“ಶಾಲಾವಿಲೋಮ ಪದ್ಧತಿ/ಅನ್‌ಸ್ಕೂಲಿಂಗ್” ಎಂಬ ಪದವನ್ನು ಶಿಕ್ಷಣತಜ್ಞರಾದ ಜಾನ್ ಹಾಲ್ಟ್ ರವರು 1970 ರ ದಶಕದಲ್ಲಿ ಸೃಷ್ಟಿಸಿದರು. ಇದು ಮಕ್ಕಳು ನೈಸರ್ಗಿಕ ಜೀವನದ ಅನುಭವಗಳು ಮತ್ತು ದೈನಂದಿನ ಚಟುವಟಿಕೆಗಳ ಮೂಲಕ ಕಲಿಯುವ ಕಲಿಕೆಯ ಅನೌಪಚಾರಿಕ ಶೈಲಿಯಾಗಿದೆ. ಮನೆ ಶಿಕ್ಷಣದ ಪಠ್ಯಕ್ರಮ – ರಹಿತ ಅನುಷ್ಠಾನವೆಂದು ಈ ಶಾಲಾವಿಲೋಮ ಪದ್ಧತಿಯನ್ನು ಪರಿಗಣಿಸಲಾಗುತ್ತದೆ — ಶಾಲಾವಿಲೋಮ ಪದ್ಧತಿಯಲ್ಲಿ ಆಟ, ಮನೆಯ ಜವಾಬ್ದಾರಿಗಳು, ವೈಯಕ್ತಿಕ ಆಸಕ್ತಿಗಳು ಮತ್ತು ಕುತೂಹಲ, ಇಂಟರ್ಶಿಪ್‌ಗಳು ಮತ್ತು ಕೆಲಸದ ಅನುಭವ, ಪ್ರಯಾಣ, ಪುಸ್ತಕಗಳು, ಚುನಾಯಿತ ತರಗತಿಗಳು, ಕುಟುಂಬ, ಮಾರ್ಗದರ್ಶಕರು ಮತ್ತು ಸಾಮಾಜಿಕ ಸಂವಹನದಂತಹ ವಿವಿಧ ದೈನಂದಿನ ಚಟುವಟಿಕೆಗಳು ಮತ್ತು ಅನುಭವಗಳ ಮೂಲಕ ಮಕ್ಕಳು ಕಲಿಯುತ್ತಾರೆ. ಈ ಶಾಲಾವಿಲೋಮ ಕಲಿಕಾ ವಿಧಾನವು ಕಲಿಯುವ ಶಿಕ್ಷಣಾರ್ಥಿಗಳು ಆಯ್ಕೆ ಮಾಡಿದ ಚಟುವಟಿಕೆಗಳನ್ನು ಜ್ಞಾನ ಸಂಪಾದಿಸುವ ಮತ್ತು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವ ಪ್ರಾಥಮಿಕ ಸಾಧನವಾಗಿ ಪ್ರತಿಪಾದಿಸುತ್ತದೆ.
ಶಾಲಾವಿಲೋಮ ಪದ್ಧತಿಯ ಪ್ರತಿಪಾದಕರು ಸಾಂಪ್ರದಾಯಿಕ ಶಾಲೆಗಳ ಉಪಯುಕ್ತತೆ ಮತ್ತು ಕಲಿಕೆಗೆ ಪಠ್ಯಕ್ರಮ ಆಧಾರಿತ ವಿಧಾನಗಳಲ್ಲಿರುವ ಅಡ್ಡಪರಿಣಾಮಗಳನ್ನು ಪ್ರಶ್ನಿಸುತ್ತಾರೆ. ಸಾಂಪ್ರದಾಯಿಕ ಶಾಲಾ ರಚನೆ ಮತ್ತು ನಿಗದಿತ ಸಮಯದ ವೇಳಾಪಟ್ಟಿಗೆ ಅನುಗುಣವಾಗಿ ಕಲಿಕೆ ನಡೆಯಬೇಕೆಂಬ ಅದರ ನಂಬಿಕೆಗಳು, ನಿಜವಾಗಿಯೂ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿಲ್ಲ ಎಂದು ಅವರು ನಂಬುತ್ತಾರೆ. ಪ್ರಮಾಣಿತ ಪರೀಕ್ಷೆಗಳಲ್ಲಿ ಶ್ರೇಣೀಕರಣದ ವಿಧಾನಗಳು, ಅವರ ವಯಸ್ಸಿನ ಗುಂಪಿನ ಮಕ್ಕಳ ಜೊತೆ ಬಲವಂತದ ಸಂಪರ್ಕ ಮತ್ತು ಪರಸ್ಪರ ಕ್ರಿಯೆ, ಕಲಿಯುವವರಿಗೆ ಅವರ ಪರಿಸ್ಥಿತಿಯಲ್ಲಿ ಸಹಾಯವಾಗುತ್ತದೆಯೇ ಹೊರತು, ಮನೆಕೆಲಸ ಮಾಡುವಂತೆ ಒತ್ತಾಯಿಸುವುದು, ಒಬ್ಬ ಅಧಿಕಾರಿಯ ಸೂಚನೆಗಳನ್ನು ಕೇಳಲು ಮತ್ತು ಪಾಲಿಸಲು ಕಲಿಯುವವರನ್ನು ಒತ್ತಾಯಿಸುವುದು, ಮತ್ತು ವಿವಿಧ ಸಾಂಪ್ರದಾಯಿಕ ಶಾಲಾ ಶಿಕ್ಷಣದ ಇತರ ಲಕ್ಷಣಗಳು ಮಕ್ಕಳ ಅಭಿವೃದ್ಧಿಗೆ ಸಹಾಯ ಮಾಡುವುದಿಲ್ಲ. ಪ್ರತಿಯೊಂದು ಮಗುವೂ ಅನನ್ಯವಾದುದು. ಅನ್‌ಸ್ಕೂಲಿಂಗ್/ಶಾಲಾವಿಲೋಮ ಪದ್ಧತಿಯು, ಅವರ ವೈಯಕ್ತಿಕ ಅಗತ್ಯಗಳನ್ನು ಪೂರೈಸುತ್ತದೆ ಎಂದು ಅವರು ನಂಬುತ್ತಾರೆ.
ಪೋಷಕರು/ಪಾಲಕರು, ಶಾಲಾವಿಲೋಮ ಪದ್ಧತಿಯಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾಗಿರುವುದು:
- ಎಲ್ಲಾ ಮಕ್ಕಳ ಹಿತಾಸಕ್ತಿಗಳನ್ನು ಸಮಾನವಾಗಿ ಗೌರವಿಸುವುದು.
- ತಮ್ಮ ದೈನಂದಿನ ಜೀವನದಲ್ಲಿ ಮಗುವನ್ನು ಸೇರಿಸಿಕೊಳ್ಳಿ – ರೂಢಿಗತವಾಗಿ ಬಂದ ಸಂಪ್ರದಾಯಕ್ಕಿಂತ ಹೆಚ್ಚಾಗಿ ಒಂದು “ತೆರೆದ ಪುಸ್ತಕದಂತೆ” ಬದುಕನ್ನು ಜೀವಿಸಿ.
- ಮಗುವಿಗೆ ಆಸಕ್ತಿಯಿರುವ ವಿಷಯಗಳನ್ನು ಅನುಸರಿಸಿ ಮತ್ತು ಇದನ್ನು ವಿವಿಧ ರೀತಿಯಲ್ಲಿ ಮಾಡಿ.
- ಮನೆಯಲ್ಲಿ ಮತ್ತು ಮನೆಯ ಹೊರಗೆ, ಎರಡೂ ಸ್ಥಳಗಳಲ್ಲೂ ವಿವಿಧ ರೀತಿಯ ಅನುಭವಗಳಿಂದ ಸಮೃದ್ಧವಾದ ಒಂದು ಕೌಟುಂಬಿಕ ಜೀವನವನ್ನು ನಡೆಸಿ.
- ರೋಮಾಂಚನಗೊಳಿಸುವ ಮತ್ತು ಉತ್ತೇಜಿಸುವಂತಹ ಮನೆಯ ಸುತ್ತಲಿನ ಸಂಭವನೀಯ ಮೂಲಗಳನ್ನು ಒದಗಿಸಿ.
- ಮಗುವನ್ನು ಚರ್ಚೆಗಳಲ್ಲಿ ತೊಡಗಿಸಿಕೊಳ್ಳಬೇಕು – ಅದರ ಜೊತೆ ಸಂಭಾಷಣೆಯಲ್ಲಿ ಕಾಲ ಕಳೆಯಬೇಕು; ಇದು ಬಹುಶಃ ಶಾಲಾವಿಲೋಮ ಪದ್ಧತಿಯಲ್ಲಿ ಅತೀ ಮುಖ್ಯವಾದ ಪೋಷಕರ “ಚಟುವಟಿಕೆ” ಆಗಿರುತ್ತದೆ.
- ಆಟದಂತಹ ದೈಹಿಕ ಕ್ರಿಯಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು, ಆಟವನ್ನು ಆನಂದಿಸಬೇಕು ಹಾಗೂ ಅವರ ಸುತ್ತಲಿನ ಅದ್ಭುತ ಜಗತ್ತನ್ನು ಪ್ರಶಂಸಿಸಬೇಕು.
- ಅವರ ಆಲೋಚನೆ ಮತ್ತು ನಡವಳಿಕೆಯ ಬಗ್ಗೆ ಸ್ವಯಂ ಅರಿವು ಪಡೆದುಕೊಳ್ಳಲು ಪ್ರಯತ್ನಿಸಿ.
- ಉದ್ದೇಶಪೂರ್ವಕವಾಗಿ ಅವರ ಕಲ್ಪನೆಯನ್ನು ವಿಸ್ತರಿಸಿ, ರಚಿಸಲು ಪ್ರಯತ್ನಿಸಿ. ಅವರ ಊಹೆಗಳನ್ನು ಪ್ರಶ್ನಿಸಿ, ಅವರ ಸ್ವಯಂಚಾಲಿತ ಪ್ರಚೋದನೆಗಳನ್ನು ಪರೀಕ್ಷಿಸಿ.
- ಅವರ ಮಗು ಏನು ಮಾಡುತ್ತಿದೆ ಎಂಬುದರ ಬಗ್ಗೆ ಬಹಳ ಜಾಗರೂಕರಾಗಿರಿ.
- ಒಂದು ಮಗುವಿನ ಕ್ರಿಯಾಚಟುವಟಿಕೆಗಳಿಗೆ ಕಾರಣವೇನೆಂಬುದನ್ನು ಗುರುತಿಸಿ, ಅಂದರೆ ಒಂದು ಮಗುವು “ಕಲಿಯಲೆಂದು ಹುಟ್ಟಿರುತ್ತದೆ” ಮತ್ತು ಅದು ಸದಾ ತನ್ನ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿರುತ್ತದೆ.
- ತಮ್ಮ ಮಗುವಿನ ವಿಶೇಷವಾದ ನೆಚ್ಚಿನ ಕಲಿಕೆಯ ವಿಧಾನಗಳು ಏನೆಂಬುದನ್ನು ತಿಳಿದುಕೊಳ್ಳಿ.
- ಒಂದು ಮಗುವಿನ ಭಾವೋದ್ರೇಕತೆಗಳನ್ನು ಅರ್ಥಮಾಡಿಕೊಂಡು ಬೆಂಬಲ ನೀಡಿ, ಮನವೊಲಿಸಲು ಪ್ರಯತ್ನಿಸಿ.
ಶಾಲಾವಿಲೋಮ ಪದ್ಧತಿಯ ತತ್ವಗಳು ಹೀಗಿವೆ:
- ಕಲಿಕೆ ಎಂಬುದು ಸಾರ್ವಕಾಲಿಕವಾಗಿ ನಡೆಯುತ್ತದೆ. ಮೆದುಳು ಎಂದಿಗೂ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಸಮಯವನ್ನು ‘ಕಲಿಕಾ ಅವಧಿ’ ಮತ್ತು ‘ಕಲಿಕೆಯೇತರ ಅವಧಿ’ ಎಂದು ವಿಭಾಗಿಸುವುದು ಅಸಾಧ್ಯ. ಒಬ್ಬ ವ್ಯಕ್ತಿಯ ಸುತ್ತಾ ನಡೆಯುವ ಎಲ್ಲಾ ಘಟನಾವಳಿಗಳು, ಅವರು ಕೇಳುವಂತಹ ಪದಗಳು, ನೋಡುವಂತಹ ದೃಶ್ಯಗಳು, ಸ್ಪರ್ಶಿಸುವ ವಸ್ತುಗಳು, ವಾಸನೆ ಆಘ್ರಣಿಸುವ ಪರಿಮಳ ಮತ್ತು ರುಚಿಯೂ ಕೂಡ, ಒಂದೊಂದು ಬಗೆಯ ಕಲಿಕಾ ಪ್ರಕ್ರಿಯೆಗೆ ಕಾರಣವಾಗುತ್ತದೆ.
- ಕಲಿಕೆಯನ್ನು ಬಲವಂತದಿಂದ ಮಾಡಿಸುವ ಅಗತ್ಯವಿಲ್ಲ. ಕಲಿಕೆಯನ್ನು ಮತ್ತೊಬ್ಬರ ಇಚ್ಛೆಗೆ ವಿರುದ್ಧವಾಗಿ ಮಾಡಲಾಗುವುದಿಲ್ಲ. ಬಲವಂತದ ಕಲಿಕೆಯು ಜನರಲ್ಲಿ ಕೆಟ್ಟ ಭಾವನೆಯನ್ನು ಮೂಡಿಸುತ್ತದೆ ಹಾಗೇ ಅದಕ್ಕೆ ವಿರುದ್ಧವಾಗ ಭಾವನೆಗಳನ್ನು ಬೆಳೆಸುತ್ತದೆ.
- ಕಲಿಯುವುದರಿಂದ ಸಂತಸವಾಗುತ್ತದೆ. ಇದು ತೃಪ್ತಿಕರ ಮತ್ತು ಪ್ರಯೋಜನಕಾರಿಯಾಗಿದೆ. ಅನಗತ್ಯ ಪ್ರತಿಫಲಗಳು/ಬಹುಮಾನಗಳು ಕಲಿಕೆಯನ್ನು ಬೆಂಬಲಿಸುವುದಿಲ್ಲ ಎನ್ನುವ ಕಾರಣದಿಂದ, ಅನಪೇಕ್ಷಿತ ಅಡ್ಡ ಪರಿಣಾಮಗಳನ್ನು ಹೊಂದಿರಬಹುದು.
- ಒಬ್ಬ ವ್ಯಕ್ತಿಯು ಗೊಂದಲಕ್ಕೆ ಒಳಗಾದಾಗ, ಕಲಿಕೆಯು ನಿಲ್ಲುತ್ತದೆ. ಎಲ್ಲಾ ಕಲಿಕೆಯು ಸಾಮಾನ್ಯ ಜ್ಞಾನದ ಮೇಲೆ ಆಧಾರಿತವಾಗಿರಬೇಕು.
- ಒಬ್ಬ ವ್ಯಕ್ತಿಗೆ ಕಲಿಕೆ ಎಂಬುದು ಬಹಳ ಕಷ್ಟದ ಪ್ರಕ್ರಿಯೆ ಎಂದು ಮನವರಿಕೆಯಾದಾಗ ಅದು ಮತ್ತಷ್ಟು ಕಠಿಣವಾಗಿ ಮಾರ್ಪಡುತ್ತದೆ. ದುರಾದೃಷ್ಟವಶಾತ್, ಬಹುತೇಕ ಬೋಧನಾ ವಿಧಾನಗಳು ಕಲಿಕೆಯು ಕಷ್ಟಕರವಾದುದು ಮತ್ತು ಈ ಪಾಠವನ್ನು ವಿದ್ಯಾರ್ಥಿಗಳಿಗೆ ಈ ಹಿಂದೆಯೇ “ಕಲಿಸಲಾಗಿದೆ” ಎಂದು ಊಹಿಸುತ್ತವೆ.
- ಕಲಿಕೆಯು ಯಾವಾಗಲೂ ಅರ್ಥಪೂರ್ಣವಾಗಿರಬೇಕು, ಅದು ಮನಸಿಗೆ ಇಷ್ಟವಿಲ್ಲದೇ ಮಾಡುವ ಕೆಲಸವಾಗಿರಬಾರದು. ಒಬ್ಬ ವ್ಯಕ್ತಿಯು ಮುಖ್ಯ ಅಂಶವನ್ನು ಗಮನಿಸದಿದ್ದಾಗ, ಮಾಹಿತಿಯು ಹೇಗೆ ಸಂಬಂಧಿಸಿದೆ ಅಥವಾ ಅದು ‘ನೈಜ ಜಗತ್ತಿನಲ್ಲಿ’ ಹೇಗೆ ಉಪಯುಕ್ತವಾಗಿದೆ ಎಂದು ಅವರಿಗೆ ತಿಳಿಯದಿದ್ದಾಗ, ಕಲಿಕೆ ಎಂಬುದು ‘ನಿಜ’ಕ್ಕಿಂತಲೂ ಹೆಚ್ಚಾಗಿ ತೋರಿಕೆಯ ಪ್ರದರ್ಶನವಾಗಿರುತ್ತದೆ, ಅದು ದೀರ್ಘಕಾಲ ಉಪಯೋಗಕ್ಕೆ ಬರದ ಕಾರಣ, ತಾತ್ಕಾಲಿಕವಾಗಿರುತ್ತದೆ.
- ಸಾಮಾನ್ಯವಾಗಿ ಕಲಿಕೆ ಎಂಬುದು ಪ್ರಾಸಂಗಿಕವಾದುದು. ಅಂದರೆ ನಾವು ಆನಂದಿಸುವ ಕ್ರಿಯಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಕಲಿಯುತ್ತೇವೆ. ಕಲಿಯುವಿಕೆ ಎಂಬುದು ಒಂದು ರೀತಿಯ ‘ಅಡ್ಡ ಪ್ರಯೋಜನವಾಗಿದೆ’.
- ಸಾಮಾನ್ಯವಾಗಿ, ಕಲಿಕೆ ಎಂಬುದು ಒಂದು ಸಾಮಾಜಿಕ ಚಟುವಟಿಕೆಯಾಗಿದೆ, ಇತರರಿಂದ ಪ್ರತ್ಯೇಕವಾಗಿ ಸಂಭವಿಸುವಂತಹದ್ದಲ್ಲ. ನಮಗೆ ಆಸಕ್ತಿಯಿರುವ ವಿಷಯಗಳ ಬಗ್ಗೆ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವ ಬೇರೆಬೇರೆ ಜನರಿಂದ ನಾವು ಕಲಿಯುತ್ತೇವೆ. ನಾವು ವಿವಿಧ ರೀತಿಯಲ್ಲಿ ಅವರಿಂದಲೇ ಕಲಿಯುತ್ತೇವೆ.
- ಎಲ್ಲಾ ಕಲಿಕಾ ಪ್ರಕ್ರಿಯೆಗಳು ಭಾವನಾತ್ಮಕವಾದ ವಿಚಾರಗಳು ಮತ್ತು ಬುದ್ಧಿವಂತಿಕೆಯಿಂದ ಅಡಕವಾಗಿರುತ್ತವೆ.
Embibe ಉತ್ಪನ್ನ/ಫೀಚರ್‌ಗಳು : ಬಹು ಕಂಟೆಂಟ್ ವಿಧಗಳು
ಕಲಿಕೆ ಎಂಬುದು ಇನ್ನು ಮುಂದೆ ಕೇವಲ ಪರೀಕ್ಷೆಯಲ್ಲಿ ತೆಗೆಯುವ ಅಂಕಗಳಿಗೆ ಸೀಮಿತವಾಗಿಲ್ಲ! ಪಠ್ಯಕ್ರಮವನ್ನು ಮೀರಿದ ಕಲಿಕಾ ಪ್ರಕ್ರಿಯೆಯು ಓದುಗರಿಗೆ ಮನಸಿಗೆ ಮುದನೀಡುತ್ತದೆ. Embibe ವಿದ್ಯಾರ್ಥಿಗಳಿಗೆ ವಿಚಾರಸಂಕಿರಣಗಳ ಬಗ್ಗೆ ಸಮಗ್ರವಾದ ಜ್ಞಾನವನ್ನು ಪಡೆಯುವ ಉದ್ದೇಶವಿರುತ್ತದೆ. Embibe ನ ‘’ಎಕ್ಸ್‌ಪ್ಲೇನರ್’’ ವೀಡಿಯೋಗಳು ಹಾಗೂ ವೆಬ್‌ನಿಂದ ರಚಿಸಲಾದ ವೀಡಿಯೋಗಳು ಯಾವುದೇ ಒಂದು ವಿಷಯದ ಬಗ್ಗೆ ಬಹಳಷ್ಟು ಆಳವಾಗಿ ಅರ್ಥಮಾಡಿಕೊಂಡು ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತವೆ. ನಮ್ಮದೇ ಆದ ‘ಸರ್ಚ್’ನಿಂದ ನಡೆಸಲ್ಪಡುವ ‘ಲರ್ನ್’ ಮಾಡ್ಯೂಲ್, ಈ ಕೆಳಗಿನ ಪ್ರಕಾರಗಳ ಒಂದು ಅಥವಾ ಹೆಚ್ಚಿನ ವೀಡಿಯೊಗಳನ್ನು ಒಳಗೊಂಡಿದೆ:
- DIY ( ನೀವೇ ಮಾಡಿನೋಡಿ) ವೀಡಿಯೊಗಳು,
- ಕೂಬೊ ವೀಡಿಯೊಗಳು,
- ಮಿಥ್ಯಾ ಪ್ರಯೋಗಾಲಯ ವಿಡಿಯೋಗಳು,
- ನಿಜ-ಜೀವನದ ಉದಾಹರಣೆಗಳ ವೀಡಿಯೊಗಳು,
- ಸ್ಪೂಫ್‌ಗಳು ಅಥವಾ ಮೋಜಿನ-ರೀತಿಯ ವೀಡಿಯೊಗಳು,
- ಪ್ರಯೋಗಗಳು,
- ಪರಿಹರಿಸಿದ ಉದಾಹರಣೆಗಳು
Embibe ಅಪ್ಲಿಕೇಶನ್ ನಲ್ಲಿರುವ ಸಂವಾದಾತ್ಮಕ, ಆಕರ್ಷಕ 2D ಮತ್ತು 3D ಜಗತ್ತು, ವಿದ್ಯಾರ್ಥಿಗಳಲ್ಲಿ ತೀವ್ರವಾದ ಕುತೂಹಲವನ್ನು ಉಂಟುಮಾಡುತ್ತದೆ. ತನ್ಮೂಲಕ, ಅವರಿಗೆ ಅಧ್ಯಯನದ ಬಗ್ಗೆ ಪ್ರೀತಿ ಮೂಡುವಂತೆ ಮಾಡುತ್ತದೆ. ನಮ್ಮ ನಿರೂಪಕರು ವಿದ್ಯಾರ್ಥಿಗಳ ಕಲ್ಪನಾಶಕ್ತಿಯನ್ನು ಸೆರೆಹಿಡಿದು, ಮೋಜುಮಸ್ತಿ ಉಂಟಾಗುವ ರೀತಿಯಲ್ಲಿ ಕಥೆಯನ್ನು ಹೆಣೆಯುತ್ತಾರೆ.