ಸಾಮರ್ಥ್ಯದ ಮಟ್ಟವನ್ನು ಹೆಚ್ಚಿಸಲು ಕ್ರಿಯಾತ್ಮಕ ಮತ್ತು ಹೊಂದಿಕೊಳ್ಳುವ ಅಭ್ಯಾಸ.

ನಮ್ಮ ಶಿಫಾರಸಿನ ಎಂಜಿನ್, ಸ್ವಾಮ್ಯದ 'ನಮ್ಮೊಂದಿಗೆ ಪರಿಹರಿಸಿ' ಅಭ್ಯಾಸದ ಜೊತೆಗೆ ಸಂಯೋಜಿಸಲ್ಪಟ್ಟಿದ್ದು, ಅದರಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನಿಜವಾಗಿಯೂ ಪರಿಪೂರ್ಣಗೊಳಿಸಲು ಸಹಾಯ ಮಾಡುತ್ತದೆ.

Embibe ಅಪ್ಲಿಕೇಶನ್‌ನಲ್ಲಿ ‘ಪ್ರ್ಯಾಕ್ಟೀಸ್’ 10 ಲಕ್ಷಕ್ಕೂ ಹೆಚ್ಚಿನ ಸಂವಾದಾತ್ಮಕ ಪ್ರಶ್ನೆ ಘಟಕಗಳನ್ನು ಒಳಗೊಂಡಿದ್ದು, ಅವುಗಳನ್ನು ಅಧ್ಯಾಯಗಳನ್ನಾಗಿ ಮತ್ತು ಉನ್ನತ ಶ್ರೇಣಿಯ 1,400+ ಪುಸ್ತಕಗಳ ವಿಷಯಗಳನ್ನಾಗಿ ಪ್ಯಾಕ್ ಮಾಡಲಾಗಿದೆ. ಆಳವಾದ ಜ್ಞಾನದ ಜಾಡುಹಿಡಿದು ಹೋಗುವ ಅಲ್ಗಾರಿದಮ್‌ಗಳ ಮೂಲಕ, ಪ್ರತಿಯೊಬ್ಬ ವಿದ್ಯಾರ್ಥಿಗೆಂದೇ ವೈಯಕ್ತೀಕರಿಸುವ ಅಭ್ಯಾಸ ಮಾರ್ಗಗಳ ಮೂಲಕ ಒಂದು ಹೊಂದಾಣಿಕೆಯ ಅಭ್ಯಾಸ ಚೌಕಟ್ಟು ‘ಅಭ್ಯಾಸ’ವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಕೆಳಗಿನವುಗಳು ‘ಅಭ್ಯಾಸ’ದ ಪ್ರಮುಖ ಲಕ್ಷಣಗಳಾಗಿವೆ.

  1. ‘ಪ್ರಾಕ್ಟೀಸ್’ ವಿಭಾಗವು ಪ್ರತಿಯೊಂದು ಪ್ರಶ್ನೆಯನ್ನು ಪರಿಹರಿಸುವ ಪ್ರತಿಯೊಂದು ಹಂತದಲ್ಲೂ ಸೂಕ್ಷ್ಮ ವೈಯಕ್ತೀಕರಣಗಳನ್ನು ಚಾಲನೆ ಮಾಡಲು ಪ್ರತೀ ಪ್ರಶ್ನೆಯನ್ನು 63+ ಟ್ಯಾಗ್ ಮಾಡಬಹುದಾದ ಮೂಲಅಂಶಗಳನ್ನಾಗಿ ವಿಭಜಿಸುವ ಮೂಲಕ ಪ್ರಪಂಚದ ಅತ್ಯಂತ ಸಮಗ್ರವಾದ ಪ್ರಶ್ನೆಗಳ ಹರಳೀಕರಣಗಳನ್ನು ಒಳಗೊಂಡಿದೆ.
  2. ‘ಪ್ರಾಕ್ಟೀಸ್’ ಎಂಬುದು ವಿಶ್ವದ ಅತ್ಯಂತ ಆಳವಾದ ನಾವೀನ್ಯತೆಯಾಗಿದೆ ಏಕೆಂದರೆ, ಅದು ‘Solve With Us’ ಎಂದು ಕರೆಯಲಾಗುವ ಒಂದು ಸ್ವಾಮ್ಯದ ಶಿಕ್ಷಣಶಾಸ್ತ್ರ ವಿಧಾನವನ್ನು ಬಳಸಿಕೊಂಡು ವ್ಯಕ್ತಿನಿಷ್ಠ ಪ್ರಶ್ನೆಗಳನ್ನು ಪ್ರಸ್ತುತಪಡಿಸುತ್ತದೆ.
  3. ‘ಪ್ರಾಕ್ಟೀಸ್’ ಎಂಬುದು 74,000+ ಪರಿಕಲ್ಪನೆಗಳನ್ನು ಹೊಂದಿರುವ Embibe ನ ಜ್ಞಾನ ನಕ್ಷೆಗಳಿಗೆ ತನ್ನ ಎಲ್ಲಾ ಕಂಟೆಂಟ್ ಅನ್ನು ಸಂಪರ್ಕಿಸುತ್ತದೆ.
  4. K-12, ಕಾಲೇಜು ಪ್ರವೇಶ ಪರೀಕ್ಷೆಗಳು ಮತ್ತು ಉದ್ಯೋಗ/ಸರ್ಕಾರಿ ಪರೀಕ್ಷೆಗಳು ಸೇರಿದಂತೆ, ಎಲ್ಲಾ ಕಂಟೆಂಟ್ ಅನ್ನು ಇದು 310 ಪರೀಕ್ಷೆಗಳನ್ನಾಗಿ ಪ್ಯಾಕೇಜ್ ಮಾಡುತ್ತದೆ.
  5. ಸಾಲ್ವರ್‌ಗಳು ಮತ್ತು ಟೆಂಪ್ಲೇಟ್‌ಗಳನ್ನು ಬಳಸಿಕೊಂಡು, ಅದು ಚಾಲನೆಯಲ್ಲಿರುವ-ಸಮಯದಲ್ಲಿ ಕ್ರಿಯಾತ್ಮಕವಾಗಿ ವೈಯಕ್ತೀಕಗೊಳಿಸಲಾದ ಪ್ರಶ್ನೆಗಳ ರಚನೆಯನ್ನು ಮಾಡುತ್ತದೆ.
  6. ಇದೊಂದು ದೀರ್ಘ ಉಕ್ತಿಗಳು, ನುಡಿಗಟ್ಟುಗಳು ಮತ್ತು ಸುದೀರ್ಘ ಉತ್ತರಗಳನ್ನು ಸ್ವಯಂಚಾಲಿತವಾಗಿ ಮೌಲ್ಯಮಾಪನ ಮಾಡುವ ಸಾಮರ್ಥ್ಯವಿರುವ ಸುಧಾರಿತ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್-ಆಧಾರಿತ ಪದಗುಚ್ಛ ಮೌಲ್ಯಮಾಪಕವನ್ನು ಬಳಸುತ್ತದೆ.
  7. ಕಲಿಕೆಯ ಹಸ್ತಕ್ಷೇಪಕ್ಕಾಗಿ ಶಿಫಾರಸು ಎಂಜಿನ್‌ಗಳನ್ನು ಬಳಸುವ ಮೂಲಕ, ವಿದ್ಯಾರ್ಥಿಯು ಪ್ರಶ್ನೆಯೊಂದರಲ್ಲಿ ಪರಿಕಲ್ಪನೆ ಅಥವಾ ಸಕ್ಷಮತೆಯನ್ನು ಎದುರಿಸುತ್ತಿರುವಾಗ, ಅದು ವೀಡಿಯೊಗಳು ಮತ್ತು ಸುಳಿವುಗಳ ಮೂಲಕ ಸ್ವಯಂಚಾಲಿತ ಸಹಾಯವನ್ನು ಒದಗಿಸುತ್ತದೆ.
  8. ‘ಪ್ರಾಕ್ಟೀಸ್’ ವಿದ್ಯಾರ್ಥಿಗಳಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಅಭ್ಯಾಸ ಮಾಡಲು ಪಠ್ಯಕ್ರಮದಲ್ಲಿನ ಟಾಪಿಕ್‌ಗಳು ಮತ್ತು ಪರಿಕಲ್ಪನೆಗಳಿಗೆ ಸಂಬಂಧಿಸಿದ ಸಾಕಷ್ಟು ಪ್ರಶ್ನೆಗಳನ್ನು ಒದಗಿಸುತ್ತದೆ. Embibe ನಲ್ಲಿ ಪರಿಣಿತರು ಸವಿವರವಾದ ಪರಿಹಾರಗಳನ್ನು ರಚಿಸಿದ್ದಾರೆ.
  9. ವಿದ್ಯಾರ್ಥಿಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ‘ವೀಡಿಯೋಗಳು ಮತ್ತು ಪರಿಹಾರಗಳಿರುವ ಪುಸ್ತಕಗಳು’, ‘ಬಿಗ್ ಬುಕ್‌ಗಳು’ ಅಥವಾ ‘ಪ್ರಾಕ್ಟೀಸ್ ಚಾಪ್ಟರ್‌ಗಳು’ ಮೂಲಕ ಅಧ್ಯಾಯ-ವಾರು ಅಥವಾ ಟಾಪಿಕ್ ಪ್ರಕಾರ ಈ ಅಭ್ಯಾಸದ ಪ್ರಶ್ನೆಗಳನ್ನು ಪಡೆಯಬಹುದು. ‘ನಮ್ಮೊಂದಿಗೆ ಪರಿಹರಿಸಿ’ ಫೀಚರ್ ವಿದ್ಯಾರ್ಥಿಗಳಿಗೆ ಪ್ರಶ್ನೆ ಹಂತದಲ್ಲಿ ಸುಳಿವುಗಳನ್ನು ಮತ್ತು ಪ್ರಶ್ನೆಗಳನ್ನು ಪರಿಹರಿಸಲು ಅವರಿಗೆ ಸಹಾಯ ಮಾಡಲು ಹಂತ ಹಂತದಲ್ಲಿ ಸೂಕ್ಷ್ಮ ಸುಳಿವುಗಳನ್ನು ಒದಗಿಸುತ್ತದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಇನ್ನೂ ಅದನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಪ್ರತಿಯೊಂದು ಪ್ರಶ್ನೆಗೆ ಸವಿವರವಾದ ಪರಿಹಾರಗಳು ಲಭ್ಯವಿದೆ.
  10. ‘ಪ್ರಮುಖ’, ‘ಕಠಿಣತೆ’ ಮತ್ತು ‘ಸುದೀರ್ಘತೆಯ’ ಟ್ಯಾಗ್‌ಗಳು ಒಂದು ಟಾಪಿಕ್ ಮತ್ತು ಅಧ್ಯಾಯದ ಮಟ್ಟದಲ್ಲಿ ಯಾವುದೇ ಪ್ರಮುಖವಾದ ಅಧ್ಯಾಯವನ್ನು ತಪ್ಪಿಸಿಕೊಂಡಿಲ್ಲವೆಂದು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಹಾಗೆಯೇ, ಪ್ರಶ್ನೆಯ ಕಠಿಣತೆ ಮತ್ತು ಸುದೀರ್ಘತೆಯ ಆಧಾರದ ಮೇಲೆ, ವಿದ್ಯಾರ್ಥಿಗಳು ಅಧ್ಯಾಯಕ್ಕೆ ಆದ್ಯತೆ ನೀಡಬಹುದು.
  11. ವಿದ್ಯಾರ್ಥಿಗಳು ವ್ಯಾಪಕವಾಗಿ ಬಳಸುವ ಮತ್ತು ಪ್ರಸಿದ್ಧ ಲೇಖಕರು ಬರೆದ ಪ್ರಮಾಣಿತ ಪುಸ್ತಕಗಳನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಅನುಕ್ರಮವಾಗಿ ಪ್ರದರ್ಶಿಸಲಾಗುತ್ತದೆ. ಪುಸ್ತಕವು ಹೆಚ್ಚು ಪ್ರಸಿದ್ಧವಾಗಿದ್ದರೆ, ಅದು ಉನ್ನತ ಸ್ಥಾನವನ್ನು ಪಡೆಯುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಅದನ್ನು ಅನುಕ್ರಮಗೊಳಿಸಲಾಗುತ್ತದೆ.
  12. Embibe ಪಠ್ಯಕ್ರಮವನ್ನು ಪರೀಕ್ಷಾ ಪಠ್ಯಕ್ರಮದ ವಿಸ್ತೃತ ಅಧ್ಯಯನ, ಹಿಂದಿನ ವರ್ಷಗಳಲ್ಲಿ ಬರೆದ ಪರೀಕ್ಷಾ ಪ್ರಶ್ನೆಪತ್ರಿಕೆಗಳ ಮಾದರಿ ಹಾಗೂ ಗ್ರೇಡ್ ಅಥವಾ ಪರೀಕ್ಷೆಗೆಂದು ಸೂಚಿಸಿದ ಪಠ್ಯಪುಸ್ತಕ ಅಥವಾ ಜನಪ್ರಿಯ ಪುಸ್ತಕಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ. ಒಂದು ಪುಸ್ತಕದ ಅಭ್ಯಾಸದಲ್ಲಿ, ಪಠ್ಯಕ್ರಮವನ್ನು ಪುಸ್ತಕಕ್ಕೆ ಅನುಗುಣವಾಗಿ ಅನುಸರಿಸಲಾಗುತ್ತದೆ. ಆದಾಗ್ಯೂ, ‘ಅಧ್ಯಾಯಗಳ ಮೂಲಕ ಅಭ್ಯಾಸ,’ ‘Embibe ಬಿಗ್ ಬುಕ್’ ಮತ್ತು ‘ಟೆಸ್ಟ್’ ನಲ್ಲಿ ಅನುಸರಿಸಲಾಗುವ ಪಠ್ಯಕ್ರಮವೇ Embibe ನ ಪಠ್ಯಕ್ರಮವಾಗಿದೆ.
  13. ಪ್ರಯತ್ನದ ಗುಣಮಟ್ಟದಲ್ಲಿ ಏಳು ವಿಭಿನ್ನ ಜಾರ್‌ಗಳು ಈ ಕೆಳಗಿನ ಪ್ರಕಾರಗಳ ಉತ್ತರಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತವೆ:
    A. ಅತಿ ವೇಗದ ಸರಿ ಪ್ರಯತ್ನ: ಒಬ್ಬ ವಿದ್ಯಾರ್ಥಿಯು ಅದರ ಆದರ್ಶ ಸಮಯದ 25% ಗಿಂತ ಕಡಿಮೆ ಸಮಯದಲ್ಲಿ ಒಂದು ಪ್ರಶ್ನೆಗೆ ಸರಿಯಾಗಿ ಉತ್ತರಿಸುವ ಪ್ರಯತ್ನವನ್ನು ಅತೀ ವೇಗದ ಸರಿ ಪ್ರಯತ್ನ ಎಂದು ಕರೆಯಲಾಗುತ್ತದೆ.
    B. ನಿಖರ ಪ್ರಯತ್ನ: ಒಬ್ಬ ವಿದ್ಯಾರ್ಥಿಯು ಸರಿಯಾದ ಕಾಲಾವಧಿಯಲ್ಲಿ ಒಂದು ಪ್ರಶ್ನೆಗೆ ಸರಿಯಾಗಿ ಉತ್ತರಿಸುವ ಪ್ರಯತ್ನವನ್ನು ನಿಖರ ಪ್ರಯತ್ನ ಎಂದು ಕರೆಯಲಾಗುತ್ತದೆ. ಅದು ಅದರ ಆದರ್ಶ ಸಮಯದ 25% ಗಿಂತ ಹೆಚ್ಚಾಗಿದೆ, ಆದರೆ ಅದರ ಆದರ್ಶ ಸಮಯಕ್ಕಿಂತ ಕಡಿಮೆಯಾಗಿದೆ. ಅದನ್ನು ನಿಖರ ಪ್ರಯತ್ನ ಎಂದು ಕರೆಯಲಾಗುತ್ತದೆ.
    C. ಹೆಚ್ಚು ಸಮಯ ಸರಿ ಪ್ರಯತ್ನ: ವಿದ್ಯಾರ್ಥಿಯು ಆದರ್ಶ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ವಿನಿಯೋಗಿಸುವ ಮೂಲಕ, ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಯತ್ನವು ಹೆಚ್ಚು ಸಮಯ ಸರಿ ಪ್ರಯತ್ನವಾಗಿದೆ.
    D. ವ್ಯರ್ಥ ಪ್ರಯತ್ನ: ವಿದ್ಯಾರ್ಥಿಯು ಪ್ರಶ್ನೆಗೆ 25% ಕ್ಕಿಂತ ಕಡಿಮೆ ಸಮಯದಲ್ಲಿ ತಪ್ಪಾಗಿ ಉತ್ತರಿಸುವ ಪ್ರಯತ್ನವನ್ನು ವ್ಯರ್ಥ ಪ್ರಯತ್ನ ಎಂದು ಕರೆಯಲಾಗುತ್ತದೆ.
    E. ತಪ್ಪು ಪ್ರಯತ್ನ: ವಿದ್ಯಾರ್ಥಿಯು ಕಾಲಾವಧಿಯಲ್ಲಿ ತಪ್ಪಾಗಿ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ, ಇದು ಆದರ್ಶ ಸಮಯದ 25% ಕ್ಕಿಂತ ಹೆಚ್ಚು ಆದರೆ ಆದರ್ಶ ಸಮಯಕ್ಕಿಂತ ಕಡಿಮೆಯಾಗಿರುತ್ತದೆ, ಮತ್ತು ಇದನ್ನು ತಪ್ಪು ಪ್ರಯತ್ನ ಎಂದು ಕರೆಯಲಾಗುತ್ತದೆ.
    F. ಹೆಚ್ಚು ಸಮಯ ತಪ್ಪು ಪ್ರಯತ್ನ: ವಿದ್ಯಾರ್ಥಿಯು ಆದರ್ಶ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ವಿನಿಯೋಗಿಸುವ ಮೂಲಕ ಪ್ರಶ್ನೆಗೆ ತಪ್ಪಾಗಿ ಉತ್ತರಿಸುವ ಪ್ರಯತ್ನವನ್ನು ಹೆಚ್ಚು ಸಮಯ ತಪ್ಪು ಪ್ರಯತ್ನ ಎಂದು ಕರೆಯಲಾಗುತ್ತದೆ.
    G. ಪ್ರಯತ್ನಿಸಲಾಗಿಲ್ಲ: ಇದು ಒಂದು ತಪ್ಪಿದ/ಉತ್ತರವನ್ನು ಗುರುತಿಸದ ಪ್ರಯತ್ನವಾಗಿದೆ. ಒಬ್ಬ ವಿದ್ಯಾರ್ಥಿಗೆ ಪ್ರಶ್ನೆಯ ಬಗ್ಗೆ ಖಚಿತವಾಗಿರದ, ಯಾವುದೇ ಅಭಿಪ್ರಾಯವೂ ಇರದ ಪ್ರಯತ್ನ, ಹಾಗಾಗಿ, ಆ ಪ್ರಶ್ನೆಯು ಖಾಲಿ ಬಿಟ್ಟ ಪ್ರಯತ್ನವಾಗಿದೆ.

ಶಿಫಾರಸು ಮಾಡಿದ ಕಲಿಕೆಯು Embibe ಪ್ಲ್ಯಾಟ್‌ಫಾರ್ಮ್‌ನಲ್ಲಿ ವಿದ್ಯಾರ್ಥಿಯ ಕಾರ್ಯಕ್ಷಮತೆ ಆಧಾರದ ಮೇಲೆ ವೈಯಕ್ತೀಕಗೊಳಿಸಲಾದ ಪದರವಾಗಿದೆ. ವಿದ್ಯಾರ್ಥಿಗಳು ಪ್ರಗತಿ ಸಾಧಿಸಲು ಅಗತ್ಯವಾದ ವೈಯಕ್ತಿಕಗೊಳಿಸಲಾದ ಕಲಿಕಾ ಪಥವನ್ನು ಅದು ಸೂಚಿಸುತ್ತದೆ. ಜ್ಞಾನ ನಕ್ಷೆಯ ಸಹಾಯದಿಂದ, ಅತ್ಯುತ್ತಮ ತಿಳುವಳಿಕೆಗಾಗಿ ಪೂರ್ವಾಪೇಕ್ಷಿತ ಹೊಸ ಪರಿಕಲ್ಪನೆಗಳನ್ನು ಕಲಿಯುವಂತೆ Embibe ಅಪ್ಲಿಕೇಶನ್, ವಿದ್ಯಾರ್ಥಿಗಳಿಗೆ ಶಿಫಾರಸು ಮಾಡುತ್ತದೆ. ಅತ್ಯಂತ ಹತ್ತಿರವಿರುವ ಸಾಮೀಪ್ಯ ವಲಯದಲ್ಲಿ ಸರಿಯಾದ ಕಠಿಣತೆಯ ಮಟ್ಟದ ಪ್ರಶ್ನೆಯನ್ನು ‘ಮುಂದಿನ ಪ್ರಶ್ನೆ ಎಂಜಿನ್’ ವಿದ್ಯಾರ್ಥಿಗೆ ಒದಗಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ವಿಶಿಷ್ಟನಾಗಿದ್ದು, ವಿಭಿನ್ನ ಕಲಿಕಾ ಪಯಣವನ್ನು ಹೊಂದಿರುತ್ತಾನೆ. ಅವರವರ ಕಲಿಕೆಯ ಮನಃಸ್ಥಿತಿ ಮತ್ತು ಅಭ್ಯಾಸದಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಅವರಿಗೆ ಸಲಹೆಗಳು ಬೇಕಾಗುತ್ತವೆ.