• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆಗಳು 2022-23

img-icon

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆಗಳು 2022-23: ಹತ್ತು ವರ್ಷಗಳ ಶಾಲಾ ಶಿಕ್ಷಣವನ್ನು ರಾಜ್ಯ ಪಠ್ಯಕ್ರಮದಲ್ಲಿ ಪೂರೈಸಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸಿ ಮುಂದಿನ ವಿದ್ಯಾಭ್ಯಾಸಕ್ಕೆ ಮುನ್ನುಡಿಯನ್ನು ಬರೆಯಲಾಗುತ್ತದೆ. 

ಆನ್‌ಲೈನ್‌ ಮುಖಾಂತರ ವಿದ್ಯಾರ್ಥಿಗಳ ನೋಂದಣಿಯಿಂದ ಆರಂಭಿಸಿ ಪ್ರವೇಶ ಪತ್ರ ವಿತರಣೆ, ಮಂಡಳಿ ಸರ್ವರ್‌ಗೆ ಮೌಲ್ಯಮಾಪನಗೊಂಡ ಅಂಕಗಳ ನೇರ ದಾಖಲೀಕರಣ, ಫಲಿತಾಂಶ ಪ್ರಕಟಣೆ, ಶಾಲಾ ಲಾಗಿನ್‌ಗೆ ಫಲಿತಾಂಶ ಪಟ್ಟಿಗಳ ರವಾನೆ, ಉತ್ತರ ಪತ್ರಿಕೆಗಳ ಛಾಯಾಪ್ರತಿ ಪಡೆಯುವುದು, ಮರುಮೌಲ್ಯಮಾಪನ, ವಲಸೆ ಪ್ರಮಾಣಪತ್ರ ಪಡೆಯುವಿಕೆ, ಅಂಕಪಟ್ಟಿಗಳ ನೈಜತೆ ಪರಿಶೀಲನೆ ಈ ಎಲ್ಲಾ ಕಾರ್ಯಚಟುವಟಿಕೆಗಳನ್ನು ಆನ್‌ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ. ಪೂರಕವಾಗಿ ಅಗತ್ಯವಿರುವ ಮಾಹಿತಿಯನ್ನು ಸರ್ಕಾರಿ ಆದೇಶಗಳು ಹಾಗೂ ಮಂಡಳಿಯ ಸುತ್ತೋಲೆಗಳ ಮೂಲಕ ನೀಡಲಾಗುತ್ತಿದೆ. 

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರತಿ ವರ್ಷ ಮಾರ್ಚ್‌/ಏಪ್ರಿಲ್ ಮತ್ತು ಜೂನ್ ಮಾಹೆಯಲ್ಲಿ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಹತ್ತನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಎಸ್.ಎಸ್.ಎಲ್.ಸಿ. (Secondary school leaving Certificate) ಪರೀಕ್ಷೆಯನ್ನು ನಡೆಸುತ್ತದೆ. ಸಾಮಾನ್ಯವಾಗಿ ಮುಖ್ಯ ಪರೀಕ್ಷೆಯನ್ನು ಮಾರ್ಚ್‌/ಏಪ್ರಿಲ್ ತಿಂಗಳಲ್ಲಿ ನಡೆಸಲಾಗುತ್ತದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಂದುವರೆಸಲು ಅನುಕೂಲವಾಗುವ ಸದುದ್ದೇಶದಿಂದ ಪೂರಕ ಪರೀಕ್ಷೆಯನ್ನು ಜೂನ್ ಮಾಹೆಯಲ್ಲಿ ನಡೆಸಲಾಗುತ್ತಿದೆ. 

ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಆ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು ಸಹಕಾರಿಯಾಗಿವೆ. ಇದಕ್ಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಯೂ ಹೊರತಲ್ಲ. ಎಸ್.ಎಸ್.ಎಲ್.ಸಿ. ಮಾದರಿ ಪತ್ರಿಕೆಗಳನ್ನು ಅಭ್ಯಸಿಸುವುದರಿಂದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದರ ಜೊತೆಗೆ ಅತ್ಯಧಿಕ ಅಂಕಗಳನ್ನೂ ಪಡೆಯಬಹುದು. 

ವಿಷಯ ಆಯ್ಕೆ ಪ್ರಕ್ರಿಯೆ

  1. ಕರ್ನಾಟಕ ಎಸ್ಎಸ್ಎಲ್‍ಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಮೂರು ಭಾಷೆಗಳು ಮತ್ತು ಮೂರು ಕೋರ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಮೂರು ಮುಖ್ಯ ವಿಷಯಗಳು. ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ವಿದ್ಯಾರ್ಥಿಗಳಿಗೆ ಇವುಗಳ ಜೊತೆಗೆ ಪರ್ಯಾಯ ವಿಷಯಗಳು ಲಭ್ಯವಿವೆ. ಎಲ್ಲಾ ಪತ್ರಿಕೆಗಳು ಮೂರು ಗಂಟೆಗಳ ಅವಧಿಯದ್ದಾಗಿರುತ್ತವೆ.
  2. ಭಾಷೆಗಳು- ಅಭ್ಯರ್ಥಿಗಳು ಮೂರು ವಿಭಿನ್ನ ಭಾಷೆಗಳನ್ನು ಕಲಿಯಬೇಕಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯ ಭಾಷೆಗಳನ್ನು ಆಯ್ಕೆಗಳನ್ನಾಗಿ ಹೊಂದಿದ್ದಾರೆ. ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ತೆಲುಗು, ತಮಿಳು, ಮರಾಠಿ, ಮತ್ತು ಉರ್ದು ಭಾಷೆಗಳಲ್ಲಿ ಒಂದನ್ನು ಪತ್ರಿಕೆ I ಕ್ಕೆ ಆಯ್ಕೆ ಮಾಡಬಹುದು. ವಿದ್ಯಾರ್ಥಿಗಳು ಭಾಷಾ ಪತ್ರಿಕೆ II ಕ್ಕೆ ಕನ್ನಡ ಮತ್ತು ಇಂಗ್ಲಿಷ್‌ನಿಂದ ಆಯ್ಕೆ ಮಾಡಬಹುದು. ಭಾಷಾ ಪತ್ರಿಕೆ III ಕ್ಕೆ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ ಮತ್ತು ತುಳು ಭಾಷೆಗಳಿಂದ ಒಂದನ್ನು ಆಯ್ಕೆ ಮಾಡಬಹುದು. ಭಾಷಾ ಪತ್ರಿಕೆ I 100 ಅಂಕಗಳದ್ದಾಗಿರುತ್ತದೆ. ಆದರೆ ಭಾಷಾ ಪತ್ರಿಕೆ II ಮತ್ತು III ತಲಾ 80 ಅಂಕಗಳ ಲಿಖಿತ ಪರೀಕ್ಷೆಗಳನ್ನು ಹೊಂದಿರುತ್ತವೆ ಮತ್ತು 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ  ನಿಗದಿಪಡಿಸಲಾಗಿರುತ್ತದೆ.
  3. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಇವು ಮೂರು ಕೋರ್ ವಿಷಯಗಳು. ಮೂರಕ್ಕೂ ತಲಾ 80 ಅಂಕಗಳ ಲಿಖಿತ ಪರೀಕ್ಷೆ ಮತ್ತು 20 ಅಂಕಗಳ ಆಂತರಿಕ ಪರೀಕ್ಷೆ ಇರುತ್ತದೆ. ಕಲಿಕೆಯ ತೊಂದರೆಗಳಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ವಿಷಯಗಳೆಂದರೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಇತ್ಯಾದಿ. ಈ ಪರ್ಯಾಯ ವಿಷಯಗಳು ಸಹ 80 ಅಂಕಗಳ ಲಿಖಿತ ಪರೀಕ್ಷೆ ಮತ್ತು 20 ಅಂಕಗಳ ಆಂತರಿಕ ಪರೀಕ್ಷೆಗಳನ್ನು ಹೊಂದಿರುತ್ತವೆ.
  4. ಪರೀಕ್ಷೆಗಳು ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಪ್ರಾರಂಭವಾಗುತ್ತವೆ ಮತ್ತು ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳುತ್ತವೆ. ಪ್ರತಿ ವರ್ಷ ಸಾಮಾನ್ಯವಾಗಿ ಏಪ್ರಿಲ್ ನಾಲ್ಕನೇ ವಾರದಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ. ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಸಹ ನಡೆಸಲಾಗುತ್ತದೆ. ಪೂರಕ ಪರೀಕ್ಷೆಯ ಫಲಿತಾಂಶಗಳನ್ನು ಜುಲೈನಲ್ಲಿ ಪ್ರಕಟಿಸಲಾಗುತ್ತದೆ.

ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ವರ್ಗೀಕರಣ ವಿಧ

1. ಶಾಲಾ ಅಭ್ಯರ್ಥಿಗಳು:

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ-1966ರ ಪರಿಚ್ಛೇದ VI ನಿಯಮ-37(1)(ii) ಮತ್ತು ಅನುಬಂಧ-III ನಿಯಮ-7ರನ್ವಯ, ರಾಜ್ಯದ ಅಧಿಕೃತ ಪ್ರೌಢ ಶಾಲೆಯಲ್ಲಿ 8 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ವಿದ್ಯಾರ್ಥಿಯನ್ನು ಶಾಲಾ ವಿದ್ಯಾರ್ಥಿಯೆಂದು ಪರಿಗಣಿಸಲಾಗುತ್ತದೆ.

2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಶಾಲಾ ಅಭ್ಯರ್ಥಿಗಳೆಂದು ಪರಿಗಣಿಸಿದೆ. ಈ ವರ್ಗದ ಸಂಕೇತ ಸಿ.ಸಿ.ಇ.-ಆರ್.ಎಫ್.(CCERF) ಆಗಿದೆ.

2. ಪುನರಾವರ್ತಿತ ಅಭ್ಯರ್ಥಿಗಳು:

• ಶಾಲೆ/ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ CCE ಪದ್ಧತಿಯಲ್ಲಿ ಪರೀಕ್ಷೆಗೆ ಕುಳಿತು ಅನುತ್ತೀರ್ಣರಾಗಿದ್ದು, ಪುನಃ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ತೆಗೆದುಕೊಳ್ಳುವ ಅರ್ಹ ಅಭ್ಯರ್ಥಿಗಳನ್ನು CCERR ಎಂಬುದಾಗಿ ವರ್ಗೀಕರಿಸಲಾಗಿದೆ. 

• ಶಾಲೆ/ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಏಪ್ರಿಲ್ 2011ಕ್ಕಿಂತ ಪೂರ್ವದಲ್ಲಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದು, ಪುನಃ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯನ್ನು ತೆಗೆದುಕೊಳ್ಳುವ ಅರ್ಹ ಅಭ್ಯರ್ಥಿಗಳನ್ನು NSR ಎಂಬುದಾಗಿ ವರ್ಗೀಕರಿಸಲಾಗಿದೆ.

ಮಾನದಂಡಗಳು:

1. ಹತ್ತು ವರ್ಷದ ಔಪಚಾರಿಕ ಶಿಕ್ಷಣವನ್ನು ಮುಗಿಸಿದ ಎಲ್ಲಾ ವಿದ್ಯಾರ್ಥಿಗಳು, ಹತ್ತನೇ ವರ್ಷದ ಅಂತ್ಯದಲ್ಲಿ ಎಸ್.ಎಸ್.ಎಲ್.ಸಿ. ಅಂತಿಮ ಪರೀಕ್ಷೆ ಬರೆಯತಕ್ಕದ್ದು,

2. ಪರೀಕ್ಷೆಯು ವಿದ್ಯಾರ್ಥಿಯ ಆಂತರಿಕ ಮೌಲ್ಯಮಾಪನ ಹಾಗೂ ಬಾಹ್ಯ ಪರೀಕ್ಷಾ ವಿಧಾನವನ್ನು ಒಳಗೊಂಡಿರಬೇಕು.

3. ಬಾಹ್ಯ ಪರೀಕ್ಷೆಗೆ ಶೇ.80 ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಶೇ.20 ಅಂಕಗಳನ್ನು ಮೀಸಲಿಡತಕ್ಕದ್ದು.

4. ವಿದ್ಯಾರ್ಥಿಗಳ ಪ್ರಗತಿಯನ್ನು ಭಾಗ-ಎ (ಪಠ್ಯ ವಿಷಯಗಳು), ಭಾಗ-ಬಿ (ಸಹ ಪಠ್ಯ ವಿಷಯಗಳು) ಆಧಾರದ ಮೇಲೆ ಪರಿಗಣಿಸಬೇಕಾಗುತ್ತದೆ.

5. ಭಾಗ-ಎ ಯಲ್ಲಿ ಬರುವ ಪ್ರತಿ ವಿಷಯಗಳಿಗೆ ಒಟ್ಟಾರೆ ಅಂಕಗಳು ಮತ್ತು ಶ್ರೇಣಿ (Cumulative Grade Average- CGA) ಯನ್ನು ನೀಡಲಾಗುತ್ತದೆ.

ಎಲ್ಲಾ ವಿಷಯಗಳನ್ನು ಒಳಗೊಂಡು ಬಾಹ್ಯ ಪರೀಕ್ಷೆಗೆ ಒಟ್ಟು 500 ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನಕ್ಕೆ 125 ಅಂಕಗಳನ್ನು ನಿಗದಿಪಡಿಸಲಾಗಿದೆ. ವಿಷಯವಾರು ಅಂಕಗಳ ವಿಂಗಡಣೆ ಕೆಳಕಂಡಂತಿದೆ. 

ವಿಷಯಬಾಹ್ಯಆಂತರಿಕಒಟ್ಟು
ಪ್ರಥಮ ಭಾಷೆ10025125
ದ್ವಿತೀಯ ಭಾಷೆ8020100
ತೃತೀಯ ಭಾಷೆ8020100
ಗಣಿತ8020100
ವಿಜ್ಞಾನ8020100
ಸಮಾಜ ವಿಜ್ಞಾನ8020100
ಒಟ್ಟು500125625

ಭಾಗ-ಬಿ ಯಲ್ಲಿ (P1) ದೈಹಿಕ ಮತ್ತು ಆರೋಗ್ಯ ಶಿಕ್ಷಣ, (P2) ಮನೋಭಾವ ಮತ್ತು ಮೌಲ್ಯಗಳು, (P3) ಕಾರ್ಯಾನುಭವ, (P4) ಕಲಾ ಶಿಕ್ಷಣ ಈ ಸಹ ಪಠ್ಯವಿಷಯಗಳಿಗೆ, ಎ, ಬಿ ಅಥವಾ ಸಿ ಶ್ರೇಣಿಗಳನ್ನು ನೀಡಲಾಗುತ್ತದೆ. 

ಅಂಕಗಳು ಮತ್ತು ಶ್ರೇಣಿಗಳ ವಿವರ: 

ಒಟ್ಟು 625 ಅಂಕಗಳಿಗೆ:

ಅಂಕಗಳುಶೇಕಡಾಶ್ರೇಣಿ
563-62590 ರಿಂದ 100ಎ+
500-56280 ರಿಂದ 90 ರವರೆಗೆ
438-49970 ರಿಂದ 80 ರವರೆಗೆಬಿ+
375-43760 ರಿಂದ 70 ರವರೆಗೆಬಿ
313-37450 ರಿಂದ 60 ರವರೆಗೆಸಿ+
219-31235 ರಿಂದ 50 ರವರೆಗೆ‌ಸಿ

ವಿಷಯವಾರು:

ಪ್ರಥಮ ಭಾಷಾ ವಿಷಯದಲ್ಲಿ ಒಟ್ಟು 125 ಅಂಕಗಳಿಗೆ ಮತ್ತು ಉಳಿದ ವಿಷಯಗಳಲ್ಲಿ ಒಟ್ಟು 100 ಅಂಕಗಳಿಗೆ.

ಅಂಕಗಳುಶೇಕಡಾಶ್ರೇಣಿ
90-10090 ರಿಂದ 100ಎ+
80-8980 ರಿಂದ 90 ರವರೆಗೆ
70-7970 ರಿಂದ 80 ರವರೆಗೆಬಿ+
60-6960 ರಿಂದ 70 ರವರೆಗೆಬಿ
50-5950 ರಿಂದ 60 ರವರೆಗೆಸಿ+
35-4935 ರಿಂದ 50 ರವರೆಗೆ‌ಸಿ

ಭಾಗ ‘ಬಿ’ಯ ಸಹಪಠ್ಯ ವಿಷಯಗಳಿಗೆ ಗಳಿಸಿದ ಅಂಕಗಳ ಆಧಾರದ ಮೇಲೆ ನೀಡುವ ಗ್ರೇಡ್ (ಶ್ರೇಣಿ)

ಶೇಕಡಾಶ್ರೇಣಿ
80 ರಿಂದ 100
50 ರಿಂದ 79 ರವರೆಗೆಬಿ
35 ರಿಂದ 49 ರವರೆಗೆ‌ಸಿ

ಎಸ್‌ಎಸ್‌ಎಲ್‌ಸಿ ಗಣಿತ ಮಾದರಿ ಪ್ರಶ್ನೆ ಪತ್ರಿಕೆ

ಪರೀಕ್ಷಾರ್ಥಿಗಳಿಗಾಗಿ ಸಾಮಾನ್ಯ ಸೂಚನೆಗಳು

1. ಈ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ 38 ಪ್ರಶ್ನೆಗಳನ್ನು ಹೊಂದಿದೆ.

2. ಈ ಪ್ರಶ್ನೆ ಪತ್ರಿಕೆಯನ್ನು ಹಿಮ್ಮುಖ ಜಾಕೆಟ್ ಮೂಲಕ ಮೊಹರು (ಸೀಲ್) ಮಾಡಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಸಮಯಕ್ಕೆ ನಿಮ್ಮ ಪ್ರಶ್ನೆ ಪತ್ರಿಕೆಯ ಬಲಬದಿ ಪಾರ್ಶ್ವವನ್ನು ಕತ್ತರಿಸಿ, ಪತ್ರಿಕೆಯಲ್ಲಿ ಎಲ್ಲಾ ಪುಟಗಳು ಇವೆಯೇ ಎಂದು ಪರೀಕ್ಷಿಸಿಕೊಳ್ಳಿ.

3. ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಪ್ರಶ್ನೆಗಳಿಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ.

4. ಬಲಭಾಗದಲ್ಲಿ ಕೊಟ್ಟಿರುವ ಅಂಕಿಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ಸೂಚಿಸುತ್ತವೆ.

5, ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವೂ ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆ ಪತ್ರಿಕೆಯ ಮೇಲ್ಭಾಗದಲ್ಲಿ ನೀಡಲಾಗಿದೆ.

ಎಸ್‌ಎಸ್‌ಎಲ್‌ಸಿ ಗಣಿತ ಮಾದರಿ ಪ್ರಶ್ನೆ ಪತ್ರಿಕೆ PDF: ಡೌನ್‌ಲೋಡ್ ಮಾಡಿ

ಎಸ್‌ಎಸ್‌ಎಲ್‌ಸಿ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ

ಪರೀಕ್ಷಾರ್ಥಿಗಳಿಗಾಗಿ ಸಾಮಾನ್ಯ ಸೂಚನೆಗಳು

  1. ಈ ಪ್ರಶ್ನೆ ಪತ್ರಿಕೆಯಲ್ಲಿ ಭಾಗ A: ಭೌತವಿಜ್ಞಾನ, ಭಾಗ – B: ರಸಾಯನವಿಜ್ಞಾನ, ಭಾಗ C: ಜೀವವಿಜ್ಞಾನ ಎಂಬ ಮೂರು ಭಾಗಗಳಿವೆ.

2. ಈ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ 38 ಪ್ರಶ್ನೆಗಳನ್ನು ಹೊಂದಿದೆ.

3. ಈ ಪ್ರಶ್ನೆ ಪತ್ರಿಕೆಯನ್ನು ಹಿಮ್ಮುಖ ಜಾಕೆಟ್ ಮೂಲಕ ಮೊಹರು (ಸೀಲ್) ಮಾಡಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಸಮಯಕ್ಕೆ ನಿಮ್ಮ ಪ್ರಶ್ನೆ ಪತ್ರಿಕೆಯ ಬಲಬದಿ ಪಾರ್ಶ್ವವನ್ನು ಕತ್ತರಿಸಿ, ಪತ್ರಿಕೆಯಲ್ಲಿ ಎಲ್ಲಾ ಪುಟಗಳು ಇವೆಯೇ ಎಂದು ಪರೀಕ್ಷಿಸಿಕೊಳ್ಳಿ

4. ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಪ್ರಶ್ನೆಗಳಿಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ.

5. ಬಲಭಾಗದಲ್ಲಿ ಕೊಟ್ಟಿರುವ ಅಂಕಿಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ಸೂಚಿಸುತ್ತವೆ.

6. ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವೂ ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆ ಪತ್ರಿಕೆಯ ಮೇಲ್ಬಾಗದಲ್ಲಿ ನೀಡಲಾಗಿದೆ.

ಎಸ್.ಎಸ್.ಎಲ್.ಸಿ. ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ PDF: ಡೌನ್‌ಲೋಡ್ ಮಾಡಿ

ಎಸ್.ಎಸ್.ಎಲ್.ಸಿ.  ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ PDF: ಡೌನ್‌ಲೋಡ್ ಮಾಡಿ

ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ

ಪರೀಕ್ಷಾರ್ಥಿಗಳಿಗಾಗಿ ಸಾಮಾನ್ಯ ಸೂಚನೆಗಳು

ಈ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಒಟ್ಟು 45 ಪ್ರಶ್ನೆಗಳನ್ನು ಹೊಂದಿದೆ.

2. ಈ ಪ್ರಶ್ನೆ ಪತ್ರಿಕೆಯನ್ನು ಹಿಮ್ಮುಖ ಜಾಕೆಟ್ ಮೂಲಕ ಮೊಹರು (ಸೀಲ್) ಮಾಡಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಸಮಯಕ್ಕೆ ನಿಮ್ಮ ಪ್ರಶ್ನೆ ಪತ್ರಿಕೆಯ ಬಲಬದಿ ಪಾರ್ಶ್ವವನ್ನು ಕತ್ತರಿಸಿ, ಪತ್ರಿಕೆಯಲ್ಲಿ ಎಲ್ಲಾ ಪುಟಗಳು ಇವೆಯೇ ಎಂದು ಪರೀಕ್ಷಿಸಿಕೊಳ್ಳಿ.

3. ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಪ್ರಶ್ನೆಗಳಿಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ.

4. ಬಲಭಾಗದಲ್ಲಿ ಕೊಟ್ಟಿರುವ ಅಂಕಿಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ಸೂಚಿಸುತ್ತವೆ.

5. ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವೂ ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆ ಪತ್ರಿಕೆಯ ಮೇಲ್ಬಾಗದಲ್ಲಿ ನೀಡಲಾಗಿದೆ.

ಎಸ್.ಎಸ್.ಎಲ್.ಸಿ.  ಪ್ರಥಮ ಭಾಷೆ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ PDF: ಡೌನ್‌ಲೋಡ್ ಮಾಡಿ

ಎಸ್‌ಎಸ್‌ಎಲ್‌ಸಿ ದ್ವಿತೀಯ ಭಾಷೆ ಇಂಗ್ಲಿಷ್ ಮಾದರಿ ಪ್ರಶ್ನೆ ಪತ್ರಿಕೆ

ಪರೀಕ್ಷಾರ್ಥಿಗಳಿಗಾಗಿ ಸಾಮಾನ್ಯ ಸೂಚನೆಗಳು

1. ಈ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ 38 ಪ್ರಶ್ನೆಗಳನ್ನು ಹೊಂದಿದೆ.

2. ಈ ಪ್ರಶ್ನೆ ಪತ್ರಿಕೆಯನ್ನು ಹಿಮ್ಮುಖ ಜಾಕೆಟ್ ಮೂಲಕ ಮೊಹರು (ಸೀಲ್) ಮಾಡಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಸಮಯಕ್ಕೆ ನಿಮ್ಮ ಪ್ರಶ್ನೆ ಪತ್ರಿಕೆಯ ಬಲಬದಿ ಪಾರ್ಶ್ವವನ್ನು ಕತ್ತರಿಸಿ, ಪತ್ರಿಕೆಯಲ್ಲಿ ಎಲ್ಲಾ ಪುಟಗಳು ಇವೆಯೇ ಎಂದು ಪರೀಕ್ಷಿಸಿಕೊಳ್ಳಿ.

3. ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಪ್ರಶ್ನೆಗಳಿಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ.

4. ಬಲಭಾಗದಲ್ಲಿ ಕೊಟ್ಟಿರುವ ಅಂಕಿಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ಸೂಚಿಸುತ್ತವೆ.

5, ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವೂ ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆ ಪತ್ರಿಕೆಯ ಮೇಲ್ಬಾಗದಲ್ಲಿ ನೀಡಲಾಗಿದೆ.

ಎಸ್.ಎಸ್.ಎಲ್.ಸಿ. ದ್ವಿತೀಯ ಭಾಷೆ ಇಂಗ್ಲಿಷ್ ಮಾದರಿ ಪ್ರಶ್ನೆ ಪತ್ರಿಕೆ PDF: ಡೌನ್‌ಲೋಡ್ ಮಾಡಿ

ಎಸ್.ಎಸ್.ಎಲ್.ಸಿ. ತೃತೀಯ ಭಾಷೆ ಹಿಂದಿ (NCERT ಪಠ್ಯಕ್ರಮ) ಮಾದರಿ ಪ್ರಶ್ನೆ ಪತ್ರಿ ಕೆ PDF: ಡೌನ್‌ಲೋಡ್ ಮಾಡಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಕನಿಷ್ಠ ಅಂಕಗಳು ಎಷ್ಟು?

ಉತ್ತರ: ಬಾಹ್ಯ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಲ್ಲಿ 100 ಅಂಕಗಳಿಗೆ ಕನಿಷ್ಠ 35 ಹಾಗೂ ಇತರೆ ವಿಷಯಗಳಲ್ಲಿ 80 ಅಂಕಗಳಿಗೆ ಕನಿಷ್ಠ 28 ಅಂಕಗಳನ್ನು ಪಡೆಯಬೇಕಾಗುತ್ತದೆ. ಒಟ್ಟಾರೆ ವಿದ್ಯಾರ್ಥಿಯು ತೇರ್ಗಡೆಯಾಗಲು ಬಾಹ್ಯ ಪರೀಕ್ಷೆಯ 500 ಅಂಕಗಳಿಗೆ ಕನಿಷ್ಠ 175 ಅಂಕಗಳನ್ನು (ಶೇ.35) ಪಡೆದಿರಬೇಕು.

ಪ್ರ. 2: ವಿದ್ಯಾರ್ಥಿಯು ತೇರ್ಗಡೆಯಾಗಲು ಸರಾಸರಿ ಎಷ್ಟು ಅಂಕಗಳನ್ನು ಪಡೆಯಬೇಕು?

ಉತ್ತರ: ವಿದ್ಯಾರ್ಥಿ ತೇರ್ಗಡೆಯಾಗಲು ಬಾಹ್ಯ ಪರೀಕ್ಷೆಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.30 ಹಾಗೂ ಬಾಹ್ಯ ಪರೀಕ್ಷೆಯ ಎಲ್ಲಾ ವಿಷಯಗಳ ಸರಾಸರಿ ಶೇ.35 ಆಗಬೇಕು. ಹಾಗೂ ಬಾಹ್ಯ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನದ ಎಲ್ಲಾ ವಿಷಯಗಳ ಸರಾಸರಿ ಶೇಕಡ 35 ಆಗಿರಬೇಕು.

ಪ್ರ. 3: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿರುವ ಭಾಷೆಗಳು ಹಾಗೂ ವಿಷಯಗಳು ಯಾವುವು?

ಉತ್ತರ: ಎಸ್.ಎಸ್.ಎಲ್.ಸಿ. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಮೂರು (03) ಭಾಷೆಗಳು ಮತ್ತು ಮೂರು (03) ಕೋರ್ ವಿಷಯಗಳನ್ನು ಅಭ್ಯಾಸ ಮಾಡಿ, ಪರೀಕ್ಷೆ ಬರೆಯಬೇಕು.

ಪ್ರ. 4: ಎಸ್.ಎಸ್.ಎಲ್.ಸಿಯಲ್ಲಿ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ ಯಾವುದು?

ಉತ್ತರ: ಸರ್ಕಾರದ ಭಾಷಾ ನೀತಿಯಂತೆ ಪರೀಕ್ಷಾ ಮಂಡಳಿ ನಿಗದಿಪಡಿಸಿರುವ 8 ಪ್ರಥಮ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ಪ್ರಥಮ ಭಾಷೆಯಾಗಿ, ನಿಗದಿಪಡಿಸಿರುವ 2 ದ್ವಿತೀಯ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ದ್ವಿತೀಯ ಭಾಷೆಯಾಗಿ ಮತ್ತು ನಿಗದಿಪಡಿಸಿರುವ 9 ತೃತೀಯ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಪರೀಕ್ಷಾ ಮಂಡಳಿ ನಿಗದಿಪಡಿಸಿರುವ ಭಾಷಾ ಸಂಯೋಜನೆಯಂತೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು.

ಪ್ರಥಮ ಮತ್ತು ದ್ವಿತೀಯ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ಕನ್ನಡ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡ ಭಾಷೆಯನ್ನು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬಾರದು. 

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆಗಳು 2022-23” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ