
ಎಸ್ಎಸ್ಎಲ್ಸಿ ಬಳಿಕ ಮಾಡಬಹುದಾದ ಟಾಪ್ 5 ಕೋರ್ಸ್ಗಳು
August 19, 2022ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023: ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಸೂಕ್ತವಲ್ಲ. ಮುಂಚಿತವಾಗಿಯೇ ಅಭ್ಯಾಸ ಮಾಡಿದರೆ ಯಾವುದೇ ಪರೀಕ್ಷೆಯಲ್ಲಿ ಗೆಲುವು ಸಾಧಿಸುವುದು ಕಷ್ಟವಲ್ಲ. ಇದಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯೂ ಹೊರತಲ್ಲ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ 2023ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕೆಂದರೆ ವಿದ್ಯಾರ್ಥಿಗಳು ಮೊದಲು ಮಾಡಬೇಕಾದ ಕೆಲಸವೆಂದರೆ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸಬೇಕು. ಇದರಿಂದ ಪರೀಕ್ಷೆಯ ಮಾದರಿ, ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ, ತಾವೆಷ್ಟು ಸಿದ್ಧರಾಗಿದ್ದೇವೆ ಎಂಬುದನ್ನು ಓರೆಗೆ ಹಚ್ಚಿಕೊಳ್ಳಲು ಸಹಾಯವಾಗುತ್ತದೆ.
ಪರೀಕ್ಷೆಗಳು ಪ್ರಾರಂಭವಾಗುವ ಕೆಲವು ತಿಂಗಳುಗಳ ಮೊದಲು ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಎಲ್ಲಾ ವಿಷಯಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡುತ್ತದೆ. ಮಾದರಿಪ್ರಶ್ನೆ ಪತ್ರಿಕೆಗಳೊಂದಿಗೆ ಅಭ್ಯಾಸ ಮಾಡುವುದು ಪರೀಕ್ಷೆಯ ತಯಾರಿಗೆ ಬಹಳ ಅಗತ್ಯ. ಅಲ್ಲದೆ, ಮೌಲ್ಯಮಾಪನದ ಸಂದರ್ಭದಲ್ಲಿ ಮೌಲ್ಯ ಮಾಪಕರು ಯಾವ ಅಂಶಗಳನ್ನು ಗಮನಿಸುತ್ತಾರೆ ಎಂಬುದು ಸಹ ಇದರಿಂದ ಅರಿವಿಗೆ ಬರುತ್ತದೆ. ಈ ಮೂಲಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಲೇಖನದಲ್ಲಿ ಎಸ್‌ಎಸ್‌ಎಲ್‌ಸಿ 2023ರ ಪರೀಕ್ಷಾ ಸಿದ್ಧತೆಗೆ ಸಹಾಯವಾಗುವ ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳ ಬಗ್ಗೆ ವಿವರಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಅಪ್‌ಡೇಟ್‌ಗಳನ್ನು ಸ್ವೀಕರಿಸಲು Embibe ಅನ್ನು ಫಾಲೋ ಮಾಡಿ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳು ಲಭ್ಯವಿದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಿಗೆ ತಯಾರಿಯನ್ನು ಪ್ರಾರಂಭಿಸುವುದು ಮತ್ತು ಅವರ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಉತ್ತಮ. ಜೊತೆಗೆ, ವಿದ್ಯಾರ್ಥಿಗಳು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಅವಶ್ಯವಾಗಿದೆ.
ಕೋವಿಡ್‌ನಂತಹ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ವಿಧಿಸಲಾಗಿರುವ ನಿರ್ಬಂಧಗಳನ್ನು ಸರಿಹೊಂದಿಸಲು 2022ರ ಪರೀಕ್ಷೆಯ ಮಾದರಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿತ್ತು. ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾದರಿಯನ್ನು ಈ ವರ್ಷ ಕೊಂಚ ಬದಲಾಯಿಸಲಾಗಿದೆ ಮತ್ತು ಮಂಡಳಿಯು ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿದ್ದಾರೆ. ವಿದ್ಯಾರ್ಥಿಗಳು ಈ ಕೆಳಗಿನಂತೆ ಪಟ್ಟಿ ಮಾಡಲಾದ ಮಾದರಿ ಪ್ರಶ್ನೆ ಪತ್ರಿಕೆಗಳ ನೇರ ಲಿಂಕ್‌ಗಳನ್ನು ಕಾಣಬಹುದು:
ಕರ್ನಾಟಕ ಬೋರ್ಡ್ ಪ್ರಥಮ ಭಾಷೆಯ ಮಾದರಿ ಪ್ರಶ್ನೆ ಪತ್ರಿಕೆ | ಕನ್ನಡ ತೆಲುಗು ಹಿಂದಿ ತಮಿಳು ಉರ್ದು ಇಂಗ್ಲಿಷ್ ಮರಾಠಿ ಸಂಸ್ಕೃತ |
ಕರ್ನಾಟಕ ಮಂಡಳಿ ದ್ವಿತೀಯ ಭಾಷೆಯ ಮಾದರಿ ಪ್ರಶ್ನೆ ಪತ್ರಿಕೆ | ಇಂಗ್ಲಿಷ್ ಕನ್ನಡ |
ಕರ್ನಾಟಕ ಮಂಡಳಿ ತೃತೀಯ ಭಾಷೆಯ ಮಾದರಿ ಪ್ರಶ್ನೆ ಪತ್ರಿಕೆ | ಹಿಂದಿ ಕನ್ನಡ ಇಂಗ್ಲಿಷ್ ಸಂಸ್ಕೃತ ಅರೇಬಿಕ್ ಉರ್ದು ತುಳು ಕೊಂಕಣಿ |
ಕರ್ನಾಟಕ ಮಂಡಳಿ ಗಣಿತ ಮಾದರಿ ಪ್ರಶ್ನೆ ಪತ್ರಿಕೆ | ಇಂಗ್ಲಿಷ್ ಮಾಧ್ಯಮ ಕನ್ನಡ ಮಾಧ್ಯಮ |
ಕರ್ನಾಟಕ ಮಂಡಳಿ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ | ಇಂಗ್ಲಿಷ್ ಮಾಧ್ಯಮ ಕನ್ನಡ ಮಾಧ್ಯಮ |
ಕರ್ನಾಟಕ ಮಂಡಳಿ ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ | ಇಂಗ್ಲಿಷ್ ಮಾಧ್ಯಮ ಕನ್ನಡ ಮಾಧ್ಯಮ |
KSEEB ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನಂತೆ ಪಟ್ಟಿ ಮಾಡಲಾದ ಹಂತಗಳನ್ನು ಅನುಸರಿಸಿ.
ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿಷಯವಾರು ಅಂಕಗಳ ಹಂಚಿಕೆಯವಿ ಸಂಪೂರ್ಣ ಜ್ಞಾನ ಹೊಂದಿರುವುದು ಅಗತ್ಯ. ಇದು ವಿದ್ಯಾರ್ಥಿಗಳಿಗೆ ಯಾವ ಟಾಪಿಕ್‌ಗಳು ಅಥವಾ ಅಧ್ಯಾಯಗಳ ಮೇಲೆ ಹೆಚ್ಚಿನ ಅಭ್ಯಾಸ ಮಾಡಬೇಕು ಎಂಬುದರ ಕಲ್ಪನೆಯನ್ನು ನೀಡುತ್ತದೆಯಲ್ಲದೆ, ಪರೀಕ್ಷೆಯಲ್ಲಿ ತಮ್ಮ ಒಟ್ಟಾರೆ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಮಂಡಳಿ ಪರೀಕ್ಷೆಯಲ್ಲಿ ನಿಮಗೆ ಸಹಾಯ ಮಾಡುವ ವಿಜ್ಞಾನ ಮತ್ತು ಗಣಿತ ವಿಷಯಗಳ ಅಧ್ಯಾಯವಾರು ಅಂಕಗಳ ವಿತರಣೆಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಗಣಿತ ಅಧ್ಯಾಯದ ಹೆಸರು | ಅಂಕಗಳ ಹಂಚಿಕೆ |
---|---|
ತ್ರಿಭುಜಗಳು | 8 |
ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು | 8 |
ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು | 7 |
ಸಂಖ್ಯಾಶಾಸ್ತ್ರ | 6 |
ವರ್ಗ ಸಮೀಕರಣಗಳು | 6 |
ಬಹುಪದೋಕ್ತಿಗಳು | 6 |
ಸಮಾಂತರ ಶ್ರೇಢಿಗಳು | 6 |
ತ್ರಿಕೋನವ್ಮಿತಿಯ ಪ್ರಸ್ತಾವನೆ | 5 |
ರಚನೆಗಳು | 5 |
ನಿರ್ದೇಶಾಂಕ ರೇಖಾಗಣಿತ | 5 |
ವಾಸ್ತವ ಸಂಖ್ಯೆಗಳು | 4 |
ತ್ರಿಕೋನಮಿತಿಯ ಕೆಲವು ಅನ್ವಯಗಳು | 4 |
ಸಂಭವನೀಯತೆ | 3 |
ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು | 3 |
ಒಟ್ಟು | 80 ಅಂಕಗಳು |
ಉಚಿತ ಅಣಕು ಪರೀಕ್ಷೆಯನ್ನು (Mock Test) ತೆಗೆದುಕೊಳ್ಳಲು ಮೇಲಿನ ಕೋಷ್ಟಕದಲ್ಲಿನ ಅಧ್ಯಾಯದ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಗಣಿತ ಅಧ್ಯಾಯದ ಹೆಸರು | ಅಂಕಗಳ ಹಂಚಿಕೆ |
---|---|
ತ್ರಿಭುಜಗಳು | 8 |
ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು | 8 |
ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು | 7 |
ಸಂಖ್ಯಾಶಾಸ್ತ್ರ | 6 |
ವರ್ಗ ಸಮೀಕರಣಗಳು | 6 |
ಬಹುಪದೋಕ್ತಿಗಳು | 6 |
ಸಮಾಂತರ ಶ್ರೇಢಿಗಳು | 6 |
ತ್ರಿಕೋನವ್ಮಿತಿಯ ಪ್ರಸ್ತಾವನೆ | 5 |
ರಚನೆಗಳು | 5 |
ನಿರ್ದೇಶಾಂಕ ರೇಖಾಗಣಿತ | 5 |
ವಾಸ್ತವ ಸಂಖ್ಯೆಗಳು | 4 |
ತ್ರಿಕೋನಮಿತಿಯ ಕೆಲವು ಅನ್ವಯಗಳು | 4 |
ಸಂಭವನೀಯತೆ | 3 |
ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು | 3 |
ಒಟ್ಟು | 80 ಅಂಕಗಳು |
ಪ್ರ. 1: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಳೆದ ಐದು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ನಾನು ಎಲ್ಲಿ ಡೌನ್‌ಲೋಡ್ ಮಾಡಬಹುದು?
ಉತ್ತರ: ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಳೆದ ಐದು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು Embibe ನಿಂದ ಹಾಗೂ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.
ಪ್ರ. 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಮಾದರಿ ಪ್ರಶ್ನೆ ಪತ್ರಿಕೆಗಳು ಯಾವಾಗ ಬಿಡುಗಡೆಯಾಗುತ್ತವೆ?
ಉತ್ತರ: KSEEBಯು 2022-23ರ ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ. ಮಂಡಳಿಯು ಮಾಡರಿ ಪ್ರಶ್ನೆ ಪತ್ರಿಕೆಗಳನ್ನು ಅಪ್‌ಲೋಡ್ ಮಾಡಿದ ಬಳಿಕ ನೀವು, ವೆಬ್‌ಸೈಟ್‌ಗೆ ಭೇಟಿ ನೀಡಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪ್ರ. 3: ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯಲ್ಲಿ ಎಷ್ಟು MCQ ಪ್ರಶ್ನೆಗಳನ್ನು ಕೇಳಲಾಗುತ್ತದೆ?
ಉತ್ತರ: KSEEB ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಎಂಟು ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದಾಗ್ಯೂ, ಈ ವರ್ಷ MCQ ಗಳು ಹೆಚ್ಚಾಗಬಹುದು.
ಪ್ರ. 4: ವಿಜ್ಞಾನ ಪರೀಕ್ಷೆಯಲ್ಲಿ ಎಷ್ಟು ದೀರ್ಘ ಉತ್ತರದ ಪ್ರಶ್ನೆಗಳನ್ನು ಕೇಳಲಾಗುತ್ತದೆ?
ಉತ್ತರ: KSEEB ಎಸ್‌ಎಸ್‌ಎಲ್‌ಸಿ ವಿಜ್ಞಾನ ವಿಷಯದ ಮಂಡಳಿ ಪರೀಕ್ಷೆಯಲ್ಲಿ ನಾಲ್ಕು ದೀರ್ಘ ಉತ್ತರ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಪ್ರ. 5: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳು 2022 ರಲ್ಲಿ ಆಂತರಿಕ ಆಯ್ಕೆ (Internal Choice) ಲಭ್ಯವಿದೆಯೇ?
ಉತ್ತರ: ಹೌದು, ಕರ್ನಾಟಕ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳು 2022 ರಲ್ಲಿ ಆಂತರಿಕ ಆಯ್ಕೆ ಲಭ್ಯವಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. ʻಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆʼ ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ನೀಡುತ್ತಿರಿ.