ಪರಿಕಲ್ಪನೆಗಳನ್ನು ಗ್ರಹಿಸಲು ವಿದ್ಯಾರ್ಥಿಯ ಸಾಮರ್ಥ್ಯವನ್ನು ಬೆಂಬಲಿಸಲು ಸೂಚನಾ ಚೌಕಟ್ಟನ್ನು ಒದಗಿಸುವ ಅಗತ್ಯವನ್ನು ಮೌಲ್ಯಮಾಪನ ಮಾಡಲು ದತ್ತಾಂಶವನ್ನು ನಿಯಂತ್ರಿಸುವುದು.

ಬೋಧನಾ ಚೌಕಟ್ಟು ಎನ್ನುವುದು ಪ್ರತಿ ವಿದ್ಯಾರ್ಥಿಗೆ ನಿರ್ದಿಷ್ಟವಾಗಿ ಸರಿಹೊಂದಿಸಲಾದ ಮಧ್ಯಪ್ರವೇಶ ಮತ್ತು ಬೆಂಬಲವನ್ನು ಒದಗಿಸಲು ವಿದ್ಯಾರ್ಥಿ-ಕೇಂದ್ರಿತ ವಿಧಾನವಾಗಿದೆ.

ಎಲ್ಲಾ ವಿದ್ಯಾರ್ಥಿಗಳು ಒಬ್ಬರಿಗಿಂತ ಮತ್ತೊಬ್ಬರು ವಿಭಿನ್ನವಾಗಿರುತ್ತಾರೆ. ಅವರು ಕಲಿಕೆಯಲ್ಲಿ ವಿಭಿನ್ನ ಗುರಿಗಳನ್ನು ಹೊಂದಿರುವುದು ಮಾತ್ರವಲ್ಲ, ಒಬ್ಬೊಬ್ಬರ ಸಾಮರ್ಥ್ಯ ಮತ್ತು ದೌರ್ಬಲ್ಯಗಳಲ್ಲಿಯೂ ಸಂಪೂರ್ಣ ಭಿನ್ನತೆಯನ್ನು ನಾವು ಗಮನಿಸಬಹುದಾಗಿದೆ. ಪರಿಣಾಮಕಾರಿ ಕಲಿಕೆಗಾಗಿ ವಿದ್ಯಾರ್ಥಿಯ ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಬೇಕಾದ ಅಗತ್ಯವಿರುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ ವ್ಯಕ್ತಿಗತವಾಗಿ ನಿರ್ದಿಷ್ಟ ರೂಪದಲ್ಲಿ ಹೊಂದಿಸಿದ ವೈಯಕ್ತಿಕ ಹಸ್ತಕ್ಷೇಪ ಮತ್ತು ಬೆಂಬಲದ ಅಗತ್ಯವಿರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಲಿಕಾ ಪ್ರಕ್ರಿಯೆ ಎಂಬುದು ಯಾವಾಗಲೂ ಶಿಕ್ಷಕ-ಕೇಂದ್ರಿತವಾಗಿರಬಾರದು ಮಿಗಿಲಾಗಿ ವಿದ್ಯಾರ್ಥಿ-ಕೇಂದ್ರಿತವಾಗಿರಬೇಕು. ಬೋಧಕರಿಂದ ಕಲಿಯುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲವನ್ನು ಒದಗಿಸುವ ಈ ನಿರ್ದಿಷ್ಟ ವಿಧಾನವನ್ನೇ ಇನ್ಸ್ಟ್ರಕ್ಷನಲ್ ಸ್ಕ್ಯಾಫೋಲ್ಡಿಂಗ್ ಎಂದು ಕರೆಯಲಾಗುತ್ತದೆ.

ಇನ್ಸ್ಟ್ರಕ್ಷನಲ್ ಸ್ಕ್ಯಾಫೋಲ್ಡಿಂಗ್ ಎನ್ನುವುದು ಒಂದು ವಿಧಾನವಾಗಿದ್ದು, ಅದರ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಸುಧಾರಿಸಲು ಮತ್ತು ನಿಗದಿತ ಕಾರ್ಯಗಳಲ್ಲಿ ಪಾಂಡಿತ್ಯವನ್ನು ಸಾಧಿಸಲು ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳು ಹೊಸ ಕೌಶಲ್ಯಗಳನ್ನು ಕಲಿಯುತ್ತಾ ಹೋದಂತೆ, ಇದನ್ನು ಶಿಕ್ಷಕರು ವಿದ್ಯಾರ್ಥಿಗಳ ಪರಿಣತಿ ಮತ್ತು ಜ್ಞಾನವನ್ನು ಬೆಳೆಸುವ ಮೂಲಕ ಇದನ್ನು ಮಾಡುತ್ತಾರೆ. ನೀಡಿದ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಸುಧಾರಣೆಗಳನ್ನು ತೋರಿಸಲು ಪ್ರಾರಂಭಿಸಿದಾಗ,  ಆ ಬೆಂಬಲಗಳನ್ನು ಕ್ರಮೇಣ ಕಡಿತಗೊಳಿಸಲಾಗುತ್ತದೆ. ಸ್ಕ್ಯಾಫೋಲ್ಡ್ ಕಲಿಕಾ ವಾತಾವರಣದಲ್ಲಿ, ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಲು, ಫೀಡ್‌ಬ್ಯಾಕ್ ನೀಡಲು ಮತ್ತು ಹೊಸ ವಿಷಯವನ್ನು ಕಲಿಯಲು ತಮ್ಮ ಗೆಳೆಯರಿಗೆ ಸಹಾಯ ಮಾಡಲು ಮುಕ್ತರಾಗಿರುತ್ತಾರೆ. ಸ್ಕ್ಯಾಫೋಲ್ಡ್ ಕಲಿಕೆಯ ಒಂದು ಮುಖ್ಯ ಪ್ರಯೋಜನವೆಂದರೆ ಅದು ಬೆಂಬಲಿತ ಕಲಿಕಾ ಸ್ಥಿತಿಯನ್ನು ಒದಗಿಸುತ್ತದೆ. ವಿದ್ಯಾರ್ಥಿಯು ನಿರ್ದಿಷ್ಟ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಶಿಕ್ಷಕರು ಗುರುತಿಸಿದಾಗ ಸ್ಕ್ಯಾಫೋಲ್ಡ್ ಅನ್ನು ಕಾರ್ಯಗತಗೊಳಿಸುವ ಅಗತ್ಯ ಉಂಟಾಗುತ್ತದೆ.

ಕಲಿಕೆಯ ಮಿತಿಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಒಂದು ಹೊಸ ಕೌಶಲ್ಯವನ್ನು ಕಲಿಸಿದಾಗ, ಅವರು ಆ ಕಲಿಕಾ ಪ್ರಕ್ರಿಯೆಯಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುವುದಿಲ್ಲ. ಬದಲಾಗಿ, ಅವರು ಕೇವಲ ಕಾರ್ಯ್ತಂತ್ರಗಳನ್ನು ಮಾಡುತ್ತಾರೆ. ಈ ವಿದ್ಯಮಾನವನ್ನು ಗಮನಿಸಲಾಗಿದೆ, ಏಕೆಂದರೆ, ಸಾಮಾನ್ಯವಾಗಿ ಕಲಿಕಾ ಮಿತಿಗಳಿರುವ ವಿದ್ಯಾರ್ಥಿಗಳು ಪ್ರತಿಯೊಂದು ಹಂತದಲ್ಲೂ ಅವರು ಅಡಕವಾಗಿರುವ ಪರಿಕಲ್ಪನೆಗಳನ್ನು ಗಮನಿಸಿ ಅರ್ಥಮಾಡಿಕೊಳ್ಳುವುದಿಲ್ಲ. ಇಂತಹ ಸನ್ನಿವೇಶಗಳನ್ನು ನಿವಾರಿಸಲೆಂದೇ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕು. ತಮ್ಮ ನಿರ್ದಿಷ್ಟ ಕಾರ್ಯವನ್ನು ಕುರಿತಂತೆ ವಿದ್ಯಾರ್ಥಿಗಳಿಂದ ಮಾಡಿಸಲ್ಪಡುವ ಸ್ವತಂತ್ರ ಪ್ರದರ್ಶನವು ಮಾರ್ಗದರ್ಶಕರು ವಿದ್ಯಾರ್ಥಿಗಳು ಕಲಿಯುತ್ತಾರೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. 

ಇನ್ಸ್ಟ್ರಕ್ಷನಲ್ ಸ್ಕ್ಯಾಫೋಲ್ಡಿಂಗ್ ಪರಿಣಾಮಕಾರಿ ಕಲಿಕೆಯನ್ನು ಸುಗಮಗೊಳಿಸುವ ಮೂರು ಅಗತ್ಯ ಲಕ್ಷಣಗಳನ್ನು ಹೊಂದಿದೆ:

  1. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಹಕರಿಸುವ ರೀತಿಯ ಸಂವಾದಗಳಿರಬೇಕು. ಪರಸ್ಪರ ಸಂವಹನದ ಕ್ರಿಯೆಗಳು ಶಿಕ್ಷಕರಿಗೆ ವಿದ್ಯಾರ್ಥಿಯನ್ನು ಮತ್ತು ಅವರ ಜ್ಞಾನ ಮತ್ತು ಕೌಶಲ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. 
  1. ವಿದ್ಯಾರ್ಥಿಯ ಪ್ರಾಕ್ಸಿಮಲ್ ಬೆಳವಣಿಗೆ ವಲಯದಲ್ಲಿ ಕಲಿಕೆಯು ಸಂಭವಿಸಬೇಕು, ಅಲ್ಲಿ ವಿದ್ಯಾರ್ಥಿಯ ಪ್ರಸ್ತುತ ಜ್ಞಾನದ ಮಟ್ಟವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿರುತ್ತದೆ. ವಿದ್ಯಾರ್ಥಿಯ ಪ್ರಸ್ತುತ ಅರಿವಿನ, ಭಾವನಾತ್ಮಕ ಮತ್ತು ಇಚ್ಛಾಶಕ್ತಿಯ ಸ್ಥಿತಿಯನ್ನು ಆಧರಿಸಿ, ಈ ವ್ಯವಸ್ಥೆಯು ವಿದ್ಯಾರ್ಥಿಯು ಪ್ರಸ್ತುತ ಮಟ್ಟವನ್ನು ಮೀರಿ ಸ್ವಲ್ಪ ಮಟ್ಟಿಗೆ ಕೆಲಸ ಮಾಡಲು ಸಹಾಯ ಮಾಡುತ್ತದೆ.
  1. ವಿದ್ಯಾರ್ಥಿಯು ತಜ್ಞರ ಮಧ್ಯಸ್ಥಿಕೆಗಳು ಮತ್ತು ಶಿಫಾರಸುಗಳಿಗೆ ಅನುಗುಣವಾಗಿ, ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಅವರು ತಮ್ಮಲ್ಲೇ ಸುಧಾರಣೆಗಳನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾರೆ ಮತ್ತು ಪ್ರಾವಿಣ್ಯತೆಯನ್ನು ಸಾಧಿಸುತ್ತಾರೆ. ತದನಂತರ, ಬೆಂಬಲವನ್ನು ಕಾಲಕ್ರಮೇಣ ಕೈಬಿಡಲಾಗುತ್ತದೆ, ಇದರಿಂದ ಕಲಿಯುವ ವಿದ್ಯಾರ್ಥಿಗಳು ತಮ್ಮದೇ ಸಾಮರ್ಥ್ಯವನ್ನು ಬಳಸಿ ನಿರ್ವಹಿಸಬಲ್ಲರು. 

ಸ್ಕ್ಯಾಫೋಲ್ಡಿಂಗ್ ಪರಿಣಾಮಕಾರಿಯಾಗಬೇಕಾದರೆ, ಶಿಕ್ಷಕರು ಈ ಕೆಳಗಿನವುಗಳನ್ನು ತಿಳಿದಿರಬೇಕು:

  1. ಕಲಿಕಾ ಕಾರ್ಯದ ಆಯ್ಕೆ: ಕಲಿಯುವ ವಿದ್ಯಾರ್ಥಿಗಳು ತಮ್ಮ ಅಭಿವೃದ್ಧಿ ಕೌಶಲ್ಯಗಳನ್ನು ಬಳಸುತ್ತಾರೆಂದು ನಿಗದಿತ ಕಾರ್ಯವು ಖಾತರಿಪಡಿಸಬೇಕು. ಕಲಿಕಾ ಕಾರ್ಯವು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಆಕರ್ಷಕವಾಗಿರಬೇಕು ಮತ್ತು ಉತ್ತೇಜನಕಾರಿಯಾಗಿರಬೇಕು. ನಿಗದಿತ ಕಾರ್ಯವು ಎಂದಿಗೂ ವಿದ್ಯಾರ್ಥಿಗಳಿಗೆ ತುಂಬಾ ಸುಲಭವಾಗಿರಬಾರದು ಅಥವಾ ತುಂಬಾ ಕಠಿಣವಾಗಿರಬಾರದು.
  2. ದೋಷದ ನಿರೀಕ್ಷೆ: ಕೆಲಸವನ್ನು ಆಯ್ಕೆ ಮಾಡಿದ ನಂತರದಲ್ಲಿ, ವಿದ್ಯಾರ್ಥಿಗಳು ತಮ್ಮ ನಿಗದಿತ ಕಾರ್ಯ ಮಾಡುವಾಗ ತಪ್ಪುಗಳನ್ನು ನಿರೀಕ್ಷಿಸಬೇಕಾಗುತ್ತದೆ. ದೋಷಗಳ ನಿರೀಕ್ಷೆಯು ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಲ್ಲದ ದಿಕ್ಕುಗಳಿಂದ ಸರಿಯಾಗಿ ಮಾರ್ಗದರ್ಶನ ಮಾಡಲು ಸ್ಕ್ಯಾಫೋಲ್ಡರ್ ಅನ್ನು ಶಕ್ತಗೊಳಿಸುತ್ತದೆ.
  3. ಕಲಿಕಾ ಕಾರ್ಯದ ಸಮಯದಲ್ಲಿ ಸ್ಕ್ಯಾಫೋಲ್ಡ್‌ಗಳನ್ನು ಅನ್ವಯಿಸುವಿಕೆ: ಸ್ಕ್ಯಾಫೋಲ್ಡ್‌ಗಳನ್ನು ಎರಡು ಪ್ರತ್ಯೇಕ ವಿಧಾನಗಳಲ್ಲಿ ಆಯೋಜಿಸಬಹುದು. ಇದು “ಸರಳವಾದ ಕೌಶಲ್ಯ ಸ್ವಾಧೀನ” ಅಥವಾ “ರಚನಾತ್ಮಕ ಮತ್ತು ಕ್ರಿಯಾತ್ಮಕ” ಆಗಿರಬಹುದು.
  4. ಭಾವನಾತ್ಮಕ ಸಮಸ್ಯೆಗಳ ಪರಿಗಣನೆ: ಸ್ಕ್ಯಾಫೋಲ್ಡಿಂಗ್ ಕೇವಲ ಅರಿವಿನ ಕೌಶಲ್ಯಕ್ಕೆ ಸೀಮಿತವಾಗಿಲ್ಲ ಮತ್ತು ಅದು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಸಹ ಬೆಂಬಲಿಸುತ್ತದೆ. ಉದಾಹರಣೆಗೆ, ಒಂದು ನಿರ್ದಿಷ್ಟ ಕಾರ್ಯದ ಸಮಯದಲ್ಲಿ, ವಿದ್ಯಾರ್ಥಿಯು ಅನುಭವಿಸಬಹುದಾದ ಹತಾಶೆ ಮತ್ತು ಆಸಕ್ತಿಯ ನಷ್ಟವನ್ನು ಸ್ಕ್ಯಾಫೋಲ್ಡರ್ ನಿರ್ವಹಿಸಬೇಕಾಗಬಹುದು ಮತ್ತು ನಿಯಂತ್ರಿಸಬೇಕಾಗಬಹುದು. ಪ್ರೋತ್ಸಾಹ/ಉತ್ತೇಜನವು ನಿರ್ಣಾಯಕ ಸ್ಕ್ಯಾಫೋಲ್ಡಿಂಗ್ ಘಟಕವಾಗಿದೆ.

Embibe ಉತ್ಪನ್ನ/ಫೀಚರ್‌ಗಳು : ವೈಯಕ್ತೀಕಗೊಳಿಸಿದ ಸಾಧನೆಯ ಪಯಣ, ಮುಂದಿನ ಪ್ರಶ್ನೆ ಎಂಜಿನ್

Embibe ನಲ್ಲಿ ‘ವೈಯಕ್ತೀಕಗೊಳಿಸಿದ ಸಾಧನೆಯ ಪಯಣದ’ ಮೂಲಕ, ಪ್ರತಿಯೊಬ್ಬ ವಿದ್ಯಾರ್ಥಿಗೆ ಅವರವರ ಕಲಿಕಾ ರೇಖೆಗಳ ಆಧಾರದ ಮೇಲೆ ವೈಯಕ್ತೀಕಗೊಳಿಸಿದ ಶಿಕ್ಷಣವನ್ನು ಒದಗಿಸಲಾಗುತ್ತದೆ. ವಿಭಿನ್ನ ವಿದ್ಯಾರ್ಥಿಗಳಿಗೆ ಅವರವರ ನಿರ್ದಿಷ್ಟ ಕಲಿಕಾ ಅಗತ್ಯಗಳ ಆಧಾರದ ಮೇಲೆ, ಸೂಕ್ತವಾದ ಕಠಿಣತೆಯ ಹಂತಗಳಿಗೆ ಅನುಗುಣವಾಗಿ ವಿವಿಧ ಸಂಖ್ಯೆಯ ಪ್ರಶ್ನೆಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ ಯಾವುದೇ ಚಾಪ್ಟರ್‌ಗೆ ಸಂಬಂಧಿಸಿದ ತಮ್ಮದೇ ಟೆಸ್ಟ್ ಅನ್ನು ರಚಿಸಬಹುದು. ಮತ್ತು ಅದು ಪ್ರತಿ ಚಾಪ್ಟರ್‌ನಲ್ಲಿ ತಮ್ಮ ಸಾಮರ್ಥ್ಯಗಳನ್ನು ತಮ್ಮದೇ ಆದ ವೇಗದಲ್ಲಿ ಹೋಲಿಸಲು ಅವರಿಗೆ ಅವಕಾಶ ನೀಡುತ್ತದೆ. ನಮ್ಮ ‘Solve with Us’ ಫೀಚರ್ ಪ್ರಶ್ನೆಯ ಹಂತದಲ್ಲಿ ಸುಳಿವುಗಳನ್ನು ಒದಗಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಪರಿಹರಿಸಲು ಸಹಾಯ ಮಾಡಲು ಹಂತದ ಹಂತದಲ್ಲಿ ಸೂಕ್ಷ್ಮ ಸುಳಿವುಗಳನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು ಇನ್ನೂ ಅದನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಪ್ರತಿ ಪ್ರಶ್ನೆಗೆ ವಿವರವಾದ ಪರಿಹಾರಗಳನ್ನು ಒದಗಿಸಲಾಗುತ್ತದೆ; ಇದು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ವೈಯಕ್ತಿಕ ಶಿಕ್ಷಕ, ಮಾರ್ಗದರ್ಶಕರನ್ನು ಹೊಂದಿರುವಂತಿದೆ.

Embibe ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಶ್ನೆಗಳನ್ನು ಪೋಸ್ಟ್ ಮಾಡಬಹುದಾದ 24/7 ಸಕ್ರಿಯವಾಗಿರುವ ‘ಲೈವ್ ಫ್ಯಾಕಲ್ಟಿ ಸಪೋರ್ಟ್’ ಸ್ಕ್ಯಾಫೋಲ್ಡಿಂಗ್ ಅನ್ನು ಸಹ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. Embibeನ ತಜ್ಞರು ಸಾಮಾನ್ಯವಾಗಿ ನಿಮಿಷಗಳಲ್ಲಿ ಚಾಟ್ ಬೆಂಬಲದ ಮೂಲಕ ಅನುಮಾನಗಳನ್ನು ಪರಿಹರಿಸುತ್ತಾರೆ. Embibeನಲ್ಲಿ, ಶಿಕ್ಷಣದ ಮೂಲಕ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಮತ್ತು ನಮ್ಮ ಬೆಂಬಲ ತಂಡವು ಎಲ್ಲಾ ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಪರಿಹರಿಸಲು ಶ್ರಮಿಸುವ ಮೂಲಕ ನಿಖರವಾಗಿ ಮಾಡುತ್ತದೆ.