• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 06-09-2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023: ಪ್ರಮುಖ ಟಾಪಿಕ್‌ಗಳು

img-icon

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023: ಪ್ರಮುಖ ಟಾಪಿಕ್‌ಗಳು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಕಾಡುವ ಪ್ರಶ್ನೆಯೆಂದರೆ ವಿಜ್ಞಾನ, ಗಣಿತ ವಿಷಯಗಳಲ್ಲಿ ಮುಖ್ಯವಾದ ಟಾಪಿಕ್‌ಗಳು ಯಾವುವು ಎಂಬುದು. ಆಯಾ ಅಧ್ಯಾಯಕ್ಕೆ ವೇಟೇಜ್(weightage) ಆಧಾರದ ಮೇಲೆ ಈ ಅಧ್ಯಾಯ ಮುಖ್ಯವಾದದ್ದು ಎಂದು ಪರಿಗಣಿಸಬೇಕು. ಇದಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟು ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಉಳಿದ ಅಧ್ಯಾಯಗಳನ್ನೂ ಕಡೆಗಣಿಸುವಂತಿಲ್ಲ. ಒಟ್ಟಾರೆ ಸಮಗ್ರ ಪಠ್ಯವನ್ನು ಅಭ್ಯಾಸ ಮಾಡಲೇಬೇಕು. ಇಲ್ಲಿ ಕೊಟ್ಟಿರುವ ಟಾಪಿಕ್‌ಗಳ ಬಗ್ಗೆ ಹೆಚ್ಚು ಗಮನ ಹರಿಸುವುದರ ಜೊತೆಗೆ ಉಳಿದ ಟಾಪಿಕ್‌ಗಳನ್ನೂ ಅಭ್ಯಾಸ ಮಾಡುವುದರಿಂದ ಅತ್ಯಧಿಕ ಅಂಕಗಳನ್ನು ವಿದ್ಯಾರ್ಥಿಗಳು ಗಳಿಸಬಹುದು. ಈ ಲೇಖನದಲ್ಲಿ ಎಸ್‌ಎಸ್‌ಎಲ್‌ಸಿ ಪಠ್ಯಕ್ರಮದಲ್ಲಿನ ಪ್ರಮುಖ ಟಾಪಿಕ್‌ಗಳ ಬಗ್ಗೆ ವಿಷಯವಾರು ವಿವರಗಳನ್ನು ನಾವು ನೀಡಿದ್ದೇವೆ.

ಎಸ್ಎಸ್ಎಲ್‌ಸಿ ಪರೀಕ್ಷೆ 2022-23ರ ಪಠ್ಯಕ್ರಮ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಆರು ವಿಷಯಗಳಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ವಿದ್ಯಾರ್ಥಿಗಳು ಮೂರು ಕೋರ್ ವಿಷಯಗಳು, ಅಂದರೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಇತರ ಮೂರು ಭಾಷಾ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಏಳು ವಿವಿಧ ಮಾಧ್ಯಮಗಳಲ್ಲಿ ನಡೆಸುತ್ತದೆ.

ಭಾಷಾ ಆಯ್ಕೆಗಳನ್ನು ಮೂರು ಗುಂಪುಗಳಲ್ಲಿ ನೀಡಲಾಗಿದೆ ಮತ್ತು ವಿದ್ಯಾರ್ಥಿಗಳು ಪ್ರತಿ ಗುಂಪಿನಿಂದ ಒಂದು ಭಾಷೆಯನ್ನು ಆಯ್ಕೆ ಮಾಡಬೇಕು. ಕೆಳಗಿನ ಕೋಷ್ಟಕದಲ್ಲಿ ಆಯ್ಕೆಗಳನ್ನು ನೀಡಲಾಗಿದೆ:

ಪ್ರಥಮ ಭಾಷೆದ್ವಿತೀಯ ಭಾಷೆತೃತೀಯ ಭಾಷೆ
ಕನ್ನಡಇಂಗ್ಲಿಷ್ಹಿಂದಿ
ತೆಲುಗುಕನ್ನಡಕನ್ನಡ
ಹಿಂದಿಇಂಗ್ಲಿಷ್
ಮರಾಠಿಅರೇಬಿಕ್
ತಮಿಳುಉರ್ದು
ಉರ್ದುಸಂಸ್ಕೃತ
ಇಂಗ್ಲಿಷ್ಕೊಂಕಣಿ
ಸಂಸ್ಕೃತಪರ್ಷಿಯನ್

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023: ವಿಜ್ಞಾನ ವಿಷಯದ ಪ್ರಮುಖ ಟಾಪಿಕ್‌ಗಳು

ಕರ್ನಾಟಕ ಪ್ರೌಢಶಿಕ್ಷಣ  ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿಜ್ಞಾನ ವಿಷಯದಲ್ಲಿ
1. ವಿದ್ಯುಚ್ಛಕ್ತಿ

2. ಬೆಳಕು ಪ್ರತಿಫಲನ ಮತ್ತು ವಕ್ರೀಭವನ 

3. ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು

4. ಲೋಹಗಳು ಮತ್ತು ಅಲೋಹಗಳು 

5. ಜೀವ ಕ್ರಿಯೆಗಳು  

6. ವಿದ್ಯುತ್‌ಪ್ರವಾಹದ ಕಾಂತೀಯ ಪರಿಣಾಮಗಳು 

7. ಕಾರ್ಬನ್ ಮತ್ತು ಅದರ ಸಂಯುಕ್ತಗಳು

8. ಆನುವಂಶೀಯತೆ ಮತ್ತು ಜೀವವಿಕಾಸ 

ಈ ಅಧ್ಯಾಯಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಧ್ಯಾಯಗಳು ಮತ್ತು ಅಂಕಗಳ ಹಂಚಿಕೆಯ ವಿವರ ಈ ಕೆಳಗಿನಂತಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23 ವಿಜ್ಞಾನ ಪರೀಕ್ಷೆಯ ಪಠ್ಯಕ್ರಮ ಮತ್ತು ಅಂಕಗಳ ಹಂಚಿಕೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23 ವಿಜ್ಞಾನ ಪರೀಕ್ಷೆಯ ಬ್ಲೂಪ್ರಿಂಟ್
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳ ಹಂಚಿಕೆ
1. ವಿದ್ಯುಚ್ಛಕ್ತಿ 7
2. ಬೆಳಕು, ಪ್ರತಿಫಲನ ಮತ್ತು ವಕ್ರೀಭವನ 7
3. ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು 6
4. ಲೋಹಗಳು ಮತ್ತು ಅಲೋಹಗಳು 6
5. ಜೀವ ಕ್ರಿಯೆಗಳು 6
6. ವಿದ್ಯುತ್‌ಪ್ರವಾಹದ ಕಾಂತೀಯ ಪರಿಣಾಮಗಳು 6
7. ಕಾರ್ಬನ್ ಮತ್ತು ಅದರ ಸಂಯುಕ್ತಗಳು 6
8. ಆನುವಂಶೀಯತೆ ಮತ್ತು ಜೀವವಿಕಾಸ 6
9. ನಿಯಂತ್ರಣ ಮತ್ತು ಸಹಭಾಗಿತ್ವ 5
10. ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ 5
11. ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು 5
12. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು 4
13. ಧಾತುಗಳ ಆವರ್ತನೀಯ ವರ್ಗೀಕರಣ 3
14. ಶಕ್ತಿಯ ಆಕರಗಳು 3
15. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ 3
16. ನಮ್ಮ ಪರಿಸರ 2
ಒಟ್ಟು 80
ಆಂತರಿಕ ಅಂಕಗಳು 20

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023: ಗಣಿತ ವಿಷಯದ ಪಠ್ಯಕ್ರಮ ಮತ್ತು ಅಂಕಗಳ ವಿವರ

ಗಣಿತವು ತಾರ್ಕಿಕ ಚಿಂತನೆಯ ಅಗತ್ಯವಿರುವ ವಿಷಯವಾಗಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23ರ ಗಣಿತದ ಪಠ್ಯಕ್ರಮದಲ್ಲಿ ಒಳಗೊಂಡಿರುವ ಅಧ್ಯಾಯಗಳು ಮತ್ತು ಅವುಗಳ ಅಂಕಗಳ ಹಂಚಿಕೆಯ ಬ್ಲೂಪ್ರಿಂಟ್‌ ಅನ್ನು ಕೆಳಗೆ ನೀಡಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23ರ ಗಣಿತಶಾಸ್ತ್ರ  ಪರೀಕ್ಷೆಯ ಬ್ಲೂಪ್ರಿಂಟ್

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23 ಗಣಿತ ವಿಷಯದ ಪರೀಕ್ಷೆಯ ಬ್ಲೂಪ್ರಿಂಟ್
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ತ್ರಿಭುಜಗಳು 8
2. ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು 8
3. ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು 7
4. ಸಂಖ್ಯಾಶಾಸ್ತ್ರ 6
5. ವರ್ಗ ಸಮೀಕರಣಗಳು 6
6. ಬಹುಪದೋಕ್ತಿಗಳು 6
7. ಸಮಾಂತರ ಶ್ರೇಢಿಗಳು 6
8. ತ್ರಿಕೋನಮಿತಿಯ ಪ್ರಸ್ತಾವನೆ 5
9. ರಚನೆಗಳು 5
10. ನಿರ್ದೇಶಾಂಕ ರೇಖಾಗಣಿತ 5
11. ವಾಸ್ತವ ಸಂಖ್ಯೆಗಳು 4
12. ತ್ರಿಕೋನಮಿತಿಯ ಕೆಲವು ಅನ್ವಯಗಳು 4
13. ಸಂಭವನೀಯತೆ 3
14. ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು 3
ಒಟ್ಟು 80
ಆಂತರಿಕ ಅಂಕಗಳು 20

ಎಸ್‌ಎಸ್‌ಎಲ್‌ಸಿ 2022-23 ಸಮಾಜ ವಿಜ್ಞಾನ ಪಠ್ಯಕ್ರಮ

ಈ ವಿಷಯದಲ್ಲಿ ಪಾರಂಗತರಾಗಬೇಕಾದರೆ ಸಮಾಜ ವಿಜ್ಞಾನವು ಬಹಳ ಸಮಯ ತೆಗೆದುಕೊಳ್ಳುವ ವಿಷಯವಾಗಿದೆ. ಇದು ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ಹಲವು ವಿಷಯಗಳನ್ನು ಒಳಗೊಂಡಿದೆ. ಸಮಾಜ ವಿಜ್ಞಾನ ಪಠ್ಯಕ್ರಮದ ವಿವಿಧ ವಿಷಯಗಳನ್ನು ಕೆಳಗೆ ನೀಡಲಾಗಿದೆ:

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23 ಇತಿಹಾಸದ ಪಠ್ಯಕ್ರಮ

ಕರ್ನಾಟಕ ಎಸ್‌ಎಸ್‌ಎಲ್‌ಸಿ 2022-23 ಇತಿಹಾಸದ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಭಾರತಕ್ಕೆ ಯೂರೋಪಿಯನ್ನರ ಆಗಮನ
2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
3. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರಿನ ಒಡೆಯರು
5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು
6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)
7. ಸ್ವಾತಂತ್ರ್ಯ ಹೋರಾಟ
8. ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ
9. ಮಹಾಯುದ್ಧಗಳು ಹಾಗೂ ಭಾರತದ ಪಾತ್ರ

ಎಸ್ಎಸ್ಎಲ್‌ಸಿ 2022-23 ಭೂಗೋಳ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23 ಭೂಗೋಳ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು
2. ಭಾರತದ ಋತುಗಳು
3. ಭಾರತದ ಮಣ್ಣುಗಳು
4. ಭಾರತದ ಅರಣ್ಯಗಳು
5. ಭಾರತಾ ಜಲಸಂಪನ್ಮೂಲಗಳು
6. ಭಾರತದ ಭೂ ಬಳಕೆ ಹಾಗೂ ಕೃಷಿ
7. ಭಾರತದ ಖನಿಜ ಹಾಗೂ ಶಕ್ತಿ ಸಂಪನ್ಮೂಲಗಳು
8. ಭಾರತದ ಸಾರಿಗೆ ಹಾಗೂ ಸಂಪರ್ಕ
9. ಭಾರತದ ಪ್ರಮುಖ ಕೈಗಾರಿಕೆಗಳು
10. ಭಾರತದ ನಿಸರ್ಗ ವಿಪತ್ತುಗಳು

ಎಸ್ಎಸ್ಎಲ್‌ಸಿ 2022-23 ರಾಜ್ಯಶಾಸ್ತ್ರ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23 ರಾಜ್ಯಶಾಸ್ತ್ರ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಭಾರತದ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು
2. ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ
3. ಜಾಗತಿಕ ಸವಾಲುಗಳು ಹಾಗೂ ಭಾರತದ ಪಾತ್ರ
4. ಜಾಗತಿಕ ಸಂಸ್ಥೆಗಳು

ಎಸ್ಎಸ್ಎಲ್‌ಸಿ 2022-23 ಸಮಾಜಶಾಸ್ತ್ರ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23 ಸಮಾಜಶಾಸ್ತ್ರ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಸಾಮಾಜಿಕ ಸ್ತರ ವಿನ್ಯಾಸ
2. ದುಡಿಮೆ ಮತ್ತು ಆರ್ಥಿಕ ಜೀವನ
3. ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು
4. ಸಾಮಾಜಿಕ ಸವಾಲುಗಳು

ಎಸ್ಎಸ್ಎಲ್‌ಸಿ 2022-23 ಅರ್ಥಶಾಸ್ತ್ರ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23 ಅರ್ಥಶಾಸ್ತ್ರ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಅರ್ಥವ್ಯವಸ್ಥೆ ಮತ್ತು ಸರಕಾರ
2. ಗ್ರಾಮೀಣಾಭಿವೃದ್ದಿ
3. ಸಾರ್ವಜನಿಕ ಹಣಕಾಸು ಹಾಗೂ ಆಯ-ವ್ಯಯ

ಎಸ್ಎಸ್ಎಲ್‌ಸಿ 2022-23 ವ್ಯವಹಾರ ಅಧ್ಯಯನ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23 ವ್ಯವಹಾರ ಅಧ್ಯಯನ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಬ್ಯಾಂಕ್ ವ್ಯವಹಾರಗಳು
2. ಉದ್ಯಮಶೀಲತೆ
3. ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಒಟ್ಟಾರೆ ಬ್ಲೂಪ್ರಿಂಟ್

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಬ್ಲೂಪ್ರಿಂಟ್‌ ಅನ್ನು ಈ ಕೆಳಗೆ ಒದಗಿಸಲಾಗಿದ್ದು, ಯಾವ ವಿಷಯಕ್ಕೆ ಎಷ್ಟು ಅಂಕಗಳಿಗೆ ಪರೀಕ್ಷೆ ನಡೆಯಲಿದೆ ಎಂಬುದನ್ನು ವಿವರಿಸಲಾಗಿದೆ.

ವಿಷಯದ ಹೆಸರು ಅಂಕಗಳ ಸಂಖ್ಯೆ ಕಾಲಾವಧಿ
ಭಾಷಾ ಪತ್ರಿಕೆ I
ಕನ್ನಡ / ಇಂಗ್ಲಿಷ್ / ಹಿಂದಿ / ಸಂಸ್ಕೃತ / ತೆಲುಗು / ತಮಿಳು / ಮರಾಠಿ / ಉರ್ದು
100
ಥಿಯರಿ: 100
3 ಗಂಟೆಗಳು
ಭಾಷಾ ಪೇಪರ್ II
ಕನ್ನಡ / ಇಂಗ್ಲಿಷ್
100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆಗಳು
ಭಾಷಾ ಪತ್ರಿಕೆ III
ಹಿಂದಿ / ಕನ್ನಡ / ಇಂಗ್ಲಿಷ್ / ಅರೇಬಿಕ್ / ಉರ್ದು / ಸಂಸ್ಕೃತ / ಕೊಂಕಣಿ / ಆದಾಯ
100 Marks
ಥಿಯರಿ: 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆಗಳು
ಗಣಿತ 100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆಗಳು
ವಿಜ್ಞಾನ 100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆಗಳು
ಸಮಾಜ ವಿಜ್ಞಾನ 100 ಅಂಕಗಳು
ಥಿಯರಿ 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23 ಸಮಾಜ ವಿಜ್ಞಾನ ಪರೀಕ್ಷೆಯ ಬ್ಲೂಪ್ರಿಂಟ್

ಇತಿಹಾಸ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಭಾರತಕ್ಕೆ ಯೂರೋಪಿಯನ್ನರ ಆಗಮನ 2
2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ 2
3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು 3
4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು 2
5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು 2
6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857) 3
7. ಸ್ವಾತಂತ್ರ್ಯ ಹೋರಾಟ 2
8. ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ 4
9. ಸ್ವಾತಂತ್ರ್ಯೋತ್ತರ ಭಾರತ 2
10. 20ನೇ ಶತಮಾನದ ರಾಜಕೀಯ ಆಯಾಮಗಳು 3
ಒಟ್ಟು 25
ಭೂಗೋಳ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಭಾರತದ ಸ್ಥಾನ ಮತ್ತು ವಿಸ್ತೀರ್ಣ 1
2. ಭಾರತದ ಮೇಲ್ಮೈಲಕ್ಷಣಗಳು 2
3. ಭಾರತದ ವಾಯುಗುಣ 2
4. ಭಾರತದ ಮಣ್ಣುಗಳು 1
5. ಭಾರತದ ಅರಣ್ಯ ಸಂಪತ್ತು 2
6. ಭಾರತಾ ಜಲಸಂಪನ್ಮೂಲಗಳು 2
7. ಭಾರತದ ಭೂ ಸಂಪನ್ಮೂಲಗಳು 2
8. ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು 2
9. ಭಾರತದ ಸಾರಿಗೆ ಮತ್ತು ಸಂಪರ್ಕ 3
10. ಭಾರತದ ಕೈಗಾರಿಕೆಗಳು 2
11. ಭಾರತದ ನೈಸರ್ಗಿಕ ವಿಪತ್ತುಗಳು 2
12. ಭಾರತದ ಜನಸಂಖ್ಯೆ 2
ಒಟ್ಟು 23
ರಾಜ್ಯಶಾಸ್ತ್ರ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು 2
2. ಭಾರತದ ವಿದೇಶಾಂಗನೀತಿ 2
3. ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ 2
4. ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ 2
5. ಜಾಗತಿಕ ಸಂಸ್ಥೆಗಳು 2
ಒಟ್ಟು 10
ಸಮಾಜಶಾಸ್ತ್ರ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಸಾಮಾಜಿಕ ಸ್ತರ ವಿನ್ಯಾಸ 2
2. ದುಡಿಮೆ 2
3. ಸಾಮಾಜಿಕ ಚಳವಳಿಗಳು 2
4. ಸಾಮಾಜಿಕ ಸಮಸ್ಯೆಗಳು 2
ಒಟ್ಟು 8
ಅರ್ಥಶಾಸ್ತ್ರ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಅಭಿವೃದ್ಧಿ 2
2. ಗ್ರಾಮೀಣ ಅಭಿವೃದ್ದಿ 1
3. ಹಣ ಮತ್ತು ಸಾಲ 2
4. ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ 2
ಒಟ್ಟಿ 7
ವ್ಯವಹಾರ ಅಧ್ಯಯನ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಬ್ಯಾಂಕಿನ ವ್ಯವಹಾರಗಳು 2
2. ಉದ್ಯಮಗಾರಿಕೆ 1
3. ವ್ಯವಹಾರದ ಜಾಗತೀಕರಣ 2
4. ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ 2
ಒಟ್ಟು 7
ಒಟ್ಟು(ಇತಿಹಾಸ)
ಒಟ್ಟು (ಭೂಗೋಳ)
ಒಟ್ಟು (ರಾಜಕೀಯ ವಿಜ್ಞಾನ)
ಒಟ್ಟು (ಸಮಾಜಶಾಸ್ತ್ರ)
ಒಟ್ಟು (ಅರ್ಥಶಾಸ್ತ್ರ)
ಒಟ್ಟು (ವ್ಯಾಪಾರ ಅಧ್ಯಯನಗಳು)
ಒಟ್ಟು
25
23
10
8
7
7
80
ಆಂತರಿಕ ಅಂಕಗಳು 20

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಪ್ರಮುಖ ಟಾಪಿಕ್‌ಗಳಿಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಗಾದೆಗಳಿಗೆ ಎಷ್ಟು ವಾಕ್ಯಗಳಲ್ಲಿ ಉತ್ತರ ಬರೆಯಬೇಕು?

ಉತ್ತರ: ಗಾದೆಗೆ 3 ಅಂಕಗಳನ್ನು ನಿಗದಿಪಡಿಸಲಾಗಿದೆ. ಹಾಗಾಗಿ ಕನಿಷ್ಠ 7 ರಿಂದ 8 ವಾಕ್ಯಗಳ ಉತ್ತರ ಅಪೇಕ್ಷಿಸಲಾಗುತ್ತದೆ.

ಪ್ರ. 2: ವಿಜ್ಞಾನ ವಿಷಯದಲ್ಲಿ 5 ಅಂಕದ ಪ್ರಶ್ನೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಯಾವುದರಲ್ಲಿ ಬರುತ್ತದೆ?

ಉತ್ತರ: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಮೂರರಲ್ಲಿ ಯಾವುದರಲ್ಲಾದರೂ ಬರಬಹುದು.

ಪ್ರ. 3: ವಿಜ್ಞಾನದಲ್ಲಿ ಚಿತ್ರಗಳು ಎಷ್ಟು ಅಂಕಗಳಿಗೆ ಬರುತ್ತದೆ?

ಉತ್ತರ: 16 ಅಂಕಗಳು – 12 ಅಂಕಗಳು ಚಿತ್ರ ಬಿಡಿಸುವುದಕ್ಕೆ, 4 ಅಂಕಗಳು ಚಿತ್ರಗಳನ್ನು ಕುರಿತ ಪ್ರಶ್ನೆಗಳು.

ಪ್ರ. 4: ಸಮಾಜ ವಿಜ್ಞಾನದಲ್ಲಿ ಓದಿದ ವಿಷಯ ಮರೆತು ಹೋಗುತ್ತದೆ. ಹೇಗೆ ನೆನಪಿಟ್ಟುಕೊಳ್ಳುವುದು?

ಉತ್ತರ: ವಿಷಯವನ್ನು ಓದಿ Recall, Remember, Relate ಮಾಡಿ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆತ್ಮವಿಶ್ವಾಸದಿಂದ ಧೈರ್ಯವಾಗಿ ಉತ್ತರ ಬರೆಯಿರಿ.

ಪ್ರ. 5: ಕನ್ನಡ ಭಾಷಾ ಪತ್ರಿಕೆಯಲ್ಲಿನ ಕವಿ ಪರಿಚಯ ಬರೆಯುವ ವಿಧಾನ ತಿಳಿಸಿ?

ಉತ್ತರ: ಪ್ರಶ್ನೆ ಪತ್ರಿಕೆಯಲ್ಲಿ ಕೊಡಲಾದ ಕವಿ ಸಾಹಿತಿಗಳ ಪರಿಚಯವನ್ನು ವಾಕ್ಯರೂಪದಲ್ಲಿ ಬರೆಯಬೇಕು. ಕಾಲ, ಸ್ಥಳ, ಕೃತಿ ಹಾಗೂ ಪ್ರಶಸ್ತಿ ಬಿರುದುಗಳನ್ನು ಬರೆಯಬೇಕು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‍‌ಎಸ್‌ಎಲ್‌ಸಿ ಪರೀಕ್ಷೆ 2023ರ ಪ್ರಮುಖ ಟಾಪಿಕ್‌ಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ