• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 01-09-2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್ಎಸ್ಎಲ್‌ಸಿ ಪರೀಕ್ಷೆ 2022-23 ಪರೀಕ್ಷೆ ದಿನಾಂಕಗಳು

img-icon

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಪರೀಕ್ಷಾ ದಿನಾಂಕಗಳು: ಪ್ರತಿ ವರ್ಷ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಸೂಚನೆಯೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಕ್ರಿಯೆಗಳು ಆರಂಭವಾಗುತ್ತವೆ. ಈ ಅಧಿಸೂಚನೆಯ ನಂತರ ಅರ್ಹ ಅಭ್ಯರ್ಥಿಗಳು ಶಾಲೆಗಳ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ನಮೂನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ನೀಡುವುದು ಸೂಕ್ತ. ಅರ್ಜಿಯನ್ನು ಜನವರಿ 2023 ರಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ‌ (ಲಿಂಕ್) ಬಿಡುಗಡೆ ಮಾಡುತ್ತದೆ, ಅಂದರೆ ಪರೀಕ್ಷೆಗಳು ಮಾರ್ಚ್-ಏಪ್ರಿಲ್ 2023ರಲ್ಲಿ ನಡೆಯಲಿವೆ.

ಎಸ್.ಎಸ್.ಎಲ್.ಸಿ ಪರೀಕ್ಷೆ ದಿನಾಂಕ (ತಾತ್ಕಾಲಿಕ)ವಿಷಯಗಳು
ಮಾರ್ಚ್ 21, 2023ಪ್ರಥಮ ಭಾಷೆ
ಮಾರ್ಚ್ 24, 2023ಗಣಿತ, ಸಮಾಜಶಾಸ್ತ್ರ
ಮಾರ್ಚ್ 26, 2023ಅರ್ಥಶಾಸ್ತ್ರ
ಮಾರ್ಚ್ 28, 2023ಕೋರ್ ವಿಷಯಗಳು: ವಿಜ್ಞಾನ, ಸಮಾಜ ವಿಜ್ಞಾನ, ಕರ್ನಾಟಕ ಸಂಗೀತ
ಮಾರ್ಚ್ 30, 2023ತೃತೀಯ ಭಾಷೆ, NSQF ಪರೀಕ್ಷಾ ವಿಷಯಗಳು
ಏಪ್ರಿಲ್ 2, 2023ದ್ವಿತೀಯ ಭಾಷೆ
ಏಪ್ರಿಲ್ 5, 2023ಸಮಾಜ ವಿಜ್ಞಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರವೇಶ ಪತ್ರ

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಲ ಮುಖ್ಯಸ್ಥರು ತಮ್ಮ ಶಾಲೆಯ (ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ, ಪುನರಾವರ್ತಿತ ಶಾಲಾ ಹಾಗೂ ಖಾಸಗಿ ಅಭ್ಯರ್ಥಿಗಳ) ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ಮಂಡಳಿಯ ಜಾಲತಾಣದ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ದಿನಾಂಕ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಪ್ರತಿ ವರ್ಷ ಸಾಮಾನ್ಯವಾಗಿ ಕರ್ನಾಟಕ  ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮೇ ತಿಂಗಳ ಎರಡನೇ ವಾರದಲ್ಲಿ ಪ್ರಕಟಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ಸೈಟ್‌ನಿಂದ ಪರಿಶೀಲಿಸಬಹುದು.

ವೆಬ್‌ಸೈಟ್‌ ಮೂಲಕ ಫಲಿತಾಂಶವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳ ಪರೀಕ್ಷಾ ಹಾಜರಾತಿ ಸಂಖ್ಯೆ, ಹುಟ್ಟಿದ ದಿನಾಂಕ, ಶಾಲಾ ಸಂಖ್ಯೆ ಮತ್ತು ಕೇಂದ್ರ ಸಂಖ್ಯೆ ಇತ್ಯಾದಿ ಮಾಹಿತಿಗಳು ಅಗತ್ಯವಾಗಿರುತ್ತವೆ.

KSEEB ಮಂಡಳಿ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುವ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ವಿದ್ಯಾರ್ಥಿಗಳು ಪರಿಶೀಲಿಸಬೇಕು ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು. ಆದಾಗ್ಯೂ, ಕರ್ನಾಟಕ ಎಸ್‌ಎಸ್‌ಎಲ್‌ಸಿ 2022 ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಅದರ ಮುದ್ರಿತ ಪ್ರತಿಗಳು ತಾತ್ಕಾಲಿಕವಾಗಿರುತ್ತವೆ ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು. ಪ್ರವೇಶ ಉದ್ದೇಶಗಳಿಗಾಗಿ ಇದನ್ನು ಅಧಿಕೃತ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ.

ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳು ಮೂಲ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರವನ್ನು ಪಿಯುಸಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಫಲಿತಾಂಶ ಪ್ರಕಟವಾದ ನಂತರ ಮಂಡಳಿಯು ಅಂಕಪಟ್ಟಿಗಳನ್ನು ಬಿಡುಗಡೆ ಮಾಡಲಿದೆ. ಅಭ್ಯರ್ಥಿಗಳು ತಮ್ಮ ಶಾಲೆಗಳು/ಅಧ್ಯಯನ ಕೇಂದ್ರಗಳಿಂದ ಮೂಲ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರವನ್ನು ಪಡೆಯಬಹುದು.

ಪ್ರವೇಶಪತ್ರದಲ್ಲಿ ತಿದ್ದುಪಡಿಗೆ ಅವಕಾಶ

ತಾತ್ಕಾಲಿಕ ಪ್ರವೇಶಪತ್ರದಲ್ಲಿ 9 ಅಂಶಗಳಲ್ಲಿ ತಿದ್ದುಪಡಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ, ದೈಹಿಕ ಸ್ಥಿತಿ, ಧರ್ಮ, ಫೋಟೋ ಮತ್ತು ಸಹಿಗಳಲ್ಲಿ ಯಾವುದಾದರೂ ತಪ್ಪು ಇದ್ದಲ್ಲಿ, ತಿದ್ದುಪಡಿ ಮಾಡಿ ಪರಿಷ್ಕೃತ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. ಪುನರಾವರ್ತಿತ ಅಭ್ಯರ್ಥಿಗಳಿಗೆ ಫೋಟೋ ಮತ್ತು ಸಹಿಯನ್ನು ಮಾತ್ರ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. 

ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ 2022-23ರ ವೇಳಾಪಟ್ಟಿ 

ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆ 2022-23ರ ಫಲಿತಾಂಶ ಪ್ರಕಟವಾದ ನಂತರ, ಪರೀಕ್ಷೆಗೆ ಹಾಜರಾಗದ ಅಥವಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪೂರಕ ಪರೀಕ್ಷೆಯನ್ನು (SSLC Supplementary Exam) ನಡೆಸುತ್ತದೆ. ಈ ಪರೀಕ್ಷೆಯ ವೇಳಾಪಟ್ಟಿ ಮತ್ತು ಇತರ ವಿವರಗಳು ಮೇ ತಿಂಗಳಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. 

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ

  • ಜೂನ್‌ 27 ಸೋಮವಾರ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರವರೆಗೆ-ವಿಜ್ಞಾನ, ರಾಜ್ಯಶಾಸ್ತ್ರ, ಮಧ್ಯಾಹ್ನ 1.45 ರಿಂದ 5.15 ರವರೆಗೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
  • ಜೂನ್‌ 28 ಮಂಗಳವಾರ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಆರ್‌ಟಿ), ಸಂಕ್ಕೃತ.
  • ಜೂನ್‌ 29 ಬುಧವಾರ -ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ದ್ವಿತೀಯ ಭಾಷೆ- ಕನ್ನಡ, ಇಂಗ್ಲಿಷ್.
  • ಜೂನ್‌ 30 ಗುರುವಾರ -ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ಸಮಾಜ ವಿಜ್ಞಾನ.
  • ಜುಲೈ 01 ಶುಕ್ರವಾರ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ತೃತೀಯ ಭಾಷೆ- ಹಿಂದಿ(ಎನ್‌ಸಿಆರ್‌ಟಿ), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು. ಎನ್‌ಎಸ್‌ಕ್ಯೂಎಫ್‌ ಪರೀಕ್ಷಾ ವಿಷಯಗಳು: ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.45 ರವರೆಗೆ -ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್‌ ವೆಲ್‌ನೆಸ್‌.
  • ಜುಲೈ 02 ಶನಿವಾರ – ಬೆಳಗ್ಗೆ9.30 ರಿಂದ ಮಧ್ಯಾಹ್ನ 12.45 ವರೆಗೆ-ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್‌ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ, ಮಧ್ಯಾಹ್ನ 2 ರಿಂದ ಸಂಜೆ 5.15ವರೆಗೆ- ಇಂಜಿನಿಯರಿಂಗ್ ಗ್ರಾಫಿಕ್ಸ್-2
  • ಜುಲೈ 04 ಸೋಮವಾರ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 .45 ರವರೆಗೆ – ಗಣಿತ, ಸಮಾಜ ಶಾಸ್ತ್ರ.

ಪ್ರಶ್ನೆಪತ್ರಿಕೆ ವಿನ್ಯಾಸ

ಪ್ರಥಮ ಭಾಷೆ ಕನ್ನಡ (01 K)

ವಸ್ತುನಿಷ್ಠ ಪ್ರಶ್ನೆಗಳು1 ಅಂಕದ 06 ಪ್ರಶ್ನೆಗಳು1×06=06
ಸಂಬಂಧೀಕರಿಸಿದ ಬರೆಯುವುದು1 ಅಂಕದ 04 ಪ್ರಶ್ನೆಗಳು1×04=04
ಒಂದು ವಾಕ್ಯದಲ್ಲಿ ಉತ್ತರಿಸುವುದು1 ಅಂಕದ 07 ಪ್ರಶ್ನೆಗಳು1×07=07
3-4 ವಾಕ್ಯಗಳಲ್ಲಿ ಉತ್ತರಿಸುವುದು2 ಅಂಕದ 10 ಪ್ರಶ್ನೆಗಳು2×10=20
5-6 ವಾಕ್ಯಗಳಲ್ಲಿ ಉತ್ತರಿಸುವುದು3 ಅಂಕದ 11 ಪ್ರಶ್ನೆಗಳು3×11=33
8-10 ವಾಕ್ಯಗಳಲ್ಲಿ ಉತ್ತರಿಸುವುದು4 ಅಂಕದ 05 ಪ್ರಶ್ನೆಗಳು4×05=20
ಪ್ರಬಂಧ ಮತ್ತು ವಿಸ್ತಾರವಾಗಿ ಉತ್ತರಿಸುವುದು5 ಅಂಕದ 02 ಪ್ರಶ್ನೆಗಳು5×02=10
ಒಟ್ಟು45 ಪ್ರಶ್ನೆಗಳು100 ಅಂಕಗಳು


ದ್ವಿತೀಯ ಭಾಷೆ ಇಂಗ್ಲಿಷ್ (31E)

ಬಹು ಆಯ್ಕೆ ಪ್ರಶ್ನೆಗಳು1 ಅಂಕದ 04 ಪ್ರಶ್ನೆಗಳು1×04=04
ಅತಿಕಿರು ಉತ್ತರ ಪ್ರಶ್ನೆಗಳು1 ಅಂಕದ 12 ಪ್ರಶ್ನೆಗಳು1×12=12
ಕಿರು ಉತ್ತರ ಪ್ರಶ್ನೆಗಳು2 ಅಂಕದ 08 ಪ್ರಶ್ನೆಗಳು1×08=16
ದೀರ್ಘ ಉತ್ತರದ ಪ್ರಶ್ನೆಗಳು3 ಅಂಕದ 09 ಪ್ರಶ್ನೆಗಳು2×09=27
ದೀರ್ಘ ಉತ್ತರದ ಪ್ರಶ್ನೆಗಳು4 ಅಂಕದ 04 ಪ್ರಶ್ನೆಗಳು4×04=16
ದೀರ್ಘ ಉತ್ತರದ ಪ್ರಶ್ನೆಗಳು5 ಅಂಕದ 01 ಪ್ರಶ್ನೆಗಳು5×01=5
ಒಟ್ಟು38 ಪ್ರಶ್ನೆಗಳು80 ಅಂಕಗಳು


ತೃತೀಯ ಭಾಷೆ ಹಿಂದಿ (61E)

ಬಹು ಆಯ್ಕೆ ಪ್ರಶ್ನೆಗಳು1 ಅಂಕದ 08 ಪ್ರಶ್ನೆಗಳು1×04=04
ಅನುರೂಪಿತಾ ಪ್ರಶ್ನೆಗಳು1 ಅಂಕದ 04 ಪ್ರಶ್ನೆಗಳು1‌‍‌‌x 04=04
ಅತಿಕಿರು ಉತ್ತರ ಪ್ರಶ್ನೆಗಳು1 ಅಂಕದ 04 ಪ್ರಶ್ನೆಗಳು1×04=04
ಕಿರು ಉತ್ತರ ಪ್ರಶ್ನೆಗಳು2 ಅಂಕದ 04 ಪ್ರಶ್ನೆಗಳು1×08=16
ದೀರ್ಘ ಉತ್ತರದ ಪ್ರಶ್ನೆಗಳು3 ಅಂಕದ 08 ಪ್ರಶ್ನೆಗಳು2×09=27
ದೀರ್ಘ ಉತ್ತರದ ಪ್ರಶ್ನೆಗಳು4 ಅಂಕದ 09 ಪ್ರಶ್ನೆಗಳು4×04=16
ದೀರ್ಘ ಉತ್ತರದ ಪ್ರಶ್ನೆಗಳು5 ಅಂಕದ 04 ಪ್ರಶ್ನೆಗಳು5×01=5
ಒಟ್ಟು38 ಪ್ರಶ್ನೆಗಳು80 ಅಂಕಗಳು

ಗಣಿತ:  

ಬಹು ಆಯ್ಕೆ ಪ್ರಶ್ನೆಗಳು1 ಅಂಕದ 08 ಪ್ರಶ್ನೆಗಳು1×04=08
ಅತೀಲಘು ಉತ್ತರ ಪ್ರಶ್ನೆಗಳು1 ಅಂಕದ 08 ಪ್ರಶ್ನೆಗಳು1‌‍‌‌x 04=08
ಲಘು ಉತ್ತರ ಪ್ರಶ್ನೆಗಳು2 ಅಂಕದ 08 ಪ್ರಶ್ನೆಗಳು1×04=16
ದೀರ್ಘ ಉತ್ತರದ ಪ್ರಶ್ನೆಗಳು3 ಅಂಕದ 09 ಪ್ರಶ್ನೆಗಳು2×09=27
ದೀರ್ಘ ಉತ್ತರದ ಪ್ರಶ್ನೆಗಳು4 ಅಂಕದ 04 ಪ್ರಶ್ನೆಗಳು4×04=16
ದೀರ್ಘ ಉತ್ತರದ ಪ್ರಶ್ನೆಗಳು5 ಅಂಕದ 01 ಪ್ರಶ್ನೆಗಳು5×01=5
ಒಟ್ಟು38 ಪ್ರಶ್ನೆಗಳು80 ಅಂಕಗಳು


ವಿಜ್ಞಾನ (83):

ಬಹು ಆಯ್ಕೆ ಪ್ರಶ್ನೆಗಳು1 ಅಂಕದ 08 ಪ್ರಶ್ನೆಗಳು1×04=08
ಅತೀಲಘು ಉತ್ತರ ಪ್ರಶ್ನೆಗಳು1 ಅಂಕದ 08 ಪ್ರಶ್ನೆಗಳು1‌‍‌‌x 04=08
ಲಘು ಉತ್ತರ ಪ್ರಶ್ನೆಗಳು2 ಅಂಕದ 08 ಪ್ರಶ್ನೆಗಳು1×04=16
ದೀರ್ಘ ಉತ್ತರದ ಪ್ರಶ್ನೆಗಳು3 ಅಂಕದ 09 ಪ್ರಶ್ನೆಗಳು2×09=27
ದೀರ್ಘ ಉತ್ತರದ ಪ್ರಶ್ನೆಗಳು4 ಅಂಕದ 04 ಪ್ರಶ್ನೆಗಳು4×04=16
ದೀರ್ಘ ಉತ್ತರದ ಪ್ರಶ್ನೆಗಳು5 ಅಂಕದ 01 ಪ್ರಶ್ನೆಗಳು5×01=5
ಒಟ್ಟು38 ಪ್ರಶ್ನೆಗಳು80 ಅಂಕಗಳು

ಸಮಾಜ ವಿಜ್ಞಾನ (85)

ಬಹು ಆಯ್ಕೆ ಪ್ರಶ್ನೆಗಳು1 ಅಂಕದ 08 ಪ್ರಶ್ನೆಗಳು1×04=08
ಅತೀಲಘು ಉತ್ತರ ಪ್ರಶ್ನೆಗಳು1 ಅಂಕದ 08 ಪ್ರಶ್ನೆಗಳು1‌‍‌‌x 04=08
ಲಘು ಉತ್ತರ ಪ್ರಶ್ನೆಗಳು2 ಅಂಕದ 08 ಪ್ರಶ್ನೆಗಳು1×04=16
ದೀರ್ಘ ಉತ್ತರದ ಪ್ರಶ್ನೆಗಳು3 ಅಂಕದ 09 ಪ್ರಶ್ನೆಗಳು2×09=27
ದೀರ್ಘ ಉತ್ತರದ ಪ್ರಶ್ನೆಗಳು4 ಅಂಕದ 04 ಪ್ರಶ್ನೆಗಳು4×04=16
ದೀರ್ಘ ಉತ್ತರದ ಪ್ರಶ್ನೆಗಳು5 ಅಂಕದ 01 ಪ್ರಶ್ನೆಗಳು5×01=5
ಒಟ್ಟು38 ಪ್ರಶ್ನೆಗಳು80 ಅಂಕಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಪದೇ ಪದೇ ಕೇಳುವ ಪ್ರಶ್ನೆಗಳು (FAQs)

ಪ್ರ. 1: ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇವಲ ಪುಸ್ತಕಗಳ ಅಭ್ಯಾಸಗಳಿಂದ ನೀಡಲಾಗುತ್ತದೆಯೇ?

ಉತ್ತರ: ಅಭ್ಯಾಸದಿಂದಲೂ ಪ್ರಶ್ನೆಗಳನ್ನು ನೀಡಬಹುದು, ಅಥವಾ ಪಠ್ಯಗಳ ಮಧ್ಯದಿಂದಲೂ ಪ್ರಶ್ನೆಗಳನ್ನು ರಚಿಸಿ ನೀಡಬಹುದು. ಹಾಗಾಗಿ ಎಲ್ಲ ಪಠ್ಯಗಳನ್ನು ಸಮಗ್ರವಾಗಿ ಓದಬೇಕು. ಆಗ ಎಲ್ಲ ರೀತಿಯ ಪ್ರಶ್ನೆಗಳಿಗೂ ಉತ್ತರಿಸುವ ಸಾಮರ್ಥ್ಯ ಪಡೆಯುವಿರಿ.

ಪ್ರ. 2: ʼಒಂದೊಂದು ವಾಕ್ಯದಲ್ಲಿ ಉತ್ತರಿಸಿʼ ರೀತಿಯ ಪ್ರಶ್ನೆಗಳಿಗೆ ಒಂದೇ ಪದದಲ್ಲಿ ಉತ್ತರಿಸಿದರೆ ಸಾಕೇ?

ಉತ್ತರ: ಪ್ರಶ್ನೆಯಲ್ಲಿಯೇ ʼಒಂದು ವಾಕ್ಯದಲ್ಲಿ ಉತ್ತರಿಸಿʼ ಎಂದು ನೀಡಿದಾಗ ವಾಕ್ಯ ರೂಪದಲ್ಲೇ ಬರೆಯಬೇಕಾಗುತ್ತದೆ. ಉತ್ತರವು ವಾಕ್ಯ ರೂಪದಲ್ಲಿರುವುದು ಅಪೇಕ್ಷಣೀಯ. 

ಪ್ರ. 3: ಪರೀಕ್ಷೆಯ ಬಗ್ಗೆ ಭಯ. ಹೇಗೆ ಬರೆಯಬೇಕು? ಏನು ಓದಬೇಕು?

ಉತ್ತರ: ಪರೀಕ್ಷೆಯು ಹತ್ತಿರ ಬಂದಾಗ ಭಯ ಪಡಬೇಕಾಗಿಲ್ಲ. ನಿಮ್ಮ ಪುಸ್ತಕದ ಆಚೆಗೆ ಯಾವ ಪ್ರಶ್ನೆಯೂ ಬರುವುದಿಲ್ಲ. ವರ್ಷ ಪೂರ್ತಿ ನೀವು ಏನು ಓದಿರುತ್ತೀರ, ಶಾಲೆಯಲ್ಲಿ ಯಾವ ಪಾಠ ಮಾಡಿರುತ್ತಾರೋ, ಅದೇ ಪಾಠ, ಅದೇ ಪ್ರಶ್ನೆ, ಅದೇ ಉತ್ತರ. ಬೇರೆ ಯಾವುದು ಇಲ್ಲ. ಆದ್ದರಿಂದ 1-9 ರವರೆಗೂ ಹೇಗೆ ಪರೀಕ್ಷೆ ಬರೆದಿರುತ್ತೀರೋ ಅದೇ ರೀತಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಿರಿ. ಈ ಪರೀಕ್ಷೆ ಕೊಂಚ ಹೆಚ್ಚು ಶಿಸ್ತಿನಿಂದ ನಡೆಯುತ್ತದೆ ಎಂಬುದಷ್ಟೇ ವ್ಯತ್ಯಾಸ.

ಪ್ರ. 4: ಕಳೆದ 5 ವರ್ಷಗಳ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳನ್ನು ನಾನು ಎಲ್ಲಿಂದ ಡೌನ್‌ಲೋಡ್ ಮಾಡಬಹುದು?

ಉತ್ತರ: ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಳೆದ 5 ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು KSEEB ಯ ಅಧಿಕೃತ ವೆಬ್‌ಸೈಟ್‌ನಿಂದ ಮತ್ತು Embibe ನಿಂದ ಡೌನ್‌ಲೋಡ್ ಮಾಡಬಹುದು.

ಪ್ರ. 5: ಕರ್ನಾಟಕ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023 ರಲ್ಲಿ ನಾನು ಹೇಗೆ ಉತ್ತಮ ಅಂಕ ಗಳಿಸಬಹುದು?

ಉತ್ತರ: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಉತ್ತಮವಾಗಿ ತಯಾರಾಗಲು, ವಿದ್ಯಾರ್ಥಿಗಳು ಮೊದಲು ಸಂಪೂರ್ಣ ಪಠ್ಯಕ್ರಮವನ್ನು ಪೂರ್ಣಗೊಳಿಸಬೇಕು. ಪ್ರತಿ ವಿಷಯದ ಪ್ರತಿಯೊಂದು ಟಾಪಿಕ್‌ಗೂ ಸರಿಯಾದ ವೇಳಾಪಟ್ಟಿಯನ್ನು ಮಾಡಿ. ಇದರಿಂದ ಎಲ್ಲಾ ವಿಷಯಗಳು ಸಮಾನ ಸಮಯ ಮತ್ತು ಗಮನವನ್ನು ಪಡೆಯುತ್ತವೆ. ಪಠ್ಯಕ್ರಮ ಪೂರ್ಣಗೊಂಡ ನಂತರ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸಲು ಪ್ರಾರಂಭಿಸಿ ಮತ್ತು ಅಣಕು ಪರೀಕ್ಷೆಗಳನ್ನು ಬರೆಯಿರಿ. ಇದು ನಿಮ್ಮ ತಯಾರಿ ಮಟ್ಟವನ್ನು ವಿಶ್ಲೇಷಿಸಲು ಮತ್ತು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಪ್ರ. 6: ಕರ್ನಾಟಕ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯಲ್ಲಿ ಎಷ್ಟು ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ?

ಉತ್ತರ: ಕರ್ನಾಟಕ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯಲ್ಲಿ 8 ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದಾಗ್ಯೂ, ಈ ವರ್ಷ ಬಹು ಆಯ್ಕೆ ಪ್ರಶ್ನೆಗಳು ಹೆಚ್ಚಾಗಬಹುದು.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕಗಳ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.  “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ