲ್ಲಿ ನೋಡಬಹುದು.
ಚಿತ್ರ 1: Embibe ಸ್ಕೋರ್ ಪ್ರಮಾಣ Vs ಶೈಕ್ಷಣಿಕ ಪ್ರಮಾಣದ ಪ್ರಗತಿ
ನಡವಳಿಕೆಯ ಪ್ರಮಾಣ ವಿದ್ಯಾರ್ಥಿಯ ಉದ್ದೇಶಕ್ಕೆ ಸಂಬಂಧಿಸಿದೆ. ಉತ್ತಮ ಅಂಕಗಳನ್ನು ಗಳಿಸಲು ಎಷ್ಟು ಪ್ರೋತ್ಸಾಹ, ಏಕಾಗ್ರತೆ ಮತ್ತು ಬದ್ಧತೆಯನ್ನು ಒಳಗೊಂಡಿದೆ. ಬಳಕೆದಾರರ ವರ್ತನೆಯ ಲಕ್ಷಣಗಳನ್ನು ಮೊದಲು ನಿರ್ಧರಿಸುವ ಮೂಲಕ ಮತ್ತು ನಂತರ ಏರಿಕೆಯ ಪ್ರಮಾಣದಲ್ಲಿ ಸುಧಾರಣೆಗಾಗಿ ಪ್ರಗತಿಪರ ಗುರಿಗಳನ್ನು ಹೊಂದಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ವರ್ತನೆಯ ಪ್ರಮಾಣವನ್ನು ಸಾಧಿಸಲು Embibe ಸಹಾಯ ಮಾಡುತ್ತದೆ [1]. ವಿದ್ಯಾರ್ಥಿಯು ತನ್ನ ಸುಪ್ತ ವರ್ತನೆಯ ಉದ್ದೇಶದಿಂದ ಎಲ್ಲಿ ಕೊರತೆಯಿದೆ ಎಂದು ತಿಳಿದ ಬಳಿಕ, ಅವನು ಅದರ ಬಗ್ಗೆ ಜಾಗೃತನಾಗಿ ತನ್ನ ವರ್ತನೆಯ ಪ್ರಮಾಣವನ್ನು ಸುಧಾರಿಸಬಹುದು. ಚಿತ್ರ 2 ರಲ್ಲಿ ತೋರಿಸಿದಂತೆ, ಆರಂಭದಲ್ಲಿ ವರ್ತನೆಯ ಪ್ರಗತಿ ತುಂಬಾ ವೇಗವಾಗಿ ಏರುತ್ತದೆ. ತದನಂತರ, ನಿಧಾನವಾಗುತ್ತದೆ, ಆದರೆ ಪ್ರತಿ ಕ್ರಮಾನುಗತ ಟೆಸ್ಟ್ ನಂತರ ದೃಢತೆಯಲ್ಲಿ ಏರಿಕೆ ಕಾಣಬಹದು.
ಚಿತ್ರ 2: Embibe ಸ್ಕೋರ್ ಪ್ರಮಾಣ Vs ವರ್ತನೆಯ ಪ್ರಮಾಣದಲ್ಲಿ ಪ್ರಗತಿ
ಟೆಸ್ಟ್ ತೆಗೆದುಕೊಳ್ಳುವ ಪ್ರಮಾಣ ಸಮಯ ನಿರ್ವಹಣೆಯೊಂದಿಗೆ ವ್ಯವಹರಿಸುತ್ತದೆ ಮತ್ತು ಪ್ರಶ್ನೆಗಳ ಆದ್ಯತೆಯನ್ನು ಪರೀಕ್ಷಾ ಸೆಷನ್ನಲ್ಲಿ ಉತ್ತರಿಸಬೇಕು. ಟೆಸ್ಟ್ ತೆಗೆದುಕೊಳ್ಳುವ ಪ್ರಮಾಣ ಹೆಚ್ಚಿದಂತೆ ನೈಸರ್ಗಿಕವಾಗಿ Embibe ಸ್ಕೋರ್ ಪ್ರಮಾಣದಲ್ಲಿ ಏರಿಕೆ ಕಾಣುತ್ತದೆ.ಟೆಸ್ಟ್ ತೆಗೆದುಕೊಳ್ಳುವ ಪ್ರಮಾಣದ ತಂತ್ರಗಾರಿಕೆಯ ಏರಿಕೆಯ ಪರಿಣಾಮವಾಗಿ ಕಲಿಕೆಯ ಫಲಿತಾಂಶದಲ್ಲಿ ಉತ್ತಮ ರೀತಿಯಲ್ಲಿ ದಕ್ಕುತ್ತದೆ. ಚಿತ್ರ 3 ರಲ್ಲಿ ತೋರಿಸಿದಂತೆ, ಆರಂಭದಲ್ಲಿ ನಿಧಾನವಾಗಿದ್ದು ಟೆಸ್ಟ್ ತೆಗೆದುಕೊಳ್ಳುವ ಪ್ರಮಾಣ ಆನಂತರ ಗರಿಷ್ಠ ಮಟ್ಟದಲ್ಲಿದೆ. ಆದರೆ ದೃಢವಾಗಿದೆ, ಉತ್ತಮ ಬೆಳವಣಿಗೆಯಾಗಿದೆ.
ಚಿತ್ರ 3: Embibe ಸ್ಕೋರ್ ಪ್ರಮಾಣ Vs ಟೆಸ್ಟ್ ತೆಗೆದುಕೊಳ್ಳುವ ಪ್ರಮಾಣದ ಪ್ರಗತಿ
Embibe ನ ಸ್ಕೋರ್ ಪ್ರಮಾಣವನ್ನು ಶೈಕ್ಷಣಿಕ, ವರ್ತನೆ ಮತ್ತು ಟೆಸ್ಟ್ ತೆಗೆದುಕೊಳ್ಳುವ ಪ್ರಮಾಣಕ್ಕೆ ವಿಂಗಡಿಸಿದ ನಂತರ ಉತ್ತಮ ರೀತಿಯಲ್ಲಿ ಕಲಿಕಾ ಫಲಿತಾಂಶವನ್ನು ಬಹಳ ಪರಿಣಾಮಕಾರಿಯಾಗಿ ಸಾಧ್ಯವಾಗಿಸುತ್ತದೆ.
ಉಲ್ಲೇಖಗಳು:
ಫಾಲ್ಡು ಕೆ., ಥಾಮಸ್ ಎ., ಡೊಂಡಾ ಸಿ. ಮತ್ತು ಅವಸ್ತಿ ಎ., “ಬಿಹೇವಿಯರಲ್ ನಡ್ಜಸ್ ದಟ್ ವರ್ಕ್ ಫಾರ್ ಲರ್ನಿಂಗ್ ಔಟ್ಕಮ್ಸ್”, ಡೇಟಾ ಸೈನ್ಸ್ ಲ್ಯಾಬ್, Embibe, https://www.embibe.com/ai-detail?id=2, 2016.