ಟೆಸ್ಟ್ಗಳು ಕೇವಲ ಮೌಲ್ಯಮಾಪನ ಮಾಡುವುದಿಲ್ಲ, ಜತೆಗೆ ಜ್ಞಾನ ನಿರ್ಣಯಗೊಳಿಸುತ್ತವೆ!
ಕಲಿಕಾ ಅಂತರಗಳನ್ನು ಅರ್ಥಮಾಡಿಕೊಳ್ಳುವುದರ ಹೊರತಾಗಿ, ನಮ್ಮ ಟೆಸ್ಟ್ಗಳು ವಿದ್ಯಾರ್ಥಿಯ ಕಾರ್ಯಕ್ಷಮತೆಗೆ ನಿರ್ಣಾಯಕವಾಗಿರುವ ಟೆಸ್ಟ್-ತೆಗೆದುಕೊಳ್ಳುವ ನಡವಳಿಕೆಯನ್ನು ಕೂಡ ಪತ್ತೆ ಮಾಡುತ್ತವೆ.
ಕಲಿಕಾ ಅಂತರಗಳನ್ನು ಅರ್ಥಮಾಡಿಕೊಳ್ಳುವುದರ ಹೊರತಾಗಿ, ನಮ್ಮ ಟೆಸ್ಟ್ಗಳು ವಿದ್ಯಾರ್ಥಿಯ ಕಾರ್ಯಕ್ಷಮತೆಗೆ ನಿರ್ಣಾಯಕವಾಗಿರುವ ಟೆಸ್ಟ್-ತೆಗೆದುಕೊಳ್ಳುವ ನಡವಳಿಕೆಯನ್ನು ಕೂಡ ಪತ್ತೆ ಮಾಡುತ್ತವೆ.
Embibe ನ ‘ಟೆಸ್ಟ್’ ಸಂಪೂರ್ಣ ಪಠ್ಯಕ್ರಮ ಟೆಸ್ಟ್ಗಳು, ಅಧ್ಯಾಯ ಟೆಸ್ಟ್ಗಳು, ವಿಷಯ ಟೆಸ್ಟ್ಗಳು, ತ್ವರಿತ ಟೆಸ್ಟ್ಗಳು ಮತ್ತು ಬಳಕೆದಾರರು ರಚಿಸಿದ ಟೆಸ್ಟ್ಗಳು ಸೇರಿದಂತೆ, ವಿವಿಧ ಪ್ರಕಾರಗಳ 21,000+ ಟೆಸ್ಟ್ಗಳನ್ನು ಒಳಗೊಂಡಿದೆ. ಕಲಿಕಾ ಪಯಣದ ಮೊದಲು ಮತ್ತು ನಂತರದಲ್ಲಿ, ಈ ಟೆಸ್ಟ್ಗಳು ಸೂಕ್ಷ್ಮ ಅಥವಾ ಸ್ಥೂಲ ಪತ್ತೆಹಚ್ಚುವ ಕಾರ್ಯನಿರ್ವಹಿಸುತ್ತವೆ. ಅನೇಕ ವರ್ಷಗಳಲ್ಲಿ Embibe, ಅಸಂಖ್ಯಾತ ಪ್ರಶ್ನಾ ವಿಚಾರಗಳನ್ನು ಕುರಿತು ಸಂಗ್ರಹಿಸಿದ್ದು, ಅದಕ್ಕಾಗಿ ಶತಕೋಟಿ ಪ್ರಯತ್ನವನ್ನು ಹಾಕಿ ದತ್ತಾಂಶವನ್ನು ಕಲೆಹಾಕಿದೆ. ಹಾಗಾಗಿ, ಯಾವುದೇ ಬಳಕೆದಾರರಿಗೆ ಒದಗಿಸಲಾದ ಟೆಸ್ಟ್ಗಳ ನಿಖರತೆ ಮತ್ತು ಗುಣಮಟ್ಟವನ್ನು ನಾವು ಖಚಿತಪಡಿಸುತ್ತೇವೆ. ಹಿಂದಿನ ವರ್ಷದ ಟೆಸ್ಟ್ಗಳ ಮೂಲಕ ಅಲ್ಗಾರಿದಮ್ಗಳನ್ನು ಮಾನದಂಡವಾಗಿಸುವ ಮೂಲಕ ಪ್ರತಿ ಗುರಿ ಮತ್ತು ಟೆಸ್ಟ್ನಲ್ಲಿರುವ ಎಲ್ಲಾ ಟೆಸ್ಟ್ಗಳ ಮಾಪನಾಂಕವನ್ನು ನಿರ್ಣಯಿಸಲಾಗುತ್ತದೆ.
‘ಟೆಸ್ಟ್’ ನ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:
ಎಲ್ಲಾ ಪ್ರಮುಖ ಫೀಚರ್ಗಳ ಸಹಾಯದಿಂದ, ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಪ್ರತಿಯೊಬ್ಬ ಪರೀಕ್ಷಾರ್ಥಿಗಳ ನಿಖರತೆ ಮತ್ತು ದಕ್ಷತೆಯನ್ನು ಸುಧಾರಿಸಲು Embibe 21 ನೇ ಶತಮಾನದ ವಿಜ್ಞಾನವನ್ನು ತೀವ್ರವಾಗಿ ಬಳಸುತ್ತದೆ.
ಇದಲ್ಲದೆ, ಪೇರೆಂಟ್ ಆ್ಯಪ್ ಮೂಲಕ, ಪೋಷಕರು ಕೂಡ ಯಾವುದೇ ನಿರ್ದಿಷ್ಟ ಗುರಿಗಾಗಿ ತಮ್ಮ ಮಗುವಿಗೆ ಟೆಸ್ಟ್ಗಳನ್ನು ರಚಿಸಬಹುದು. ಮಗುವಿನ ಶಿಕ್ಷಣದ ಮೇಲೆ ಪೂರ್ಣ ನಿಗಾ ಇಡಬಹುದು.
Embibe ವಿದ್ಯಾರ್ಥಿಗಳಿಗೆ ಹಲವು ರೀತಿಯ ಟೆಸ್ಟ್ ಆಯ್ಕೆಗಳನ್ನು ಒದಗಿಸುತ್ತದೆ:
ಈ ಟೆಸ್ಟ್ಗಳನ್ನು ತೆಗೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪ್ರತಿ ಅಧ್ಯಾಯದಲ್ಲಿ ತಮ್ಮಲ್ಲಡಗಿರುವ ಸಾಮರ್ಥ್ಯವನ್ನು ಪರಿಶೀಲಿಸಬಹುದು.
ಮೇಲಿನವುಗಳ ಹೊರತಾಗಿ, Embibe ವಿಶೇಷವಾಗಿ ಪ್ರವೇಶ/ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕೂಡ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಪ್ರಶೆಪತ್ರಿಕೆಗಳನ್ನು ಮತ್ತು ವಿಭಾಗವಾರು ಟೆಸ್ಟ್ಗಳನ್ನು ಪೂರೈಸುತ್ತದೆ.
Embibe ನ ‘ವೈಯಕ್ತಿಕ ಸಾಧನೆಯ ಪಯಣ’ ದ ಮೂಲಕ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಲ್ಲಿ ಅದ್ಭುತವಾದ ಫಲಿತಾಂಶಗಳನ್ನು ಸಾಧಿಸಬಹುದು. ಇದು Embibe ನ ಒಂದು ಪ್ರೀಮಿಯಂ ಫೀಚರ್ ಆಗಿದ್ದು, ಅದು ವಿದ್ಯಾರ್ಥಿಗಳಿಗೆ ಅವರ ಅಗತ್ಯಗಳಿಗೆ ಅನುಗುಣವಾಗಿ ಒಂದು ಮಾರ್ಗದರ್ಶಿ ಪ್ರಯಾಣವನ್ನು ನೀಡುತ್ತದೆ. ಅವರು ಸುಧಾರಿಸಲು ಬಯಸುವ ಪರಿಕಲ್ಪನೆಗಳನ್ನು ಕುರಿತು ಅಭ್ಯಾಸದ ಪ್ರಶ್ನೆಗಳು ಮತ್ತು ವಿಡಿಯೋಗಳನ್ನು ಒಳಗೊಂಡಿರುವ ಕೌಶಲ್ಯದ-ಜೋಡಿಗಳನ್ನು ನೀಡುತ್ತದೆ.
Embibe ನಲ್ಲಿ ನುರಿತ ಶಿಕ್ಷಕರು ಕಠಿಣವಾದ ಪ್ರಶ್ನೆಗಳಿಗೆ ಸವಿವರವಾದ ಉತ್ತರಗಳನ್ನು ರಚಿಸಿದ್ದಾರೆ. ವಿದ್ಯಾರ್ಥಿಗಳು ಈ ಅಭ್ಯಾಸದ ಪ್ರಶ್ನೆಪತ್ರಿಕೆಗಳನ್ನು ಅಧ್ಯಾಯವಾರು ಅಥವಾ ಟಾಪಿಕ್ವಾರು ‘ಪುಸ್ತಕಗಳು: ವಿಡಿಯೋಗಳು ಮತ್ತು ಪರಿಹಾರಗಳ ಸಹಿತ’ ಮೂಲಕ ಪ್ರವೇಶಿಸಬಹುದು. ‘ಪ್ರ್ಯಾಕ್ಟೀಸ್’ ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಕ್ರಮದಲ್ಲಿನ ಟಾಪಿಕ್ಗಳು ಮತ್ತು ಪರಿಕಲ್ಪನೆಗಳನ್ನು ಕುರಿತು ಸಾಕಷ್ಟು ಸಂಖ್ಯೆಯ ಪ್ರಶ್ನೆಗಳನ್ನು ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಅಭ್ಯಾಸ ಮಾಡಲು ಒದಗಿಸುತ್ತದೆ.
Embibe ವಿದ್ಯಾರ್ಥಿಗಳು ತೆಗೆದುಕೊಳ್ಳುವ ಟೆಸ್ಟ್ಗಳಿಗೆ ಕೂಡ ವಿವಿಧ ರೀತಿಯ ವಿಶ್ಲೇಷಣೆಯನ್ನು ಸಹ ಒದಗಿಸುತ್ತದೆ:
ಒಟ್ಟಾರೆ ವಿಶ್ಲೇಷಣೆ: ಒಬ್ಬ ವಿದ್ಯಾರ್ಥಿಯು ಟೆಸ್ಟ್ ಅನ್ನು ಹೇಗೆ ಪ್ರಯತ್ನಿಸುತ್ತಾನೆ ಎಂಬುದರ ಆಧಾರದ ಮೇಲೆ, ಆತನ ನಡವಳಿಕೆಗಳನ್ನು ನಿರ್ಧರಿಸಬಹುದು. ಉದಾ; ಅಜಾಗರೂಕತೆ, ವ್ಯವಧಾನ ರಹಿತತೆ, ಸರಿಯಾದ ಹಾದಿಯಲ್ಲಿ ಇತ್ಯಾದಿಗಳ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ವರ್ತನೆಯೂ ಬದಲಾಗಬಹುದು.
ಪ್ರಶ್ನೆವಾರು ವಿಶ್ಲೇಷಣೆ: ಒಬ್ಬ ವಿದ್ಯಾರ್ಥಿಯು ಆರು ವಿಭಾಗಗಳ ಅಡಿಯಲ್ಲಿ ಪ್ರಯತ್ನಿಸಿದ ಪ್ರತಿಯೊಂದು ಪ್ರಶ್ನೆಯ ವಿಮರ್ಶೆಯನ್ನು ಈ ವಿಶ್ಲೇಷಣೆಯು ಒದಗಿಸುತ್ತದೆ, ಅವುಗಳೆಂದರೆ, ಅತಿ ವೇಗ-ತಪ್ಪು ಉತ್ತರ, ನಿಖರ ಪ್ರಯತ್ನ, ಹೆಚ್ಚು ಸಮಯ- ತಪ್ಪು ಉತ್ತರ, ಹೆಚ್ಚು ಸಮಯ -ಸರಿ ಉತ್ತರ, ವ್ಯರ್ಥ ಪ್ರಯತ್ನ, ತಪ್ಪು ಪ್ರಯತ್ನ ಮತ್ತು ಪ್ರಯತ್ನಿಸಲಾಗಿಲ್ಲ.
ಕೌಶಲ್ಯವಾರು ವಿಶ್ಲೇಷಣೆ: ಅನ್ವಯ, ಗ್ರಹಣ ಶಕ್ತಿ, ಉರು ಹೊಡೆಯುವಿಕೆ ಮತ್ತು ವಿಶ್ಲೇಷಣೆಯಂತಹ ವಿವಿಧ ರೀತಿಗಳಲ್ಲಿ ಹೊಸತನದಿಂದ ವಿದ್ಯಾರ್ಥಿಗಳಲ್ಲಿ ಒಡಮೂಡುವ ಹಂತಗಳ ಅಡಿಯಲ್ಲಿ ಪ್ರಶ್ನೆಗಳನ್ನು ವರ್ಗೀಕರಿಸಲಾಗಿದೆ. ವಿದ್ಯಾರ್ಥಿಯ ಪ್ರಯತ್ನದ ಪರಿಣಾಮಕಾರಿತ್ವವನ್ನು ಆಧರಿಸಿ, ಅವರ ಕೌಶಲ್ಯ ಮಟ್ಟದ ವಿಶ್ಲೇಷಣೆಯನ್ನು ಒದಗಿಸಲಾಗುತ್ತದೆ.