• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್ಎಸ್ಎಲ್‍ಸಿ 2022-23: ಪರೀಕ್ಷಾ ಮಾದರಿ

img-icon

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್ಎಸ್ಎಲ್‍ಸಿ 2022-23: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪ್ರತಿ ವರ್ಷ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ನಡೆಸುತ್ತದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪರೀಕ್ಷಾ ಮಾದರಿಯನ್ನು ಎಚ್ಚರಿಕೆಯಿಂದ ಗಮನಿಸುವುದರಿಂದ ಅವರಿಗೆ ಪ್ರಶ್ನೆಪತ್ರಿಕೆ ಬಗ್ಗೆ, ಅಂಕಗಳ ಹಂಚಿಕೆ ಬಗ್ಗೆ ಸ್ಪಷ್ಟವಾದ ಕಲ್ಪನೆ ಬರುತ್ತದೆ. ಇದರಿಂದ ಪರೀಕ್ಷೆಯನ್ನು ಎದುರಿಸುವುದು ಸುಲಭವಾಗುತ್ತದೆ. ಅದೇ ರೀತಿ ಅಂಕಗಳನ್ನೂ ಗಳಿಸುವ ಚಾಕಚಕ್ಯತೆ ಸಿದ್ಧಿಸುತ್ತದೆ. 

ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆಯ ಮಾದರಿಯನ್ನು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಒದಗಿಸಿದೆ. ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆಯ ಮಾದರಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು. ಎಲ್ಲಾ ವಿಷಯಗಳ ಪರೀಕ್ಷೆಗಳ ಮಾದರಿಗಳನ್ನು ಪಡೆಯಲು ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾದರಿಯನ್ನು ಕೆಳಗಿನ ಕೋಷ್ಟಕದಲ್ಲಿ ಸಹ ನೋಡಬಹುದು.

ಪರಿವಿಡಿ

  • ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ  2022-23 – ಆಯ್ಕೆ ಪ್ರಕ್ರಿಯೆ
  • ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ  2022-23 – ಪರೀಕ್ಷೆಯ ಹಂತಗಳು
  • ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ  2022-23 – ಪರೀಕ್ಷೆ ಮಾದರಿಯ ವಿವರಗಳು – ಸ್ಕೋರಿಂಗ್ ಮಾದರಿ (+/- ಗುರುತು ಮಾಡುವುದು)
  • ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ  2022-23 – ಪರೀಕ್ಷೆ ಮಾದರಿಯ ವಿವರಗಳು – ವಿಷಯವಾರು ವಿವರಗಳು
  • ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ  2022-23 – ಪರೀಕ್ಷೆ ಮಾದರಿಯ  ವಿವರಗಳು – ಒಟ್ಟು ಸಮಯ
  • ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ 2022-23 –  ಪರೀಕ್ಷೆ ಮಾದರಿಯ ವಿವರಗಳು – ಪರೀಕ್ಷಾ ಕ್ಯಾಲೆಂಡರ್

ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ 2022-23 – ಆಯ್ಕೆ ಪ್ರಕ್ರಿಯೆ

  1. ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಮೂರು ಭಾಷೆಗಳು ಮತ್ತು ಮೂರು ಕೋರ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಮೂರು ಮುಖ್ಯ ವಿಷಯಗಳು. ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ವಿದ್ಯಾರ್ಥಿಗಳಿಗೆ ಇವುಗಳ ಜೊತೆಗೆ ಪರ್ಯಾಯ ವಿಷಯಗಳು ಲಭ್ಯವಿವೆ. ಎಲ್ಲಾ ಪತ್ರಿಕೆಗಳು ಮೂರು ಗಂಟೆಗಳ ಅವಧಿಯದ್ದಾಗಿರುತ್ತವೆ.
  2. ಭಾಷೆಗಳು- ಅಭ್ಯರ್ಥಿಗಳು ಮೂರು ವಿಭಿನ್ನ ಭಾಷೆಗಳನ್ನು ಕಲಿಯಬೇಕಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯ ಭಾಷೆಗಳನ್ನು ಆಯ್ಕೆಗಳನ್ನಾಗಿ ಹೊಂದಿದ್ದಾರೆ. ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ತೆಲುಗು, ತಮಿಳು, ಮರಾಠಿ, ಮತ್ತು ಉರ್ದು ಭಾಷೆಗಳಲ್ಲಿ ಒಂದನ್ನು ಪತ್ರಿಕೆ I ಕ್ಕೆ ಆಯ್ಕೆ ಮಾಡಬಹುದು. ವಿದ್ಯಾರ್ಥಿಗಳು ಭಾಷಾ ಪತ್ರಿಕೆ II ಕ್ಕೆ ಕನ್ನಡ ಮತ್ತು ಇಂಗ್ಲಿಷ್‌ನಿಂದ ಆಯ್ಕೆ ಮಾಡಬಹುದು. ಭಾಷಾ ಪತ್ರಿಕೆ III ಕ್ಕೆ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ ಮತ್ತು ತುಳು ಭಾಷೆಗಳಿಂದ ಒಂದನ್ನು ಆಯ್ಕೆ ಮಾಡಬಹುದು. ಭಾಷಾ ಪತ್ರಿಕೆ I 100 ಅಂಕಗಳದ್ದಾಗಿರುತ್ತದೆ. ಆದರೆ ಭಾಷಾ ಪತ್ರಿಕೆ II ಮತ್ತು III ತಲಾ 80 ಅಂಕಗಳ ಲಿಖಿತ ಪರೀಕ್ಷೆಗಳನ್ನು ಹೊಂದಿರುತ್ತವೆ ಮತ್ತು 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ  ನಿಗದಿಪಡಿಸಲಾಗಿರುತ್ತದೆ.
  3. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಇವು ಮೂರು ಕೋರ್ ವಿಷಯಗಳು. ಮೂರಕ್ಕೂ ತಲಾ 80 ಅಂಕಗಳ ಲಿಖಿತ ಪರೀಕ್ಷೆ ಮತ್ತು 20 ಅಂಕಗಳ ಆಂತರಿಕ ಪರೀಕ್ಷೆ ಇರುತ್ತದೆ. ಕಲಿಕೆಯ ತೊಂದರೆಗಳಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ವಿಷಯಗಳೆಂದರೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಇತ್ಯಾದಿ. ಈ ಪರ್ಯಾಯ ವಿಷಯಗಳು ಸಹ 80 ಅಂಕಗಳ ಲಿಖಿತ ಪರೀಕ್ಷೆ ಮತ್ತು 20 ಅಂಕಗಳ ಆಂತರಿಕ ಪರೀಕ್ಷೆಗಳನ್ನು ಹೊಂದಿರುತ್ತವೆ.
  4. ಪರೀಕ್ಷೆಗಳು ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಪ್ರಾರಂಭವಾಗುತ್ತವೆ ಮತ್ತು ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳುತ್ತವೆ. ಪ್ರತಿ ವರ್ಷ ಸಾಮಾನ್ಯವಾಗಿ ಏಪ್ರಿಲ್ ನಾಲ್ಕನೇ ವಾರದಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ. ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಸಹ ನಡೆಸಲಾಗುತ್ತದೆ. ಪೂರಕ ಪರೀಕ್ಷೆಯ ಫಲಿತಾಂಶಗಳನ್ನು ಜುಲೈನಲ್ಲಿ ಪ್ರಕಟಿಸಲಾಗುತ್ತದೆ.

ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ 2022-23 – ಪರೀಕ್ಷೆಯ ಹಂತಗಳು

ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ 2022-23 ಕೇವಲ ಒಂದು ಹಂತವನ್ನು, ಅಂದರೆ, ಲಿಖಿತ ಪರೀಕ್ಷೆಯನ್ನು ಮಾತ್ರ ಹೊಂದಿದೆ. 

ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ 2022-23 – ಪರೀಕ್ಷೆ ಮಾದರಿಯ ವಿವರಗಳು – ಸ್ಕೋರಿಂಗ್ ಮಾದರಿ (+/- ಅಂಕಗಳು)

ಕರ್ನಾಟಕ ಎಸ್ಎಸ್ಎಲ್‍ಸಿಯ ಒಂದು ವಿಷಯದ ಪರೀಕ್ಷೆಯು 100 ಅಂಕಗಳನ್ನು ಹೊಂದಿರುತ್ತದೆ. ಅದರಲ್ಲಿ 20 ಅಂಕಗಳು ಆಂತರಿಕ ಮೌಲ್ಯಮಾಪನಕ್ಕೆ ಮೀಸಲಾಗಿರುತ್ತವೆ. ವಿಷಯದ ಆಧಾರದ ಮೇಲೆ ಆಂತರಿಕ ಮೌಲ್ಯಮಾಪನವು ಪ್ರಾಯೋಗಿಕ ಅಥವಾ ಪ್ರಾಜೆಕ್ಟ್ ಆಧಾರಿತವಾಗಿರಬಹುದು. ಇನ್ನೊಂದೆಡೆ, ಲಿಖಿತ ಪರೀಕ್ಷೆಯು 80 ಅಂಕಗಳನ್ನು ಹೊಂದಿರುತ್ತದೆ.

ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆ 2022-23 – ಪರೀಕ್ಷೆ ಮಾದರಿಯ ವಿವರಗಳು – ವಿಷಯವಾರು ವಿವರಗಳು

ಪರೀಕ್ಷೆಯ ಮಾದರಿಯ ವಿಷಯವಾರು ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ವಿಷಯದ ಹೆಸರುಅಂಕಗಳ ಸಂಖ್ಯೆಕಾಲಾವಧಿ
ಭಾಷಾ ಪತ್ರಿಕೆ I
ಕನ್ನಡ / ಇಂಗ್ಲಿಷ್ / ಹಿಂದಿ / ಸಂಸ್ಕೃತ / ತೆಲುಗು / ತಮಿಳು / ಮರಾಠಿ / ಉರ್ದು
100
ಥಿಯರಿ: 100
3 ಗಂಟೆಗಳು
ಭಾಷಾ ಪತ್ರಿಕೆ II
ಕನ್ನಡ / ಇಂಗ್ಲಿಷ್
100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20
3 ಗಂಟೆಗಳು
ಭಾಷಾ ಪತ್ರಿಕೆ III
ಹಿಂದಿ / ಕನ್ನಡ / ಇಂಗ್ಲಿಷ್ / ಅರೇಬಿಕ್ / ಪರ್ಷಿಯನ್‌ / ಉರ್ದು / ಸಂಸ್ಕೃತ / ಕೊಂಕಣಿ / ತುಳು
100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20
3 ಗಂಟೆಗಳು
ಗಣಿತ100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20
3 ಗಂಟೆಗಳು
ವಿಜ್ಞಾನ100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20
3 ಗಂಟೆಗಳು
ಸಮಾಜ ವಿಜ್ಞಾನ100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20
3 ಗಂಟೆಗಳು

ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆ 2022-23 – ಪರೀಕ್ಷೆ ಮಾದರಿಯ ವಿವರಗಳು – ಒಟ್ಟು ಸಮಯ

ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆಯ ಒಟ್ಟು ಕಾಲಾವಧಿ 3 ಗಂಟೆಗಳು ಅಥವಾ 180 ನಿಮಿಷಗಳು.

ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆ 2022-23 – ಪರೀಕ್ಷಾ ಕ್ಯಾಲೆಂಡರ್

2023 ರ ತಾತ್ಕಾಲಿಕ ವೇಳಾಪಟ್ಟಿಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆಯ ತಾತ್ಕಾಲಿಕ ದಿನಾಂಕ 2023 ವಿಷಯಗಳು
2ನೇ ಜೂನ್, 2023 ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು, ತಮಿಳು, ಇಂಗ್ಲಿಷ್, ಸಂಸ್ಕೃತ
27ನೇ ಜೂನ್, 2023 ಕೋರ್ ವಿಷಯ: ಗಣಿತ, ಸಮಾಜಶಾಸ್ತ್ರ
26ನೇ ಜೂನ್, 2023 ಕೋರ್ ವಿಷಯ: ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
29ನೇ ಜೂನ್, 2023 ಕೋರ್ ವಿಷಯ: ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ
3ನೇ ಜೂನ್, 2023 ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
ಎನ್.ಎಸ್‌.ಕ್ಯು.ಎಫ್ ಪರೀಕ್ಷೆಯ ವಿಷಯಗಳು: ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೋಟೀವ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್‍ನೆಸ್
25ನೇ ಜೂನ್, 2023 ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ
1ನೇ ಜೂನ್, 2023 ಕೋರ್ ವಿಷಯ: ಸಮಾಜ ವಿಜ್ಞಾನ

ಕರ್ನಾಟಕ ಎಸ್ಎಸ್ಎಲ್‍ಸಿ ಪೂರ್ವಸಿದ್ಧತಾ ಪರೀಕ್ಷೆ 2023ರ ತಾತ್ಕಾಲಿಕ ವೇಳಾಪಟ್ಟಿಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ದಿನ ವಿಷಯ
ದಿನ 1 ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
ದಿನ 2 ಕೋರ್ ವಿಷಯ: ಗಣಿತ
ದಿನ 3 ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ
ದಿನ 4 ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
ದಿನ 5 ಕೋರ್ ವಿಷಯ: ಸಮಾಜ ವಿಜ್ಞಾನ
ದಿನ 6 ಕೋರ್ ವಿಷಯ: ವಿಜ್ಞಾನ

ಪರೀಕ್ಷಾ ದಿನದಂದು ಬೆಲ್ ಮಾಡುವ ಸಮಯ:

ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆ 2022-23 ಫಲಿತಾಂಶದ ಮಾಹಿತಿ

ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆ 2020-21 ಫಲಿತಾಂಶವನ್ನು ಪರೀಕ್ಷಾ ಮಂಡಳಿಯು 9 ಆಗಸ್ಟ್ 2021 ರಂದು ಮಧ್ಯಾಹ್ನ 03:30 ಕ್ಕೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿತ್ತು. ಮಂಡಳಿಯ ಪರೀಕ್ಷೆಗಳಿಗೆ ದೈಹಿಕವಾಗಿ ಹಾಜರಾಗಿ ತಮ್ಮ ಅಂಕಗಳಿಂದ ತೃಪ್ತರಾಗದ ಅಭ್ಯರ್ಥಿಗಳು/ ರೆಗ್ಯುಲರ್ / ರೆಗ್ಯುಲರ್ ಪುನರಾವರ್ತಿತ / ಖಾಸಗಿ ಪುನರಾವರ್ತಿತ / NSR / NSPR ವಿದ್ಯಾರ್ಥಿಗಳಿಗೆ 27 ಆಗಸ್ಟ್ 2021 ರಿಂದ 30 ಆಗಸ್ಟ್ 2021 ರವರೆಗೆ ಥಿಯರಿ, ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳಿಗಾಗಿ ಮಂಡಳಿಯು ಪೂರಕ ಪರೀಕ್ಷೆಯನ್ನು ನಡೆಸಿತು. 2022-23 ನೇ ಸಾಲಿನ ಫಲಿತಾಂಶವು ಪರೀಕ್ಷೆಗಳು ಮುಗಿದ ನಂತರ ಮೇ 2023 ರಲ್ಲಿ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆ 2022-23 ಅರ್ಜಿ ನಮೂನೆ ಭರ್ತಿ – ಪ್ರಾರಂಭ ಮತ್ತು ಅಂತಿಮ ದಿನಾಂಕ

ಅರ್ಜಿ ನಮೂನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ನೀಡುವಂತೆ ಸೂಚಿಸಲಾಗಿದೆ. ತಾತ್ಕಾಲಿಕವಾಗಿ, ಅರ್ಜಿಯನ್ನು ಜನವರಿ 2023 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿಯನ್ನು ಶಾಲೆಗಳ ಮೂಲಕ ಸಲ್ಲಿಸಬೇಕಾಗಿರುತ್ತದೆ.

ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆ 2022-23 ಪ್ರವೇಶ ಪತ್ರ ದಿನಾಂಕ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (KSEEB) ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುತ್ತದೆ. ಅಧಿಕೃತ ವೆಬ್‌ಸೈಟ್‌ ಹೀಗಿದೆ: ಲಿಂಕ್‌ ತಾತ್ಕಾಲಿಕವಾಗಿ ಜನವರಿ-ಫೆಬ್ರವರಿ 2023 ರಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಬಹುದು. ಪ್ರವೇಶ ಪತ್ರವು ಅಭ್ಯರ್ಥಿಯ ಹೆಸರು, ಪರೀಕ್ಷಾ ಕೇಂದ್ರ, ವಿಳಾಸ, ವಿಷಯ ಇತ್ಯಾದಿಗಳಂತಹ ಪರೀಕ್ಷೆಗೆ ಕಡ್ಡಾಯವಾದ ಎಲ್ಲಾ ಪ್ರಮುಖ ವಿವರಗಳನ್ನು ಒಳಗೊಂಡಿರುತ್ತದೆ.

ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆ 2022-23 – ಪರೀಕ್ಷಾ ದಿನಾಂಕ (ಪೂರ್ವಭಾವಿ/ಮುಖ್ಯ)

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆಯ ದಿನಾಂಕವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುತ್ತದೆ. ಅಧಿಕೃತ ವೆಬ್‌ ವಿಳಾಸ: ಲಿಂಕ್‌ ತಾತ್ಕಾಲಿಕವಾಗಿ ಮಾರ್ಚ್-ಏಪ್ರಿಲ್ 2023 ರಲ್ಲಿ ವಿದ್ಯಾರ್ಥಿಗಳು ಅಧಿಕೃತ ಸೈಟ್‌ನಿಂದ ವೇಳಾಪಟ್ಟಿಯನ್ನು ಪಡೆದುಕೊಳ್ಳಬಹುದು.

ಎಸ್ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ

ಎಸ್ಎಸ್‌ಎಲ್‌ಸಿ ಪರೀಕ್ಷಾ ಶುಲ್ಕದ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಪಡೆಯುವ ಪರೀಕ್ಷಾ ಶುಲ್ಕದ ದರವನ್ನು ಹೆಚ್ಚಿಸಿ 2021-22ನೇ ಸಾಲಿನ ಪರೀಕ್ಷೆಗೆ ಅನ್ವಯವಾಗುವಂತೆ ಈ ಕೆಳಕಂಡಂತೆ ಆದೇಶಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರದಲ್ಲಿ ತಿದ್ದುಪಡಿ ಮಾಡಬೇಕಾದಲ್ಲಿ ಯಾರನ್ನು ಸಂಪರ್ಕಿಸಬೇಕು?

ಉತ್ತರ: ಎಸ್ಎಸ್‌ಎಲ್‌ಸಿ ಪ್ರವೇಶ ಪತ್ರದಲ್ಲಿ ತಿದ್ದುಪಡಿಗಳಿದ್ದಲ್ಲಿ, ಡೌನ್‌ಲೋಡ್ ಮಾಡಿಕೊಂಡ ಅಂತಿಮ ಪ್ರವೇಶಪತ್ರದ ಜೆರಾಕ್ಸ್ ಪ್ರತಿಯಲ್ಲಿ ಕೆಂಪು ಶಾಯಿಯಲ್ಲಿ ತಿದ್ದುಪಡಿಗಳನ್ನು ನಮೂದಿಸಿ, ಮುಖ್ಯ ಶಿಕ್ಷಕರು ದೃಢೀಕರಿಸಿ ಮಂಡಳಿಗೆ ಸಲ್ಲಿಸಬೇಕಾಗುತ್ತದೆ.

ಪ್ರ. 2: ಅಂತಿಮ ಪ್ರವೇಶಪತ್ರದಲ್ಲಿ ತಿದ್ದುಪಡಿಗಳಿದ್ದರೆ ವಿದ್ಯಾರ್ಥಿಗಳು ದಂಡ ಶುಲ್ಕ ಪಾವತಿಸಬೇಕೆ?

ಉತ್ತರ: ಹೌದು. ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳಲ್ಲಿ ವಿದ್ಯಾರ್ಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು, ಇತರೆ ತಿದ್ದುಪಡಿಗಳಿದ್ದಲ್ಲಿ ಪ್ರತಿ ತಿದ್ದುಪಡಿಗೆ ರೂ.100 ದಂಡ ಶುಲ್ಕವನ್ನು ನೆಫ್ಟ್ ಚಲನ್ ಮೂಲಕ ಪಾವತಿಸಿ ಮಂಡಳಿಗೆ ತಲುಪುವಂತೆ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗುತ್ತದೆ. 

ಪ್ರ. 3: ಪ್ರವೇಶಪತ್ರದಲ್ಲಿ ಭಾವಚಿತ್ರ ಬದಲಾದರೆ ಪರೀಕ್ಷೆ ಬರೆಯಬಹುದೇ?

ಉತ್ತರ: ಯಾವುದೇ ವಿದ್ಯಾರ್ಥಿಯ ಭಾವಚಿತ್ರ ಬದಲಾವಣೆಗೆ ಸಂಬಂಧಿಸಿದಂತೆ, ಪರೀಕ್ಷೆಗೆ ಮುಂಚೆ ಮಾಡಲಾದ ಬದಲಾವಣೆಗಳನ್ನು ಮಾತ್ರ ಮಂಡಳಿಯು ಪರಿಗಣಿಸುತ್ತದೆ. ಪರೀಕ್ಷಾ ನಂತರದಲ್ಲಿ ಬರುವ ವಿದ್ಯಾರ್ಥಿಗಳ ಭಾವಚಿತ್ರ ಬದಲಾವಣೆ ಕುರಿತ ಯಾವುದೇ ಮನವಿಗಳನ್ನು ಮಂಡಳಿ ಪುರಸ್ಕರಿಸುವುದಿಲ್ಲ. ಇದಕ್ಕೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ನೇರ ಜವಾಬ್ದಾರರಾಗಿರುತ್ತಾರೆ. ಒಂದು ವೇಳೆ ಇದಕ್ಕೆ ವ್ಯತಿರಿಕ್ತವಾಗಿ ಬದಲಿ ವಿದ್ಯಾರ್ಥಿ ಪರೀಕ್ಷೆ ಬರೆಯಲು ಸಹಕರಿಸಿ ಪರೀಕ್ಷಾ ಅವ್ಯವಹಾರದಲ್ಲಿ ಭಾಗಿಯಾಗಿರುತ್ತಾರೆಂದು ಪರಿಗಣಿಸಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಮತ್ತು ಶಾಲಾ ಮುಖ್ಯಸ್ಥರ ಮೇಲೆ ಕೆ.ಸಿ.ಎಸ್ (ಸಿ.ಸಿ.ಎ) ನಿಯಮ-1957 ಮತ್ತು 1983ರ ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕಾಯ್ದೆ-1966ರನ್ವಯ ಕ್ರಮ ಜರುಗಿಸಲಾಗುತ್ತದೆ. 

ಪ್ರ. 4: ಪ್ರವೇಶಪತ್ರದಲ್ಲಿ ಬದಲಾವಣೆಗಳಿದ್ದರೆ ಏನು ಮಾಡಬೇಕು?

ಉತ್ತರ: ಶಾಲೆಯಿಂದ ಅಪ್‌ಲೋಡ್ ಮಾಡಿರುವಂತೆ ವಿದ್ಯಾರ್ಥಿಗಳ ಹೆಸರು, ಭಾವಚಿತ್ರ, ಸಹಿ, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ, ಮಾಧ್ಯಮ, ಪರೀಕ್ಷೆಗೆ ತೆಗೆದುಕೊಳ್ಳುವ ವಿಷಯಗಳು, ವಿದ್ಯಾರ್ಥಿಯ ವಿಧ ಇತ್ಯಾದಿ ಸಂಪೂರ್ಣ ವಿವರಗಳು ಪ್ರವೇಶ ಪತ್ರದಲ್ಲಿ ಮುದ್ರಣವಾಗಿದ್ದು, ಸದರಿ ಮಾಹಿತಿಗಳಲ್ಲಿ ವಿದ್ಯಾರ್ಥಿ ಹೆಸರು, ತಂದೆ, ತಾಯಿಯ ಹೆಸರು ಪೂರ್ಣ ಬದಲಾವಣೆ ಇದ್ದಲ್ಲಿ ಹಾಗೂ ಜನ್ಮ ದಿನಾಂಕದಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಎ.ಆರ್.ಇ (ಶಾಲಾ ದಾಖಲಾತಿ ವಹಿಯ ಉಧೃತ ಭಾಗ) ಮತ್ತು ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳ ಜ್ಞಾಪನ ಪತ್ರವನ್ನು ಪರಿಶೀಲನಾ ಶಾಖೆಗೆ ನಿಗದಿತ ದಿನಾಂಕದೊಳಗೆ ಕಳುಹಿಸಿಕೊಡಬೇಕಾಗುತ್ತದೆ. ಹೀಗೆ ತಿದ್ದುಪಡಿಗೆ ಕಳುಹಿಸಿದ ಪ್ರವೇಶಪತ್ರಗಳನ್ನು ಮಂಡಳಿಯಲ್ಲಿನ ದಾಖಲೆಗಳೊಂದಿಗೆ ಪರಿಶೀಲಿಸಿ ಸರಿಪಡಿಸಲಾಗುತ್ತದೆ. 

ಪ್ರ. 5: ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪಾಸಾದ ವಿಷಯಕ್ಕೆ ಪರೀಕ್ಷೆ ಬರೆಯುವಂತೆ ಮುದ್ರಣವಾಗಿದ್ದಲ್ಲಿ ಏನು ಮಾಡಬೇಕು?

ಉತ್ತರ: ಆ ರೀತಿ ಆಗಿದ್ದಲ್ಲಿ, ಪಾಸಾದ ಬಗ್ಗೆ ಚುಕ್ಕೆ ಗುರುತಿಲ್ಲದ ಫಲಿತಾಂಶ ಪಟ್ಟಿಯನ್ನು ಮುಖ್ಯ ಶಿಕ್ಷಕರು ದೃಢೀಕರಿಸಿ ಪರೀಕ್ಷೆ ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಪರಿಶೀಲನಾ ಶಾಖೆಯ ಶಾಖಾಧಿಕಾರಿಗಳಿಗೆ ಕಳುಹಿಸಬೇಕಾಗುತ್ತದೆ. 

ಪ್ರ. 6: ಒಂದೇ ವಿದ್ಯಾರ್ಥಿಗೆ ಎರಡು ನೋಂದಣಿ ಸಂಖ್ಯೆಯ ಪ್ರವೇಶ ಪತ್ರಗಳು ಬಂದಿದ್ದರೆ?

ಉತ್ತರ: ಆ ರೀತಿ ಆದ ಪಕ್ಷದಲ್ಲಿ, ಒಂದನ್ನು ಉಳಿಸಿಕೊಂಡು ಮತ್ತೊಂದನ್ನು ರದ್ದುಪಡಿಸಿ ದೃಢೀಕರಿಸಿ ಸೂಕ್ತ ಷರಾದೊಂದಿಗೆ ಪರಿಶೀಲನಾ ಶಾಖೆಯ ಶಾಖಾಧಿಕಾರಿಗಳ ವಿಳಾಸಕ್ಕೆ ಹಿಂದಿರುಗಿಸಬೇಕಾಗುತ್ತದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ 2023: ಪರೀಕ್ಷಾ ಮಾದರಿ” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ