
ಎಸ್ಎಸ್ಎಲ್ಸಿ ಬಳಿಕ ಮಾಡಬಹುದಾದ ಟಾಪ್ 5 ಕೋರ್ಸ್ಗಳು
August 19, 2022ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಗಳಿಗೆ ತಯಾರಿ ಪ್ರಾರಂಭಿಸುವುದು ಮತ್ತು ಅವರ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಅತ್ಯಗತ್ಯ. ಅಂತೆಯೇ ವಿದ್ಯಾರ್ಥಿಗಳು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ 2022 ಪಿಡಿಎಫ್ ಅನ್ನು ಉತ್ತರಗಳನ್ನು ಪರಿಶೀಲಿಸುವ ಮೂಲಕ ತಮ್ಮ ಮುಂದಿನ ಪರೀಕ್ಷೆಯಲ್ಲಿ ಯಾವ ರೀತಿ ಉತ್ತರಿಸಬಹುದು, ಮೌಲ್ಯಮಾಪಕರು ಉತ್ತರಗಳಲ್ಲಿ ಯಾವೆಲ್ಲಾ ಅಂಶಗಳನ್ನು ನಿರೀಕ್ಷಿಸುತ್ತಾರೆ ಎಂಬುದು ವಿದ್ಯಾರ್ಥಿಗಳಿಗೆ ತಿಳಿಯುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾದರಿಗಳು ಮತ್ತು ಮಾರ್ಕಿಂಗ್ ಸ್ಕೀಮ್ ಅರ್ಥಮಾಡಿಕೊಳ್ಳಲು ಮಾದರಿ ಪರೀಕ್ಷಾ ಪತ್ರಿಕೆಗಳನ್ನು ಬಿಡುಗಡೆ ಮಾಡುತ್ತದೆ. ಎಸ್ಎಸ್ಎಲ್‌ಸಿ ಪರೀಕ್ಷೆ 2023ಕ್ಕೆ ಸಂಬಂಧಿಸಿದಂತೆ ಮಂಡಳಿಯು ಅಧಿಕೃತ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಅಪ್‍ಡೇಟ್‌ಗಳನ್ನು ಸ್ವೀಕರಿಸಲು Embibeಗೆ ಭೇಟಿ ನೀಡುತ್ತಿರಿ.
ಉತ್ತರಗಳೊಂದಿಗೆ 2020 ರಿಂದ 2012 ರವರೆಗಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ 2022ನೇ ಸಾಲಿನ ಮಾದರಿ ಪ್ರಶ್ನೆಪತ್ರಿಕೆಗಳ ಪಿಡಿಎಫ್ ಲಿಂಕ್‌ಗಳನ್ನು ಇಲ್ಲಿ ನೀಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯ ಮಾದರಿ, ಯಾವ ರೀತಿಯ ಪ್ರಶ್ನೆಗೆ ಎಷ್ಟು ಅಂಕಗಳು ಎಂಬುದನ್ನು ಗಮನಿಸಬಹುದು. ಈ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದರಿಂದ ಮುಂದಿನ ಪರೀಕ್ಷೆಗೆ ಹೆಚ್ಚು ಪರಿಣಾಮಕಾರಿಯಾಗಿ ಸಿದ್ಧರಾಗಬಹುದು.
ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆ ಮಾದರಿ ಪ್ರಶ್ನೆ ಪತ್ರಿಕೆ | ಕನ್ನಡ ತೆಲುಗು ಹಿಂದಿ ತಮಿಳು ಉರ್ದು ಇಂಗ್ಲೀಷ್ ಮರಾಠಿ ಸಂಸ್ಕೃತ |
ಎಸ್‌ಎಸ್‌ಎಲ್‌ಸಿ ದ್ವಿತೀಯ ಭಾಷೆ ಮಾದರಿ ಪ್ರಶ್ನೆ ಪತ್ರಿಕೆ | ಇಂಗ್ಲೀಷ್ ಕನ್ನಡ |
ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಯ ಮಾದರಿ ಪ್ರಶ್ನೆ ಪತ್ರಿಕೆ | ಹಿಂದಿ ಕನ್ನಡ ಇಂಗ್ಲೀಷ್ ಸಂಸ್ಕೃತ ಅರೇಬಿಕ್ ಉರ್ದು ತುಳು ಕೊಂಕಣಿ |
ಎಸ್‌ಎಸ್‌ಎಲ್‌ಸಿ ಗಣಿತ ಮಾದರಿ ಪ್ರಶ್ನೆ ಪತ್ರಿಕೆ | ಇಂಗ್ಲೀಷ್ ಮಾಧ್ಯಮ ಕನ್ನಡ ಮಾಧ್ಯಮ |
ಎಸ್‌ಎಸ್‌ಎಲ್‌ಸಿ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ | ಇಂಗ್ಲೀಷ್ ಮಾಧ್ಯಮ ಕನ್ನಡ ಮಾಧ್ಯಮ |
ಎಸ್‌ಎಸ್‌ಎಲ್‌ಸಿ ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ | ಇಂಗ್ಲೀಷ್ ಮಾಧ್ಯಮ ಕನ್ನಡ ಮಾಧ್ಯಮ |
ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಆಫ್‌ಲೈನ್‌ನಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ. KSSEEB ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಲು ಈ ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ.
ವಿದ್ಯಾರ್ಥಿಗಳು ಯಾವ ಟಾಪಿಕ್‌ಗೆ ಎಷ್ಟು ಸಮಯ ನೀಡಬೇಕು, ಹೆಚ್ಚು ಗಮನ ಹರಿಸಬೇಕು ಎಂಬುದನ್ನು ತಿಳಿಯಲು ವಿಷಯವಾರು ಅಂಕಗಳ ಹಂಚಿಕೆಯ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಅಂಕದ ಅಧ್ಯಾಯಗಳನ್ನು ಆಯ್ಕೆ ಮಾಡುವುದರಿಂದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ತಮ್ಮ ಒಟ್ಟಾರೆ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ವಾರ್ಷಿಕ ಪರೀಕ್ಷೆಯಲ್ಲಿ ನಿಮಗೆ ಸಹಾಯ ಮಾಡುವ ವಿಜ್ಞಾನ ಮತ್ತು ಗಣಿತ ವಿಷಯಗಳ ಅಧ್ಯಾಯವಾರು ಅಂಕಗಳ ಹಂಚಿಕೆಯನ್ನು ಕೆಳಗಿನ ಕೋಷ್ಟಕದಲ್ಲಿ ಪಟ್ಟಿ ಮಾಡಿದ್ದೇವೆ.
ಗಣಿತ ಅಧ್ಯಾಯ ಹೆಸರು | ಅಂಕಗಳ ಹಂಚಿಕೆ |
---|---|
ತ್ರಿಭುಜಗಳು | 8 |
ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು | 8 |
ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು | 7 |
ಸಂಖ್ಯಾಶಾಸ್ತ್ರ | 6 |
ವರ್ಗ ಸಮೀಕರಣಗಳು | 6 |
ಬಹುಪದೋಕ್ತಿಗಳು | 6 |
ಸಮಾಂತರ ಶ್ರೇಢಿಗಳು | 5 |
ತ್ರಿಕೋನಮಿತಿಯ ಪ್ರಸ್ತಾವನೆ | 6 |
ರಚನೆಗಳು | 8 |
ನಿರ್ದೇಶಾಂಕ ರೇಖಾಗಣಿತ | 5 |
ವಾಸ್ತವ ಸಂಖ್ಯೆಗಳು | 4 |
ತ್ರಿಕೋನಮಿತಿಯ ಕೆಲವು ಅನ್ವಯಗಳು | 4 |
ಸಂಭವನೀಯತೆ | 3 |
ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು | 3 |
ಒಟ್ಟು | 80 ಅಂಕಗಳು |
ಉಚಿತ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಲು ಮೇಲಿನ ಅಧ್ಯಾಯಗಳ ಮೇಲೆ ಕ್ಲಿಕ್ ಮಾಡಿ
ವಿಜ್ಞಾನ ಅಧ್ಯಾಯದ ಹೆಸರು | ಅಂಕಗಳ ಹಂಚಿಕೆ |
---|---|
ವಿದ್ಯುಚ್ಛಕ್ತಿ | 7 |
ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನ | 7 |
ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು | 6 |
ಲೋಹಗಳು ಮತ್ತು ಅಲೋಹಗಳು | 6 |
ಜೀವ ಕ್ರಿಯೆಗಳು | 6 |
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು | 6 |
ಕಾರ್ಬನ್ ಮತ್ತು ಅದರ ಸಂಯುಕ್ತಗಳು | 6 |
ಅನುವಂಶೀಯತೆ ಮತ್ತು ಜೀವವಿಕಾಸ | 6 |
ನಿಯಂತ್ರಣ ಮತ್ತು ಸಹಭಾಗಿತ್ವ | 5 |
ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ | 5 |
ಮಾನವ ಕಣ್ಣು ಮತ್ತು ವರ್ಣಮಯ ಜಗತ್ತು | 5 |
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು | 4 |
ಧಾತುಗಳ ಆವರ್ತನೀಯ ವರ್ಗೀಕರಣ | 3 |
ಶಕ್ತಿಯ ಆಕರಗಳು | 3 |
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ | 3 |
ನಮ್ಮ ಪರಿಸರ | 2 |
ಒಟ್ಟು | 80 ಅಂಕಗಳು |
ಪ್ರ. 1: ಕಳೆದ ಐದು ವರ್ಷಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ನಾನು ಎಲ್ಲಿ ಡೌನ್‌ಲೋಡ್ ಮಾಡಬಹುದು?
ಉತ್ತರ: ವಿದ್ಯಾರ್ಥಿಗಳು ಕಳೆದ ಐದು ವರ್ಷಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು Embibe ನಿಂದ ಹಾಗೂ sslc.kar.nic.in ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.
ಪ್ರ. 2: ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆಗಳು-2022 ಯಾವಾಗ ಬಿಡುಗಡೆಯಾಗುತ್ತದೆ?
ಉತ್ತರ: KSEEB ಎಸ್.ಎಸ್.ಎಲ್.ಸಿ ಮಾದರಿ ಪತ್ರಿಕೆಗಳು 2022 ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪುಟದಲ್ಲಿ ನೀವು PDF ರೂಪದಲ್ಲಿ ಮಾದರಿ ಪತ್ರಿಕೆಗಳು ಮತ್ತು ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
ಪ್ರ. 3: ಪರೀಕ್ಷಾ ಕೇಂದ್ರದಲ್ಲಿ ಎಷ್ಟು ಸಮಯದ ಮೊದಲು ಹಾಜರಿರಬೇಕು?
ಉತ್ತರ: ಪರೀಕ್ಷಾ ಸಮಯದ ಅರ್ಧ ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಹಾಜರಿರಬೇಕು.
ಪ್ರ. 4: ಪರೀಕ್ಷಾ ಸಮಯದ ಮುಕ್ತಾಯದ ಮುನ್ನ ಪರೀಕ್ಷಾ ಕೊಠಡಿಯಿಂದ ಹೊರಹೋಗಬಹುದೇ? ಒಮ್ಮೆ ಹೊರ ಹೋಗಿ ನಂತರ ಬಂದು ಪರೀಕ್ಷೆ ಬರೆಯಲು ಅವಕಾಶವಿದೆಯೇ?
ಉತ್ತರ: ಪರೀಕ್ಷೆ ಪ್ರಾರಂಭವಾಗಿ ಅರ್ಧ ಗಂಟೆಯವರೆಗೂ ಪರೀಕ್ಷಾ ಕೊಠಡಿಯಿಂದ ಹೊರ ಹೋಗಲು ಅವಕಾಶವಿರುವುದಿಲ್ಲ. ಅರ್ಧ ಗಂಟೆಯ ನಂತರ ಹೊರ ಹೋಗಬಹುದಾಗಿದ್ದು, ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಎರಡನ್ನೂ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೆ ಒಪ್ಪಿಸಬೇಕಾಗುತ್ತದೆ. ಆದರೆ ಒಮ್ಮೆ ಹೊರ ಹೋದ ನಂತರ ಮತ್ತೆ ಪರೀಕ್ಷಾ ಕೊಠಡಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.
ಪ್ರ. 5: ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಉತ್ತರ ಕೀಲಿಯಲ್ಲಿ ಇರುವಂತೆಯೇ ಉತ್ತರ ಬರೆಯದಿದ್ದರೆ ಅಂಕ ಸಿಗುವುದಿಲ್ಲವೇ?
ಉತ್ತರ: ಮಂಡಳಿಯು ಪರೀಕ್ಷೆ ಮುಗಿದ ನಂತರ ಪ್ರಕಟಿಸುವ ಉತ್ತರ ಕೀಲಿಯು ಗೈಡ್‌ಲೈನ್ ಮಾತ್ರ. ಉತ್ತರ ಕೀಲಿಯಲ್ಲಿರುವಂತೆಯೇ Word to Word ಉತ್ತರ ಇರಬೇಕೆಂದೇನು ಇಲ್ಲ. ಆದರೆ ಪ್ರಶ್ನೆಯು ನಿರೀಕ್ಷಿಸುವಂತಹ ಉತ್ತರವನ್ನು ಧ್ವನಿಸುವಂತಿದ್ದರೆ ಅಂಕಗಳನ್ನು ನೀಡಲಾಗುತ್ತದೆ.
ಕರ್ನಾಟಕ ಬೋರ್ಡ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.