
ಎಸ್ಎಸ್ಎಲ್ಸಿ ಬಳಿಕ ಮಾಡಬಹುದಾದ ಟಾಪ್ 5 ಕೋರ್ಸ್ಗಳು
August 19, 2022ಎಸ್ಎಸ್ಎಲ್ಸಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ: ಪ್ರತಿಯೊಬ್ಬರ ಜೀವನದಲ್ಲಿ ಎಸ್.ಎಸ್.ಎಲ್.ಸಿ ಅಂಕಟ್ಟಿಯು ಮಹತ್ವಪೂರ್ಣವಾದ ದಾಖಲೆಯಾಗಿದೆ. ಹೆಸರು, ಜನ್ಮ ದಿನಾಂಕ ಪರಿಶೀಲಿಸಲು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಅಂಕಪಟ್ಟಿಯನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಪ್ರಮಾಣ ಪತ್ರ ಅತ್ಯವಶ್ಯಕ. ಅದೇ ರೀತಿ ಉದ್ಯೋಗ, ಸರ್ಕಾರದ ಸೌಲಭ್ಯಗಳು ಪಡೆಯಬೇಕಾದರೆ, ಇನ್ನೂ ಅನೇಕ ರೀತಿಯ ಕೆಲಸ ಕಾರ್ಯಗಳಿಗೆ ಈ ಪ್ರಮಾಣ ಪತ್ರ ಬೇಕೇ ಬೇಕು. ಇಷ್ಟೆಲ್ಲಾ ಮಹತ್ವವುಳ್ಳ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನಾವು ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
ಸಾಮಾನ್ಯವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬಳಿಕ ಒಂದೆರಡು ವಾರಗಳಲ್ಲಿ ಎಸ್.ಎಸ್.ಎಲ್.ಸಿ ಅಂಕಪಟ್ಟಿಗಳನ್ನು ವಿದ್ಯಾಭ್ಯಾಸ ಮಾಡಿದ ಶಾಲೆಗಳಲ್ಲಿ ವಿತರಿಸಲಾಗುತ್ತದೆ. ಎಸ್.ಎಸ್.ಎಲ್.ಸಿ. ಅಂಕಪಟ್ಟಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳುವ ಮುನ್ನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕಿರು ಮಾಹಿತಿಯನ್ನು ಪರಿಶೀಲಿಸೋಣ.
ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪಟ್ಟಿಯನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಪರೀಕ್ಷಾ ಫಲಿತಾಂಶವನ್ನು ಆಯಾ ಶಾಲೆಗಳ ಮುಖ್ಯಶಿಕ್ಷಕರು, ಮಂಡಳಿಯ ಜಾಲತಾಣ ಲಿಂಕ್ ನಿಂದ ಶಾಲಾ ಲಾಗಿನ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಮಂಡಳಿಯು ಸೂಚಿಸಿದ ದಿನಾಂಕದಂದು ತಮ್ಮ ಶಾಲೆಯಲ್ಲಿ ಪ್ರಕಟಿಸುತ್ತಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಸಂಬಂಧಿಸಿದ ಶಾಲೆಗಳಿಗೆ ರವಾನಿಸುತ್ತದೆ. ಅಂಕಪಟ್ಟಿಗಳನ್ನು ಪಡೆದ ತಕ್ಷಣ ಮುಖ್ಯ ಶಿಕ್ಷಕರು ಸ್ವೀಕೃತಿಯನ್ನು ಮಂಡಳಿಗೆ 3 ದಿನಗಳೊಳಗಾಗಿ ನೀಡಬೇಕಾಗುತ್ತದೆ ಹಾಗೂ ಈ ಕೆಳಗಿನಂತೆ ಪರಿಶೀಲಿಸಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬೇಕಾಗುತ್ತದೆ.
ವಿದ್ಯಾರ್ಥಿಗಳು ಶಾಲೆಯಿಂದ ತಮ್ಮ ಅಂಕಪಟ್ಟಿಯನ್ನು ಪಡೆದುಕೊಂಡ ನಂತರ ಈ ಕೆಳಗಿನ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳಲು ಸಲಹೆ ನೀಡಲಾಗಿದೆ.
ಮೇಲೆ ತಿಳಿಸಿದ ವಿವರಗಳಲ್ಲಿ ಏನೇ ವ್ಯತ್ಯಾಸ ಇದ್ದರೂ ವಿದ್ಯಾರ್ಥಿಗಳು ಕೂಡಲೇ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಬೇಕು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವಿವಿಧ ಚಟುವಟಿಕೆಗಳನ್ನು ಗಣಕೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಮಂಡಳಿಯು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಆನ್‌ಲೈನ್‌ನಲ್ಲಿ ಡಿಜಿಲಾಕರ್ ಸೇವೆ ಮೂಲಕ ಪಡೆಯುವ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ.
ಡಿಜಿಲಾಕರ್ ಎನ್ನುವುದು ಭಾರತ ಸರ್ಕಾರವು ನಿರ್ವಹಿಸುತ್ತಿರುವ “ಡಿಜಿಟಲ್ ಲಾಕರ್” ಸೇವೆಯಾಗಿದ್ದು, ಇದು ಕೆಲವು ಅಧಿಕೃತ ದಾಖಲೆಗಳನ್ನು ಶೇಖರಿಸಿಡಲು ನಾಗರಿಕರಿಗೆ ನೆರವಾಗುತ್ತದೆ. ದಾಖಲೆಗಳನ್ನು ಸಾಗಿಸುವ ಅಗತ್ಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ಸೇವೆಯು ಹೊಂದಿದೆ.
1. ಡಿಜಿಲಾಕರ್ ಜಾಲತಾಣಕ್ಕೆ ಭೇಟಿ ನೀಡಬೇಕು.
2. ಡಿಜಿಲಾಕರ್‌ನ ಹೋಮ್ ಪೇಜ್ ತೆರೆದುಕೊಳ್ಳುತ್ತದೆ. ಸದರಿ ಹೋಮ್ ಪೇಜ್‌ನಲ್ಲಿ Sign up ಬಟನ್ ಕ್ಲಿಕ್ ಮಾಡಿ, ಮೊಬೈಲ್ ನಂಬರ್ ನಮೂದಿಸಿದಾಗ, ನೀವು ನಮೂದಿಸಿದ ಮೊಬೈಲ್ ನಂಬರ್‌ಗೆ OTP ಬರುತ್ತದೆ.
3. ಸದರಿ OTP ನಮೂದಿಸಿ Continue ಬಟನ್ ಕ್ಲಿಕ್ ಮಾಡಿದಾಗ, ನೀವು ಹೊಸದಾಗಿ User Name ಮತ್ತು Password ಅನ್ನು Create ಮಾಡಿಕೊಂಡು (User Name ಮತ್ತು Password ಮುಂದಿನ ಪ್ರಕ್ರಿಯೆಗಳಿಗೆ ಅವಶ್ಯಕತೆ ಇರುವುದರಿಂದ Save ಮಾಡಿಕೊಳ್ಳಬೇಕು) Sign Up ಬಟನ್ ಕ್ಲಿಕ್ ಮಾಡಬೇಕು.
4. Sign Up ಬಟನ್ ಕ್ಲಿಕ್ ಮಾಡಿದಾಗ Enter your ಆಧಾರ್ ನಂಬರ್ ಎಂದು ಬರುತ್ತದೆ. ಆಧಾರ್ ನಂಬರ್ ನಮೂದಿಸಿದ ಕೂಡಲೇ, ನಿಮ್ಮ ಮೊಬೈಲ್ ನಂಬರ್‌ಗೆ OTP ಬರುತ್ತದೆ. OTP ನಮೂದಿಸಿ ಸಬ್‌ಮಿಟ್ ಮಾಡಿದಾಗ ಡಿಜಿಲಾಕರ್‌ನ Sign up ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
5. ವಿದ್ಯಾರ್ಥಿಯು ಈಗ Create ಮಾಡಿರುವ User Name ಮತ್ತು Password ಬಳಸಿ Sign In ಆಗಬೇಕು.
6. Sign in ಆದ ಕೂಡಲೇ ಡಿಜಿಲಾಕರ್‌ನ ಡ್ಯಾಶ್‌ಬೋರ್ಡ್ (Dash Board) ಪೇಜ್ ತೆರೆದುಕೊಳ್ಳತ್ತದೆ, ಅಲ್ಲಿ Issued Documents ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ Check Partners Section ಮೇಲೆ ಕ್ಲಿಕ್ ಮಾಡಿದಾಗ Pull Documents ಪೇಜ್ ತೆರೆದುಕೊಳ್ಳುತ್ತದೆ.
7. Pull Documents ಪೇಜ್‌ನಲ್ಲಿ Partner Name ಬಾಕ್ಸ್‌ನಲ್ಲಿ Karnataka Secondary Education Examination Board ಆಯ್ಕೆ ಮಾಡಬೇಕು. Document type ಬಾಕ್ಸ್‌ನಲ್ಲಿ Class X Marks sheet ಆಯ್ಕೆ ಮಾಡಬೇಕು. ಈ ರೀತಿ ಮಾಡಿದಾಗ ನಿಮ್ಮ ಹೆಸರು, ಜನ್ಮ ದಿನಾಂಕ ಮತ್ತು ಫೋಟೋವನ್ನು ಆಧಾರ್‌ನಿಂದ ಪಡೆಯಲಾಗುತ್ತದೆ.
8. ಅದೇ ಪೇಜ್‌ನಲ್ಲಿ Enter Reg No ಎಂದು ಬಾಕ್ಸ್ ಇರುತ್ತದೆ. ಆ ಬಾಕ್ಸ್‌ನಲ್ಲಿ ಎಸ್.ಎಸ್.ಎಲ್.ಸಿ. ನೋಂದಣಿ ಸಂಖ್ಯೆಯನ್ನು ನಮೂದಿಸಿ, Declaration ಬಾಕ್ಸ್ ಟಿಕ್ ಮಾಡಿ, Get Document ಬಟನ್ ಕ್ಲಿಕ್ ಮಾಡಿದಾಗ, ನಿಮ್ಮ ಅಂಕಪಟ್ಟಿ ಡೌನ್‌ಲೋಡ್ ಆಗುತ್ತದೆ.
ಈ ಡಿಜಿಲಾಕರ್‌ನ ಸೌಲಭ್ಯ ಪಡೆಯಲು ವಿದ್ಯಾರ್ಥಿಗೆ ಆಧಾರ್ ನಂಬರ್ ಕಡ್ಡಾಯವಾಗಿರುತ್ತದೆ. ವಿದ್ಯಾರ್ಥಿಯ ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕ ಹಾಗೂ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕ ತಾಳೆ ಹೊಂದಿದಾಗ ಮಾತ್ರ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. ಡಿಜಿಲಾಕರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡ ಅಂಕಪಟ್ಟಿಯು ಡಿಜಿಟಲ್ ಅಂಕಪಟ್ಟಿಯಾಗಿದ್ದು, ಮೂಲ ಅಂಕಪಟ್ಟಿಗಳನ್ನು ಪ್ರತಿ ವರ್ಷದಂತೆ ಆಯಾ ಶಾಲೆಯಲ್ಲಿ ಪಡೆಯಬಹುದಾಗಿದೆ.
ಡಿಜಿಲಾಕರ್ ತಂತ್ರಾಂಶವನ್ನು ಬಳಸಿ ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನದ ಪೂರ್ಣ ಮಾಹಿತಿಯನ್ನು ಲಿಂಕ್‌ಗೆ ಜಾಲತಾಣದಲ್ಲಿ ಪಡೆಯಬಹುದು.
ವಿದ್ಯಾರ್ಥಿಯು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ವ್ಯಾಸಂಗ ಮಾಡಿದ ಶಾಲೆಯ ಮುಖ್ಯ ಶಿಕ್ಷಕರಿಂದ ಶಾಲೆಯ ಮೊಹರಿನೊಂದಿಗೆ ಅವರ ಸಹಿಯನ್ನು ಪಡೆಯಬೇಕಿರುತ್ತದೆ.
ನಿಗದಿತ ಶುಲ್ಕವನ್ನು NEFT ಚಲನ್ ಮೂಲಕ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪಾವತಿಸಬೇಕು..
ಇನ್ನು ಮುಂದೆ ಜನ್ಮದಿನಾಂಕ / ಮಾಧ್ಯಮ/ ವಿಷಯದ ವಿವರಗಳು/ ಭಾಷಾ ಮಾಧ್ಯಮ, ಹಾಗೂ ಲಿಂಗ ಇವುಗಳನ್ನು ಅನುತ್ತೀರ್ಣ ಅಂಕಪಟ್ಟಿಯಲ್ಲಿಯೇ ಸೇರ್ಪಡೆ ಮಾಡುವಂತೆ ಅನುಮೋದಿಸಲಾಗಿದೆ. ಅದರಂತೆ ಸಾಮಾನ್ಯ ಸೇವೆಗೆ ರೂ. 350/- ಮತ್ತು ತುರ್ತು ಸೇವೆಗೆ ರೂ.700/- ಶುಲ್ಕವನ್ನು ಪಡೆಯಲಾಗುತ್ತದೆ.
1. ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿಯನ್ನು ಕಳೆದುಕೊಂಡ ಅಭ್ಯರ್ಥಿಯು ದ್ವಿತೀಯ, ತೃತೀಯ ಮತ್ತು ನಾಲ್ಕನೇ ಅಂಕಪಟ್ಟಿಗಾಗಿ ನಿಗದಿತ ನಮೂನೆಯನ್ನು ಮಂಡಳಿಯ ವೆಬ್‌ಸೈಟ್ ಲಿಂಕ್‌ನಲ್ಲಿ ಸೇವೆಗಳು (Services) ವಿಭಾಗದಿಂದ ಪಡೆದುಕೊಳ್ಳಬಹುದು.
2. ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ನಂತರ ವ್ಯಾಸಂಗ ಮಾಡಿದ ಶಾಲೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಿಂದ ಶಾಲೆಯ ಮೊಹರಿನೊಂದಿಗೆ ಅವರ ಸಹಿಯನ್ನು ಪಡೆಯಬೇಕಾಗಿರುತ್ತದೆ:
3. ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ ಕಳೆದು ಹೋದ ಬಗ್ಗೆ ರೂ.20/-ಗಳ ಛಾಪಾ ಕಾಗದವನ್ನು ಇ-ಸ್ಟಾಂಪ್ ಮೂಲಕ First party ಅಭ್ಯರ್ಥಿ ಹೆಸರಿನಲ್ಲಿ Second party ಕೆ.ಎಸ್.ಇ.ಇ.ಬಿ ಹೆಸರಿನಲ್ಲಿ ಖರೀದಿಸಬೇಕು. ನ್ಯಾಯಾಲಯ/ ನೋಟರಿಯವರಿಂದ ಅಫಿಡವಿಟ್ ಪಡೆದು ಸಲ್ಲಿಸಬೇಕು. ಸದರಿ ಅಫಿಡವಿಡಟ್‌ನಲ್ಲಿ ಅಂಕಪಟ್ಟಿಯು ಯಾವ ಕಾರಣದಿಂದ ಕಳೆದುಹೋಗಿದೆ ಎಂದು ಸ್ಪಷ್ಟಪಡಿಸಿರಬೇಕು. ಒಂದು ವೇಳೆ ಮೂಲ ಎಸ್.ಎಸ್.ಎಲ್.ಸಿ. / ದ್ವಿತೀಯ/ ತೃತೀಯ ಅಂಕಪಟ್ಟಿ ಸಿಕ್ಕಿದಲ್ಲಿ ಅದನ್ನು ಮಂಡಳಿಗೆ ಕಡ್ಡಾಯವಾಗಿ ಹಿಂದಿರುಗಿಸುತ್ತೇನೆ ಎಂದು ಪ್ರಮಾಣೀಕರಿಸಬೇಕು.
4. ಅಭ್ಯರ್ಥಿಯು ಅಪ್ರಾಪ್ತ ವಯಸ್ಕನಾಗಿದ್ದಲ್ಲಿ ಮಾತ್ರ ಪೋಷಕರ ಹೆಸರಿನಲ್ಲಿ ಕ್ರಮಸಂಖ್ಯೆ-3 ರಲ್ಲಿ ತಿಳಿಸಿದಂತೆ ಅಫಿಡವಿಟ್ ಪಡೆಯಬೇಕು.
5. ಅಭ್ಯರ್ಥಿಯು ಅರ್ಜಿಯಲ್ಲಿ ಸಹಿ ಮಾಡಿದಂತೆ ಅಫಿಡವಿಟ್‌ನಲ್ಲಿಯೂ ಸಹಿ ಮಾಡಬೇಕು. ಅರ್ಜಿಯಲ್ಲಿಯೇ ಒಂದು ರೀತಿ ಅಫಿಡವಿಟ್‌ನಲ್ಲಿಯೇ ಒಂದು ರೀತಿ ಸಹಿ ಇರಕೂಡದು.
6. ಕೆಳಕಂಡಂತೆ ಸಾಮಾನ್ಯ ಹಾಗೂ ತುರ್ತು ಸೇವೆಗೆ ನಿಗದಿತ ಶುಲ್ಕಗಳಲ್ಲಿ ಅಗತ್ಯವಿರುವ ಶುಲ್ಕವನ್ನು NEFT ಚಲನ್ ಮೂಲಕ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪಾವತಿಸಿ, ಮೂಲ ಬ್ಯಾಂಕ್ ಚಲನ್ ಅನ್ನು ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು.
ಪ್ರ. 1: ಕ್ರೋಢೀಕೃತ ಅಂಕಪಟ್ಟಿ (Consolidated Marks Card) ಎಂದರೇನು?
ಉತ್ತರ: 1999ರ ಪೂರ್ವದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅಂತಹ ವಿದ್ಯಾರ್ಥಿಗಳಿಗೆ ಮಂಡಳಿಯಿಂದ ಚಿಕ್ಕದಾದ ಅಂಕಪಟ್ಟಿ (Statement of Marks) ನೀಡಲಾಗುತ್ತದೆ. ಇದರಲ್ಲಿ ಜನ್ಮ ದಿನಾಂಕ ಮುದ್ರಿತವಾಗಿರುವುದಿಲ್ಲ. ಅಂತಹ ಅಭ್ಯರ್ಥಿಗಳಿಗೆ ಕ್ರೋಢೀಕೃತ ಅಂಕಪಟ್ಟಿಯನ್ನು ನೀಡಲಾಗುತ್ತದೆ. ಇದನ್ನು ಮಂಡಳಿಯಿಂದ ಪಡೆಯಬೇಕು.
ಪ್ರ. 2: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯ ನೈಜತೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದೇ?
ಉತ್ತರ: ಹೌದು. ನಿಗದಿತ ಶುಲ್ಕ ರೂ.350 ಆನ್‌ಲೈನ್ ಮುಖಾಂತರ ಪಾವತಿಸಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಜಾಲತಾಣ ಲಿಂಕ್‌ನ ಮೂಲಕ ನೇರವಾಗಿ ಅಂಕಪಟ್ಟಿಯ ನೈಜತೆ ಪ್ರಮಾಣ ಪತ್ರವನ್ನು ಯಾವುದೇ ನೇಮಕಾತಿ ಪ್ರಾಧಿಕಾರವು ಪಡೆಯಬಹುದು.
ಪ್ರ. 3: Improvement ಅಂಕಪಟ್ಟಿ ಎಂದರೇನು?
ಉತ್ತರ: ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಪರೀಕ್ಷೆಗೆ ಹಾಜರಾಗಿ ಫಲಿತಾಂಶ ಉತ್ತಮ ಪಡಿಸಿಕೊಂಡ ವಿದ್ಯಾರ್ಥಿಗಳಿಗೆ Improvement ಅಂಕಪಟ್ಟಿಯನ್ನು ವಿತರಿಸಲಾಗುತ್ತದೆ.
ಪ್ರ. 4: ‘ಡಿಜಿಲಾಕರ್’ ಎಂಬುದು ಏನು?
ಉತ್ತರ: ಡಿಜಿಲಾಕರ್ ಎನ್ನುವುದು ಭಾರತ ಸರ್ಕಾರವು ನಿರ್ವಹಿಸುತ್ತಿರುವ ʼಡಿಜಿಟಲ್ ಲಾಕರ್’ ಸೇವೆಯಾಗಿದ್ದು, ಇದು ಕೆಲವು ಅಧಿಕೃತ ದಾಖಲೆಗಳನ್ನು ಶೇಖರಿಸಿಡಲು ನಾಗರಿಕರಿಗೆ ನೆರವಾಗುತ್ತದೆ. ದಾಖಲೆಗಳನ್ನು ಭೌತಿಕವಾಗಿ ಸಾಗಿಸುವ ಅಗತ್ಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ಸೇವೆ ಹೊಂದಿದೆ.
ಪ್ರ. 5: ಜನ್ಮ ದಿನಾಂಕ ತಪ್ಪಾಗಿದ್ದಲ್ಲಿ ತಿದ್ದುಪಡಿಗಾಗಿ ನಿಗದಿಪಡಿಸಿರುವ ಶುಲ್ಕ ಎಷ್ಟು?
ಉತ್ತರ: ಜನ್ಮ ದಿನಾಂಕ ತಪ್ಪಾಗಿದ್ದಲ್ಲಿ ಶುಲ್ಕ ರೂ.200 ಹಾಗೂ ದಂಡ ಶುಲ್ಕ ರೂ.800, ಒಟ್ಟು ರೂ.1000ಗಳನ್ನು ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಪಾವತಿಸಬೇಕು.
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್ಎಸ್ಎಲ್ಸಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.