• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರ 2023: ಸಂಪೂರ್ಣ ಮಾಹಿತಿ

img-icon

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರದ ಕುರಿತು: ಪ್ರತಿಯೊಂದು ಮಗುವಿನ ಜೀವನದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವು ಮಹತ್ವ ಪೂರ್ಣವಾಗಿದೆ, ಏಕೆಂದರೆ ಇದು ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯಾಗಿರುತ್ತದೆ. ಮೊದಲ ಹತ್ತು ವರ್ಷಗಳ ಔಪಚಾರಿಕ ಶಿಕ್ಷಣದ ಅಂತ್ಯದಲ್ಲಿ ವಿದ್ಯಾರ್ಥಿಗಳ ಕಲಿಕಾ ಅನುಭವಗಳನ್ನು ಮತ್ತು ಗುಣಾತ್ಮಕ ಕಲಿಕೆಯನ್ನು ಒರೆಗೆ ಹಚ್ಚುವ ಸಾಧನ ಪರೀಕ್ಷೆಯೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಾಗಿದೆ. ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಶಿಕ್ಷಣ ನೀತಿಗಳ ಆಶಯ, ಪಾಲಕರ ನಿರೀಕ್ಷೆಗಳು, ಶಿಕ್ಷಕರ ವೃತ್ತಿ ಬೆಳವಣಿಗೆ ಮತ್ತು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ.

ರಾಜ್ಯದಲ್ಲಿ ಪ್ರತಿ ವರ್ಷವೂ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದು, ಈ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದ ಮೈಲಿಗಲ್ಲಾಗಿದ್ದು, ಉನ್ನತ ಶಿಕ್ಷಣವನ್ನು ಗಳಿಸಲು, ವೃತ್ತಿ ಶಿಕ್ಷಣವನ್ನು ಪಡೆಯಲು, ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ಅಲ್ಲದೇ ಜೀವನ ನಿರ್ವಹಣೆಗೂ ದಿಕ್ಸೂಚಿಯಾಗಿದೆ. ಆದ್ದರಿಂದ ಜನ ಸಮುದಾಯದಲ್ಲಿ, ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಣ ಇಲಾಖೆಯಲ್ಲಿ ಈ ಪರೀಕ್ಷೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಕಲಿಕಾ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆಯಿಂದ ನವೀನ ಕಲಿಕಾ ವಾತಾವರಣ ನಿರ್ಮಾಣವಾಗುತ್ತಿದೆ. ಅಲ್ಲದೆ ವಿದ್ಯಾರ್ಥಿಗಳ ತಾರ್ಕಿಕ ಚಿಂತನ ಮಟ್ಟವೂ ಹೆಚ್ಚಾಗುತ್ತಿದ್ದು, ಪರೀಕ್ಷಾ ಪದ್ಧತಿಯಲ್ಲಿ ನಾವೀನ್ಯತೆ ಅತ್ಯಾವಶ್ಯಕವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2019 ದಾಖಲೆಯು ಇದೇ ತತ್ವವನ್ನು ಪ್ರತಿಪಾದಿಸುತ್ತದೆ. 

ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರದ ಮಹತ್ವ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ತನ್ನ ಮಂಡಳಿಗೆ ಮಾನ್ಯತೆ ಪಡೆದಿರುವ ಎಲ್ಲಾ ಶಾಲೆಗಳಿಗೆ ಕರ್ನಾಟಕ ಎಸ್.ಎಸ್.ಎಲ್.ಸಿ. ಪ್ರವೇಶ ಪ್ರತ್ರ 2023 ಅನ್ನು ಫೆಬ್ರವರಿಯಲ್ಲಿ (ತಾತ್ಕಾಲಿಕ) ನೀಡಲಾಗುತ್ತದೆ. ಎಲ್ಲಾ ಶಾಲಾ ಅಧಿಕಾರಿಗಳು ತಮ್ಮ ಶಾಲೆಗಳ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಅಂತಿಮ ಪ್ರವೇಶ ಪತ್ರ 2023 ಅನ್ನು ಮಾರ್ಚ್‌ನಲ್ಲಿ ನಡೆಯುವ ಪರೀಕ್ಷೆಗಳಿಗೆ ಬಿಡುಗಡೆ ಮಾಡಲಾಗುತ್ತದೆ.

ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್‌.ಎಸ್‌.ಎಲ್‌.ಸಿ ಪ್ರವೇಶ ಪತ್ರವು ಅತ್ಯಂತ ಮಹತ್ವದ್ದಾಗಿದೆ. ಪ್ರವೇಶ ಪತ್ರವು ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ನೀಡುವ ಟಿಕೆಟ್ ಇದ್ದಂತೆ, ಪ್ರವೇಶಪತ್ರ ಇಲ್ಲದ ವಿದ್ಯಾರ್ಥಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ಇದು ವಿದ್ಯಾರ್ಥಿಗೆ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರಾಯೋಗಿಕ ಮತ್ತು ತಾತ್ವಿಕ ಪರೀಕ್ಷೆಗಳಿಗೆ ಅದನ್ನು ಕೊಂಡೊಯ್ಯಬೇಕು. ಪರೀಕ್ಷೆಯ ಎಲ್ಲಾ ದಿನಗಳಲ್ಲಿ ಅವರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 10ನೇ ತರಗತಿಯ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರಕ್ಕೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

ಪ್ರವೇಶ ಪತ್ರದಲ್ಲಿ, ವಿದ್ಯಾರ್ಥಿಯ ಹೆಸರು, ರೋಲ್ ಸಂಖ್ಯೆ, ಪರೀಕ್ಷೆಯ ದಿನಾಂಕಗಳು, ಪರೀಕ್ಷೆಯ ಸ್ಥಳ, ಸಮಯ ಇತ್ಯಾದಿಗಳಂತಹ ವಿದ್ಯಾರ್ಥಿಯ ವೈಯಕ್ತಿಕ ಮಾಹಿತಿಯನ್ನು ಮುದ್ರಿಸಲಾಗುತ್ತದೆ. ಕರ್ನಾಟಕ ಎಸ್‌.ಎಸ್‌.ಎಲ್‌.ಸಿ ಪ್ರವೇಶ ಪತ್ರವನ್ನು ಫಲಿತಾಂಶ ಪ್ರಕಟವಾಗುವವರೆಗೆ ಸುರಕ್ಷಿತವಾಗಿ ಇಟ್ಟುಕೊಂಡಿರಬೇಕು.

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ (ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ, ಮನರಾವರ್ತಿತ ಶಾಲಾ ಹಾಗೂ ಖಾಸಗಿ ಅಭ್ಯರ್ಥಿಗಳ) ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ವಿದ್ಯಾರ್ಥಿಗಳ ವಿವರಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಆನ್‌ಲೈನ್‌ ಮೂಲಕ ಅಪ್‌ಡೇಟ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ಮಂಡಳಿಯ ಜಾಲತಾಣದಲ್ಲಿ ಲಭ್ಯವಿರುವ ತಂತ್ರಾಂಶವನ್ನು ಬಳಸಿ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆಯ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು, ಪರಿಶೀಲಿಸಿ ಹಾಗೂ ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳ ತಿದ್ದುಪಡಿಗಳನ್ನು ಅಪ್‌ಡೇಟ್ ಮಾಡಬಹುದಾಗಿದೆ.

ತಾತ್ಕಾಲಿಕ ಪ್ರವೇಶಪತ್ರದಲ್ಲಿ 9 ಅಂಶಗಳಲ್ಲಿ ತಿದ್ದುಪಡಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ, ದೈಹಿಕ ಸ್ಥಿತಿ, ಧರ್ಮ, ಫೋಟೋ ಮತ್ತು ಸಹಿಗಳಲ್ಲಿ ಯಾವುದಾದರು ತಪ್ಪು ಇದ್ದಲ್ಲಿ, ತಿದ್ದುಪಡಿ ಮಾಡಿ ಪರಿಷ್ಕೃತ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.

ಶಾಲಾ ಅಭ್ಯರ್ಥಿಗಳು ಎಸ್.ಎ.ಟಿ.ಎಸ್‌ ನಂಬರ್‌ (SATS NUMBER), ಖಾಸಗಿ ಅಭ್ಯರ್ಥಿಗಳು ರೆಫೆರೆನ್ಸ್ ನಂಬರ್ (REFERENCE NUMBER) ಹಾಗೂ ಮನರಾವರ್ತಿತ ಅಭ್ಯರ್ಥಿಗಳು ನೋಂದಣಿ ಸಂಖ್ಯೆ (REGISTRATION NUMBER) ನಮೂದಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ನಿಗಧಿತ ಅವಧಿಯೊಳಗೆ ಮಾಡಬಹುದಾಗಿರುತ್ತದೆ.

ಮನರಾವರ್ತಿತ ಅಭ್ಯರ್ಥಿಗಳಿಗೆ ಫೋಟೋ ಮತ್ತು ಸಹಿಯನ್ನು ಮಾತ್ರ ತಿದ್ದುಪಡಿ ಮಾಡಲು ಮಾಡಿಕೊಡಲಾಗಿದೆ. ಅವಕಾಶ

ಮೇಲ್ಕಂಡ ಈ ಅಂಶಗಳನ್ನು ಹೊರತುಪಡಿಸಿ ಮಾಧ್ಯಮ, ವಿದ್ಯಾರ್ಥಿಯ ಬಗೆ (Type of the Student) ಹಾಗೂ ವಿಷಯಗಳಲ್ಲಿ ಯಾವುದಾದರೂ ಬದಲಾವಣೆಗಳಿದ್ದಲ್ಲಿ ಮಂಡಳಿಯಲ್ಲಿನ ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಲಿಖಿತವಾಗಿ ಮನವಿಯನ್ನು ನಿಗಧಿತ ಸಮಯದೊಳಗೆ ಸಲ್ಲಿಸಬೇಕಾಗಿರುತ್ತದೆ,

ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರ 2023: ಡೌನ್‌ಲೋಡ್ ಮಾಡುವ ವಿಧಾನ

ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕುಳಿತುಕೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಆಯಾ ಶಾಲೆಯ ಅಧಿಕಾರಿಗಳಿಗೆ ಮಾತ್ರ ಅನುಮತಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಯ ಪ್ರಾಂಶುಪಾಲರಿಂದ ಅಥವಾ ಪರೀಕ್ಷಾ ಸಂಸ್ಥೆಯಿಂದ ತಮ್ಮ ಪ್ರವೇಶ ಪತ್ರವನ್ನು ಪಡೆದುಕೊಳ್ಳಬೇಕು. ಹಾಗಾಗಿ, ಕರ್ನಾಟಕ ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಶಾಲೆಯು ಅನುಸರಿಸಬೇಕಾದ ಕಾರ್ಯವಿಧಾನವನ್ನು ಕೆಳಗೆ ವಿವರಿಸಲಾಗಿದೆ:

  • ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್ ಲಿಂಕ್‌ಗೆ ಭೇಟಿ ನೀಡಿ
  • ಈಗ, ಶಾಲಾ ಪ್ರಾಧಿಕಾರವು ವೆಬ್‌ಸೈಟ್‌ನ ಮುಖಪುಟದಲ್ಲಿ ಎಸ್.ಎಸ್.ಎಲ್.‌ಸಿ ಎಂದಿರುವ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು
  • ಮಂಡಳಿಯು SSLC ಪ್ರವೇಶ ಪತ್ರವನ್ನು ಶಾಲೆಯ ಲಾಗಿನ್ ಫಾರ್ಮ್ ಮೂಲಕ ಬಿಡುಗಡೆ ಮಾಡುತ್ತದೆ
  • ಆದ್ದರಿಂದ, ಪ್ರತಿ ಶಾಲೆಯು ಬೋರ್ಡ್ ಒದಗಿಸಿದಂತೆ ತಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಡೌನ್‌ಲೋಡ್ ಮಾಡಬೇಕಾಗುತ್ತದೆ
  • ಅವರ ಲಾಗಿನ್ ವಿವರಗಳನ್ನು ನಮೂದಿಸಿದ ನಂತರ, ಶಾಲೆಯು ಅವರ ಎಲ್ಲಾ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಅವರ ಪರದೆಯ ಮೇಲೆ ಪಡೆಯುತ್ತದೆ
  • ಮೊದಲಿಗೆ, ಅವರು ಪ್ರವೇಶ ಪತ್ರವನ್ನು ಒಳಗೊಂಡಿರುವ ಫೈಲ್ ಅನ್ನು ಸೇವ್ ಮಾಡಬೇಕು ಮತ್ತು ನಂತರ ಅದರ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಬೇಕು, ಅದನ್ನು ಅವರು ವಿದ್ಯಾರ್ಥಿಗಳಿಗೆ ಹಸ್ತಾಂತರಿಸುತ್ತಾರೆ.
  • ಆದ್ದರಿಂದ, ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಸ್ವೀಕರಿಸುವ ದಿನಾಂಕಗಳ ಬಗ್ಗೆ ವಿಚಾರಿಸಲು ತಮ್ಮ ಶಾಲಾ ಅಧಿಕಾರಿಗಳನ್ನು ಸಂಪರ್ಕಿಸಬಹುದು
  • ಈ ನಿಟ್ಟಿನಲ್ಲಿ ಶಾಲಾ ಸಂಸ್ಥೆಯು ಘೋಷಿಸಿದ ದಿನಾಂಕ(ಗಳ)ಳಂದು ಮಾತ್ರ ಎಲ್ಲಾ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಪಡೆದುಕೊಳ್ಳಬೇಕು

2023ನೇ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ದಿನಾಂಕ: 15.06.2023 (ತಾತ್ಕಾಲಿಕ) ರಂದು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸುತ್ತಾರೆ. ಒಂದು ವೇಳೆ ಏನಾದರೂ ವ್ಯತ್ಯಯಗಳು ಕಂಡು ಬಂದಲ್ಲಿ ಕೂಡಲೇ ಮಂಡಳಿಯ ಸಂಬಂಧಿಸಿದ ಪರಿಶೀಲನಾ ಶಾಖೆಯ ಶಾಖಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸುವುದು.

ಅಂತಿಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಬಗ್ಗೆ

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ (ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ, ಪುನರಾವರ್ತಿತ ಶಾಲಾ ಹಾಗೂ ಖಾಸಗಿ ಅಭ್ಯರ್ಥಿಗಳ) ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ಮಂಡಳಿಯ ಜಾಲತಾಣದ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 ಪ್ರವೇಶ ಪತ್ರಗಳಲ್ಲಿನ ಎಲ್ಲಾ ಮಾಹಿತಿಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಂಡ ನಂತರ ಆಯಾ ಮಂಡಳಿಯ ಜಾಲತಾಣದಲ್ಲಿ ಲಭ್ಯವಿರುವ ತಂತ್ರಾಂಶವನ್ನು ಬಳಸಿ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆಯ ಅಂತಿಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು, ಪರಿಶೀಲಿಸಿ ವಿದ್ಯಾರ್ಥಿಗಳಿಗೆ ವಿತರಿಸಿರುವುದನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ರವರು ಖಾತರಿಪಡಿಸಿಕೊಳ್ಳಬೇಕು,

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ-1966ರ ಅಧ್ಯಾಯ-6 ನಿಯಮ-37(i)(ii)ರ ಅನ್ವಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕುಳಿತುಕೊಳ್ಳುವ ಶಾಲಾ ವಿದ್ಯಾರ್ಥಿಗಳು ಕನಿಷ್ಠ ಶೇ.75 ರಷ್ಟು ಹಾಜರಾತಿ ಹೊಂದುವುದು ಕಡ್ಡಾಯವಾಗಿರುತ್ತದೆ. ಶೇ.75 ರಷ್ಟು ಹಾಜರಾತಿಗೆ ಹದಿನೈದು ದಿನಗಳಿಗೆ ಮೀರದಂತೆ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳ ಹಾಜರಾತಿ ಕೊರತೆಯನ್ನು ಸಕಾರಣಗಳಿದ್ದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಥರೇ ಸದರಿ ಹಾಜರಾತಿ ಕೊರತೆಯನ್ನು ಮನ್ನಾ ಮಾಡಿ ವಿದ್ಯಾರ್ಥಿಗೆ ಪ್ರವೇಶ ಪತ್ರ ವಿತರಿಸಬೇಕು. ಯಾವುದೇ ಪ್ರಕರಣದಲ್ಲಿ ಹಾಜರಾತಿ ಕೊರತೆಯು ಹದಿನೈದು ದಿನಗಳಿಗೆ ಮೀರಿ ಹಾಗೂ ಮೂವತ್ತು ದಿನಗಳಿಗೆ ಮೀರದೇ ಇರುವ ಹಾಜರಾತಿ ಕೊರತೆಯನ್ನು ಮನ್ನಾ ಮಾಡಲು ಸಕಾರಣಗಳಿದ್ದಲ್ಲಿ ಶಾಲಾ ಮುಖ್ಯಸ್ಥರು ದೃಢೀಕರಿಸಿ ಮಂಡಳಿಯ ಸಂಬಂಧಿಸಿದ ಶಾಖಾಧಿಕಾರಿಗಳಿಗೆ ಕಳುಹಿಸಿಕೊಡಬೇಕು,

ಮಂಡಳಿಯಿಂದ ಸದರಿ ಹಾಜರಾತಿ ಕೊರತೆಯು ಮನ್ನಾ ಆದ ನಂತರ ಸಂಬಂಧಿಸಿದ ವಿದ್ಯಾರ್ಥಿಗೆ ಪ್ರವೇಶ ಪತ್ರ ವಿತರಿಸಬೇಕು, ಯಾವುದೇ ಪ್ರಕರಣದಲ್ಲಿ ಮೂವತ್ತು ದಿನಗಳಿಗಿಂತ ಹೆಚ್ಚು ದಿನಗಳ ಹಾಜರಾತಿ ಕೊರತೆ ಹೊಂದಿ ಪರೀಕ್ಷೆಗೆ ಕುಳಿತುಕೊಳ್ಳಲು ಅನರ್ಹರಾದ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ಸಂಬಂಧಿಸಿದ ವಿದ್ಯಾರ್ಥಿಗೆ ವಿತರಣೆ ಮಾಡದ ಪ್ರವೇಶ ಪತ್ರದ ಮೇಲೆ ಶೇ.75ರ ಕನಿಷ್ಠ ಹಾಜರಾತಿಗೆ 30 ದಿನಗಳಿಗೂ ಮೀರಿ ಹಾಜರಾತಿ ಕೊರತೆ ಇರುತ್ತದೆಂದು ನಮೂದಿಸಿ ಅಂತಹ ಪ್ರವೇಶ ಪತ್ರಗಳನ್ನು ಶಾಲಾ ಮುಖ್ಯಸ್ಥರು ದೃಢೀಕರಿಸಿ ಪರೀಕ್ಷೆ ಪ್ರಾರಂಭವಾಗುವ ಮುನ್ನ ಮಂಡಳಿಗೆ ತಲುಪುವಂತೆ ಹಿಂದಿರುಗಿಸುವುದು ಕಡ್ಡಾಯವಾಗಿರುತ್ತದೆ.

ಹಾಜರಾತಿ ಕೊರತೆಯಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮಂಡಳಿಗೆ ಹಿಂದಿರುಗಿಸುವಾಗ ಮಾಹಿತಿ ಭರ್ತಿ ಮಾಡಿ ಸಂಬಂಧಿಸಿದ ಪರಿಶೀಲನಾ ಶಾಖೆಗಳಿಗೆ ಕಳುಹಿಸಬೇಕು,

ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪಾಸಾದ ವಿಷಯಕ್ಕೆ ಪರೀಕ್ಷೆ ಬರೆಯುವಂತೆ ಮುದ್ರಣವಾಗಿದ್ದಲ್ಲಿ ಪಾಸಾದ ಬಗ್ಗೆ ಚುಕ್ಕೆ ಗುರುತಿಲ್ಲದ ಫಲಿತಾಂಶ ಪಟ್ಟಿಯನ್ನು ಮುಖ್ಯಶಿಕ್ಷಕರು ದೃಢೀಕರಿಸಿ ಪರೀಕ್ಷೆ ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಶಾಖಾಧಿಕಾರಿಗಳಿಗೆ ಕಳುಹಿಸಬೇಕು, ಇಲ್ಲವಾದಲ್ಲಿ ವಿದ್ಯಾರ್ಥಿ ಫಲಿತಾಂಶ ಪ್ರಕಟಣೆ ವಿಳಂಬವಾಗುತ್ತದೆ.

ಮಂಡಳಿಯ ಜಾಲತಾಣದಲ್ಲಿ ಡ್ರಾಫ್ಟ್ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡು ತಿದ್ದುಪಡಿಗಳಿದ್ದಲ್ಲಿ, ತಿದ್ದುಪಡಿ ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿದ್ದರೂ, ತಿದ್ದುಪಡಿ ಮಾಡಿಕೊಳ್ಳದೆ ಇರುವುದರಿಂದ ಪ್ರತಿ ತಿದ್ದುಪಡಿಗೆ ಶುಲ್ಕವನ್ನು ನಿಗದಿತ ದಂಡ ಹಾಗೂ ನಿಗದಿತ ದಿನಾಂಕದೊಳಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರ 2023ಕ್ಕೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಎಸ್.ಎಸ್.ಎಲ್.ಸಿ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಯಾವಾಗ ವಿತರಿಸಲಾಗುತ್ತದೆ?

ಉತ್ತರ: ಮಾರ್ಚ್/ಏಪ್ರಿಲ್‌ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಗಳಿಗೂ ಒಂದೆರಡು ವಾರಗಳ ಮುಂಚಿತವಾಗಿ ವಿತರಿಸಲಾಗುತ್ತದೆ. ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದಲ್ಲಿ ಶಾಲಾ ಲಾಗಿನ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸುತ್ತಾರೆ.

ಪ್ರ. 2: ಪ್ರವೇಶ ಪತ್ರದಲ್ಲಿನ ಏನೆಲ್ಲಾ ವಿವರಗಳನ್ನು ವಿದ್ಯಾರ್ಥಿಗಳು ಪರೀಶೀಲಿಸಿಕೊಳ್ಳಬೇಕು?

ಉತ್ತರ: ವಿದ್ಯಾರ್ಥಿಗಳ ಹೆಸರು, ಭಾವಚಿತ್ರ, ಸಹಿ, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ, ಮಾಧ್ಯಮ, ಪರೀಕ್ಷೆಗೆ ತೆಗೆದುಕೊಳ್ಳುವ ವಿಷಯಗಳು, ವಿದ್ಯಾರ್ಥಿಯ ವಿಧ ಇತ್ಯಾದಿ ಸಂಪೂರ್ಣ ವಿವರಗಳನ್ನು ವಿದ್ಯಾರ್ಥಿಗಳು ಪರಿಶೀಲಿಸಿಕೊಳ್ಳಬೇಕು.

ಪ್ರ. 3:  ಪ್ರವೇಶ ಪತ್ರದಲ್ಲಿ ಬದಲಾವಣೆಗಳು ಏನಾದರೂ ಇದ್ದಲ್ಲಿ ಏನು ಮಾಡಬೇಕು?

ಉತ್ತರ: ಹೆಸರು, ಭಾವಚಿತ್ರ, ಮಾಧ್ಯಮ, ತಂದೆ ಹೆಸರು, ತಾಯಿ ಹೆಸರು, ಜನ್ಮ ದಿನಾಂಕ ಇತ್ಯಾದಿ ವಿವರಗಳಲ್ಲಿ ಬದಲಾವಣೆ ಇದ್ದಲ್ಲಿ ಶಾಲಾ ದಾಖಲಾತಿ ವಹಿಯ ಉಧೃತ ಭಾಗ ಮತ್ತು ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳ ಜ್ಞಾಪನ ಪತ್ರವನ್ನು ಪರಿಶೀಲನಾ ಶಾಖೆಗೆ ನಿಗದಿತ ದಿನಾಂಕದೊಳಗೆ ಕಳುಹಿಸಿಕೊಡಬೇಕು. ಹೀಗೆ ತಿದ್ದುಪಡಿಗೆ ಕಳುಹಿಸಿದ ಪ್ರವೇಶ ಪತ್ರಗಳನ್ನು ಮಂಡಳಿಯಲ್ಲಿನ ದಾಖಲೆಗಳೊಂದಿಗೆ ಪರಿಶೀಲಿಸಿ ಸರಿಪಡಿಸಲಾಗುತ್ತದೆ. 

ಪ್ರ. 4: ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಹಾಜರಾತಿ ಪ್ರಮಾಣ ಎಷ್ಟು ಇರಬೇಕು?

ಉತ್ತರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ-1966ರ ಅಧ್ಯಾಯ-6 ನಿಯಮ-37(i)(ii)ರ ಅನ್ವಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕುಳಿತುಕೊಳ್ಳುವ ಶಾಲಾ ವಿದ್ಯಾರ್ಥಿಗಳು ಕನಿಷ್ಠ ಶೇ.75 ರಷ್ಟು ಹಾಜರಾತಿ ಹೊಂದುವುದು ಕಡ್ಡಾಯವಾಗಿರುತ್ತದೆ.

ಶೇ.75 ರಷ್ಟು ಹಾಜರಾತಿಗೆ ಹದಿನೈದು ದಿನಗಳಿಗೆ ಮೀರದಂತೆ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳ ಹಾಜರಾತಿ ಕೊರತೆಯನ್ನು ಸಕಾರಣಗಳಿದ್ದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಥರೇ ಸದರಿ ಹಾಜರಾತಿ ಕೊರತೆಯನ್ನು ಮನ್ನಾ ಮಾಡಿ ವಿದ್ಯಾರ್ಥಿಗೆ ಪ್ರವೇಶ ಪತ್ರ ವಿತರಿಸುತ್ತಾರೆ.

ಯಾವುದೇ ಪ್ರಕರಣದಲ್ಲಿ ಹಾಜರಾತಿ ಕೊರತೆಯು ಹದಿನೈದು ದಿನಗಳಿಗೆ ಮೀರಿ ಹಾಗೂ ಮೂವತ್ತು ದಿನಗಳಿಗೆ ಮೀರದೇ ಇರುವ ಹಾಜರಾತಿ ಕೊರತೆಯನ್ನು ಮನ್ನಾ ಮಾಡಲು ಸಕಾರಣಗಳಿದ್ದಲ್ಲಿ ಶಾಲಾ ಮುಖ್ಯಸ್ಥರು ದೃಢೀಕರಿಸಿ ಮಂಡಳಿಯ ಸಂಬಂಧಿಸಿದ ಶಾಖಾಧಿಕಾರಿಗಳಿಗೆ ಕಳುಹಿಸಿಕೊಡಬೇಕು, ಮಂಡಳಿಯಿಂದ ಸದರಿ ಹಾಜರಾತಿ ಕೊರತೆಯು ಮನ್ನಾ ಆದ ನಂತರ ಸಂಬಂಧಿಸಿದ ವಿದ್ಯಾರ್ಥಿಗೆ ಪ್ರವೇಶ ಪತ್ರ ವಿತರಿಸಬೇಕು,

ಯಾವುದೇ ಪ್ರಕರಣದಲ್ಲಿ ಶೇ.75ರ ಕನಿಷ್ಠ ಹಾಜರಾತಿಗೆ 30 ದಿನಗಳಿಗೂ ಮೀರಿ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗೆ ವಿತರಣೆ ಮಾಡದೆ ರದ್ದುಪಡಿಸಲಾಗುತ್ತದೆ, ಹಾಗೂ ರದ್ದುಪಡಿಸಿದ ಪ್ರವೇಶಪತ್ರಗಳನ್ನು ಕಡ್ಡಾಯವಾಗಿ ಮಂಡಳಿಗೆ ತಲುಪಿಸಲಾಗುತ್ತದೆ.

ಪ್ರ. 5: 2021-22ನೇ ಸಾಲಿನಲ್ಲಿ ರಾಜ್ಯದಾದ್ಯಂತ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು?

ಉತ್ತರ: 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಒಟ್ಟು 873859 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಇವರಲ್ಲಿ 853436 ವಿದ್ಯಾರ್ಥಿಗಳು ಹಾಜರಾಗಿದ್ದರು. 

ಕರ್ನಾಟಕ ಎಸ್.ಎಸ್.ಎಲ್.ಸಿ ಪರೀಕ್ಷೆ 2022-23: ನೋಂದಣಿ ಕುರಿತು ಎಲ್ಲಾ ಅಗತ್ಯ ಮಾಹಿತಿಯನ್ನು ನಿಮಗೆ ಒದಗಿಸಲಾಗಿದೆ. ಎಸ್.ಎಸ್.ಎಲ್.ಸಿ  ಪರೀಕ್ಷೆ ಬರೆಯಲು ಯೋಜಿಸುತ್ತಿರುವ ಅಭ್ಯರ್ಥಿಗಳು Embibe ನಲ್ಲಿ ಎಸ್‌ಎಸ್ಎಲ್‌ಸಿ ಲರ್ನ್ ನೋಡಿ. ನಿಮ್ಮ ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾದ 3D ವಿಡಿಯೋಗಳನ್ನು ನೋಡುತ್ತಾ ಪಠ್ಯಗಳನ್ನು ಕಲಿಯಿರಿ. ಬಳಿಕ ಅಣಕು ಟೆಸ್ಟ್‌ ತೆಗೆದುಕೊಂಡು ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸಿಕೊಳ್ಳಿ. ವಾಸ್ತವಿಕ ಪರೀಕ್ಷೆಗಿಂತ ಮುನ್ನ ನಿಮ್ಮ ತಪ್ಪುಗಳನ್ನು ಗುರುತಿಸಿಕೊಳ್ಳುವುದು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈಯುವುದರ ಮೊದಲ ಹೆಜ್ಜೆಯಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರ 2023” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ