• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 30-08-2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್ಎಸ್ಎಲ್‌ಸಿ ಪಠ್ಯಕ್ರಮ 2022-23

img-icon

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್ಎಸ್ಎಲ್‌ಸಿ ಪಠ್ಯಕ್ರಮ 2022-23: ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಪ್ರಮುಖ ಹಂತ. ಹತ್ತು ವರ್ಷದ ಶಾಲಾ ಶಿಕ್ಷಣದ ಅಂತ್ಯದಲ್ಲಿ ಮಂಡಳಿ ನಡೆಸುವ ಈ ಪರೀಕ್ಷೆಯು ಒಬ್ಬ ವಿದ್ಯಾರ್ಥಿಯ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯಾಗುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪರೀಕ್ಷೆಯ ಪಠ್ಯಕ್ರಮವನ್ನು ಸರಿಯಾಗಿ ಅರಿತುಕೊಳ್ಳುವುದು ಮುಖ್ಯ. ಈ ಲೇಖನದಲ್ಲಿ ನಾವು ಈ ಕುರಿತಾಗಿ ನಿಮಗೆ ಬೇಕಾದ ಎಲ್ಲ ಮಾಹಿತಿಯನ್ನು ನೀಡಲಿದ್ದೇವೆ.

ಎಸ್ಎಸ್ಎಲ್‌ಸಿ ಪರೀಕ್ಷೆ 2022-23: ವಿಷಯಗಳ ಆಯ್ಕೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಆರು ವಿಷಯಗಳಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ವಿದ್ಯಾರ್ಥಿಗಳು ಮೂರು ಕೋರ್ ವಿಷಯಗಳು- ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮೂರು ಭಾಷೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಏಳು ವಿವಿಧ ಮಾಧ್ಯಮಗಳಲ್ಲಿ ನಡೆಯುತ್ತದೆ.

ಅಧ್ಯಯನ ಮಾಡಬೇಕಾದ ಭಾಷೆಗಳಿಗಾಗಿ ಆಯ್ಕೆಗಳನ್ನು ಮೂರು ಗುಂಪುಗಳಲ್ಲಿ ನೀಡಲಾಗಿದೆ. ವಿದ್ಯಾರ್ಥಿಗಳು ಪ್ರತಿ ಗುಂಪಿನಿಂದ ಒಂದು ಭಾಷೆಯನ್ನು ಆಯ್ಕೆ ಮಾಡಬೇಕು. ಕೆಳಗಿನ ಕೋಷ್ಟಕದಲ್ಲಿ ಆಯ್ಕೆಗಳನ್ನು ನೀಡಲಾಗಿದೆ:

ಪ್ರಥಮ ಭಾಷೆದ್ವಿತೀಯ ಭಾಷೆತೃತೀಯ ಭಾಷೆ
ಕನ್ನಡಇಂಗ್ಲಿಷ್ಹಿಂದಿ
ತೆಲುಗುಕನ್ನಡಕನ್ನಡ
ಹಿಂದಿಇಂಗ್ಲಿಷ್
ಮರಾಠಿಅರೇಬಿಕ್
ತಮಿಳುಉರ್ದು
ಉರ್ದುಸಂಸ್ಕೃತ
ಇಂಗ್ಲಿಷ್ಕೊಂಕಣಿ
ಸಂಸ್ಕೃತಪರ್ಷಿಯನ್

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ವಿಷಯವಾರು ಪಠ್ಯಕ್ರಮ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಎಲ್ಲ ಪ್ರಮುಖ ವಿಷಯಗಳ ಪಠ್ಯಕ್ರಮವನ್ನು ಇಲ್ಲಿ ನೀಡಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಗಣಿತ ಪಠ್ಯಕ್ರಮ

ಗಣಿತವು ತಾರ್ಕಿಕ ಚಿಂತನೆಯ ಅಗತ್ಯವಿರುವ ವಿಷಯವಾಗಿದೆ. ಗಣಿತದ ಪಠ್ಯಕ್ರಮವು ಒಳಗೊಂಡಿರುವ ಅಧ್ಯಾಯಗಳನ್ನು ಕೆಳಗೆ ನೀಡಲಾಗಿದೆ:

ಕರ್ನಾಟಕ ಎಸ್‌ಎಸ್‌ಎಲ್‌ಸಿ 2022-23: ಗಣಿತ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಸಮಾಂತರ ಶ್ರೇಢಿಗಳು
2 ತ್ರಿಭುಜಗಳು
3. ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು
4. ವೃತ್ತಗಳು
5. ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು
6. ರಚನೆಗಳು
7. ನಿರ್ದೇಶಾಂಕ ರೇಖಾಗಣಿತ
8. ವಾಸ್ತವ ಸಂಖ್ಯೆಗಳು
9 ಬಹುಪದೋಕ್ತಿಗಳು
10. ವರ್ಗ ಸಮೀಕರಣಗಳು
11. ತ್ರಿಕೋನಮಿತಯ ಪ್ರಸ್ತಾವನೆ
12 ತ್ರಿಕೋನಮಿತಿಯ ಕೆಲವು ಅನ್ವಯಗಳು
13 ಸಂಖ್ಯಾಶಾಸ್ತ್ರ
14 ಸಂಭವನೀಯತೆ
15 ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು
A1 ಗಣಿತದಲ್ಲಿನ ಸಾಧನೆಗಳು
A2 ಗಣತೀಯ ಮಾದರೀಕರಣ

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ವಿಜ್ಞಾನ ಪಠ್ಯಕ್ರಮ

ವಿಜ್ಞಾನವು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ವಿಷಯಗಳ ಮಿಶ್ರಣವಾಗಿದೆ. ವಿಜ್ಞಾನ ಪಠ್ಯಕ್ರಮದ ವಿವಿಧ ಅಧ್ಯಾಯಗಳನ್ನು ಕೆಳಗೆ ನೀಡಲಾಗಿದೆ:

ಕರ್ನಾಟಕ ಎಸ್‌ಎಸ್‌ಎಲ್‌ಸಿ 2022-23: ವಿಜ್ಞಾನ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
2. ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
3. ಲೋಹಗಳು ಮತ್ತು ಅಲೋಹಗಳು
4. ಜೀವ ಕ್ರಿಯೆಗಳು
5. ನಿಯಂತ್ರಣ ಮತ್ತು ಸಹಭಾಗಿತ್ವ
6. ವಿದ್ಯುಚ್ಛಕ್ತಿ
7. ವಿದ್ಯುತ್‌ಪ್ರವಾಹದ ಕಾಂತೀಯ ಪರಿಣಾಮಗಳು
8. ನಮ್ಮ ಪರಿಸರ
9. ಕಾರ್ಬನ್ ಮತ್ತು ಅದರ ಸಂಯುಕ್ತಗಳು
10. ಧಾತುಗಳ ಆವರ್ತನೀಯ ವರ್ಗೀಕರಣ
11. ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ
12. ಅನುವಂಶೀಯತೆ ಮತ್ತು ಜೀವವಿಕಾಸ
13. ಬೆಳಕು, ಪ್ರತಿಫಲನ ಮತ್ತು ವಕ್ರೀಭವನ
14. ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
15. ಶಕ್ತಿಯ ಆಕರಗಳು
16. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಸಮಾಜ ವಿಜ್ಞಾನ ಪಠ್ಯಕ್ರಮ

ಸಮಾಜ ವಿಜ್ಞಾನವು ಪಾರಂಗತರಾಗಲು ಬಹಳ ಸಮಯ ತೆಗೆದುಕೊಳ್ಳುವ ವಿಷಯವಾಗಿದೆ. ಇದು ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ಹಲವು ವಿಷಯಗಳನ್ನು ಒಳಗೊಂಡಿದೆ. ಸಮಾಜ ವಿಜ್ಞಾನ ಪಠ್ಯಕ್ರಮದ ವಿವಿಧ ವಿಷಯಗಳನ್ನು ಕೆಳಗೆ ನೀಡಲಾಗಿದೆ:

ಇತಿಹಾಸದ ಪಠ್ಯಕ್ರಮ

ಕರ್ನಾಟಕ ಎಸ್‌ಎಸ್‌ಎಲ್‌ಸಿ 2022-23: ಇತಿಹಾಸದ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಭಾರತಕ್ಕೆ ಯೂರೋಪಿಯನ್ನರ ಆಗಮನ
2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
3. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರಿನ ಒಡೆಯರು
5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು
6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)
7. ಸ್ವಾತಂತ್ರ್ಯ ಹೋರಾಟ
8. ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ
9. ಮಹಾಯುದ್ಧಗಳು ಹಾಗೂ ಭಾರತದ ಪಾತ್ರ

ಭೂಗೋಳ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23: ಭೂಗೋಳ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು
2. ಭಾರತದ ಋತುಗಳು
3. ಭಾರತದ ಮಣ್ಣುಗಳು
4. ಭಾರತದ ಅರಣ್ಯಗಳು
5. ಭಾರತದ ಜಲಸಂಪನ್ಮೂಲಗಳು
6. ಭಾರತದ ಭೂ ಬಳಕೆ ಹಾಗೂ ಕೃಷಿ
7. ಭಾರತದ ಖನಿಜ ಹಾಗೂ ಶಕ್ತಿ ಸಂಪನ್ಮೂಲಗಳು
8. ಭಾರತದ ಸಾರಿಗೆ ಹಾಗೂ ಸಂಪರ್ಕ
9. ಭಾರತದ ಪ್ರಮುಖ ಕೈಗಾರಿಕೆಗಳು
10. ಭಾರತದ ನಿಸರ್ಗ ವಿಪತ್ತುಗಳು

ರಾಜ್ಯಶಾಸ್ತ್ರ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23: ರಾಜ್ಯಶಾಸ್ತ್ರ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಭಾರತದ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು
2. ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ
3. ಜಾಗತಿಕ ಸವಾಲುಗಳು ಹಾಗೂ ಭಾರತದ ಪಾತ್ರ
4. ಜಾಗತಿಕ ಸಂಸ್ಥೆಗಳು

ಸಮಾಜಶಾಸ್ತ್ರ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23: ಸಮಾಜಶಾಸ್ತ್ರ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಸಾಮಾಜಿಕ ಸ್ತರ ವಿನ್ಯಾಸ
2. ದುಡಿಮೆ ಮತ್ತು ಆರ್ಥಿಕ ಜೀವನ
3. ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು
4. ಸಾಮಾಜಿಕ ಸವಾಲುಗಳು

ಅರ್ಥಶಾಸ್ತ್ರ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23: ಅರ್ಥಶಾಸ್ತ್ರ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಅರ್ಥವ್ಯವಸ್ಥೆ ಮತ್ತು ಸರಕಾರ
2. ಗ್ರಾಮೀಣಾಭಿವೃದ್ದಿ
3. ಸಾರ್ವಜನಿಕ ಹಣಕಾಸು ಹಾಗೂ ಆಯ-ವ್ಯಯ

ವ್ಯವಹಾರ ಅಧ್ಯಯನ ಪಠ್ಯಕ್ರಮ

ಕರ್ನಾಟಕ ಎಸ್ಎಸ್ಎಲ್‌ಸಿ 2022-23: ವ್ಯವಹಾರ ಅಧ್ಯಯನ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು
1. ಬ್ಯಾಂಕ್ ವ್ಯವಹಾರಗಳು
2. ಉದ್ಯಮಶೀಲತೆ
3. ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ

ಎಸ್ಎಸ್ಎಲ್‌ಸಿ ಪರೀಕ್ಷೆ 2022-23: ಇಂಗ್ಲಿಷ್ ಪಠ್ಯಕ್ರಮ (ದ್ವಿತೀಯ ಭಾಷೆ) 

ವಿದ್ಯಾರ್ಥಿಗಳು ತಮ್ಮ ಶೇಕಡಾ ಅಂಕಗಳನ್ನು ಹೆಚ್ಚಿಸಲು ಸಹಾಯ ಮಾಡುವ ವಿಷಯಗಳಲ್ಲಿ ಇಂಗ್ಲಿಷ್ ಕೂಡ ಒಂದಾಗಿದೆ. ಇಂಗ್ಲಿಷ್ ಪತ್ರಿಕೆಯು ವಿದ್ಯಾರ್ಥಿಗಳ ಓದುವಿಕೆ, ಬರವಣಿಗೆ, ವಿಶ್ಲೇಷಣಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯಗಳನ್ನು ನಿರ್ಣಯಿಸುವ ಗುರಿಯನ್ನು ಹೊಂದಿದೆ. ದ್ವಿತೀಯ ಭಾಷೆ ಇಂಗ್ಲಿಷ್ ಪಠ್ಯಕ್ರಮದ ವಿವಿಧ ಅಧ್ಯಾಯಗಳನ್ನು ಕೆಳಗೆ ನೀಡಲಾಗಿದೆ:

ಕರ್ನಾಟಕ ಎಸ್ಎಸ್ಎಲ್‌ಸಿ 2022-23: ಇಂಗ್ಲಿಷ್ ಗದ್ಯ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಟಾಪಿಕ್ ಹೆಸರು
1. A Hero
2. There’s a Girl by the Tracks!
3. Gentleman of Rio en Medio
4. Dr B.R. Ambedkar
5. The Concert
6. The Discovery
7. Colours of Silence
8. Science and Hope of Survival
ಕರ್ನಾಟಕ ಎಸ್ಎಸ್ಎಲ್‌ಸಿ 2022-23: ಇಂಗ್ಲಿಷ್ ಪದ್ಯ ಪಠ್ಯಕ್ರಮ
ಅಧ್ಯಾಯ ಸಂಖ್ಯೆ ಟಾಪಿಕ್ ಹೆಸರು
1. Grandma Climbs a Tree
2. Quality of Mercy
3. I am the Land
4. The Song of India
5. Jazz Poem Two
6. Ballad of the Tempest
7. The Blind Boy
8. Off to Outer Space Tomorrow Morning
ಕರ್ನಾಟಕ ಎಸ್ಎಸ್ಎಲ್‌ಸಿ 2022-23: ಇಂಗ್ಲಿಷ್ ವ್ಯಾಕರಣ, ಗ್ರಹಿಕೆ, ಪದ್ಯ ಪಠ್ಯಕ್ರಮ
Chapter Number Topic Name
1. Reading Comprehension
2. Punctuation
3. Noun
4. Articles
5. Adjective
6. Verb
7. Prepositions
8. Conjunction
9. Tenses
10. Sentences
11. Transformation of Sentences
12. Vocabulary
13. Writing

ಎಸ್ಎಸ್ಎಲ್‌ಸಿ ಪರೀಕ್ಷೆ 2022-23: ಪ್ರಥಮ ಭಾಷೆ ಕನ್ನಡ ಪಠ್ಯಕ್ರಮ

ವಿದ್ಯಾರ್ಥಿಗಳು ತಮ್ಮ ಶೇಕಡಾ ಅಂಕಗಳನ್ನು ಹೆಚ್ಚಿಸಲು ಸಹಾಯ ಮಾಡುವ ವಿಷಯಗಳಲ್ಲಿ ಕನ್ನಡ ಕೂಡ ಒಂದಾಗಿದೆ. ಕನ್ನಡ ಪತ್ರಿಕೆಯು ವಿದ್ಯಾರ್ಥಿಗಳ ಓದುವಿಕೆ, ಬರವಣಿಗೆ, ವಿಶ್ಲೇಷಣಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯಗಳನ್ನು ನಿರ್ಣಯಿಸುವ ಗುರಿಯನ್ನು ಹೊಂದಿದೆ. ಕನ್ನಡ ಪಠ್ಯಕ್ರಮದ ವಿವಿಧ ಅಧ್ಯಾಯಗಳನ್ನು ಕೆಳಗೆ ನೀಡಲಾಗಿದೆ:

ಕ್ರ.ಸಂ ಗದ್ಯಭಾಗ ಕೃತಿಕಾರರ ಹೆಸರು
1 ಶಬರಿ ಪು. ತಿ. ನರಸಿಂಹಾಚಾರ್
2 ಲಂಡನ್ ನಗರ ವಿ. ಕೃ. ಗೋಕಾಕ್
3 ಶುಕನಾಸನ ಉಪದೇಶ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ
4 ಭಾಗ್ಯಶಿಲ್ಪಿಗಳು (ನಾಲ್ವಡಿ ಕೃಷ್ಣರಾಜ ಒಡೆಯರು,
ಸರ್ ಎಂ. ವಿಶ್ವೇಶ್ವರಯ್ಯ)
ಸಮಿತಿ ರಚನೆ /
ಡಿ.ಎಸ್. ಜಯಪ್ಪಗೌಡ
5 ನಿಜವಾದ ಆದರ್ಶ ಪುರುಷ ಯಾರಾಗಬೇಕು? ಕೇಶವ ಬಲಿರಾಮ ಹೆಡಗೇವಾರ
6 ಎದೆಗೆ ಬಿದ್ದ ಅಕ್ಷರ ದೇವನೂರ ಮಹಾದೇವ
7 ಶ್ರೇಷ್ಠ ಭಾರತೀಯ ಚಿಂತನೆಗಳು ಶತಾವಧಾನಿ ಡಾ. ಆರ್. ಗಣೇಶ್
8 ವೃಕ್ಷಸಾಕ್ಷಿ ದುರ್ಗಸಿಂಹ
ಪದ್ಯಭಾಗ
1 ಸಂಕಲ್ಪಗೀತೆ ಜಿ. ಎಸ್. ಶಿವರುದ್ರಪ್ಪ
2 ಹಕ್ಕಿಹಾರುತಿದೆ ನೋಡಿದಿರಾ ದ. ರಾ. ಬೇಂದ್ರೆ
3 ಹಲಗಲಿ ಬೇಡರು ಜನಪದ ಲಾವಣಿ (ಸಂಗ್ರಹ)
4 ಕೌರವೇಂದ್ರನ ಕೊಂದೆ ನೀನು ಕುಮಾರ ವ್ಯಾಸ
5 ಹಸುರು ಕುವೆಂಪು
6 ಛಲಮನೆ ಮೆರೆವೆಂ ರನ್ನ
7 ವೀರಲವ ಲಕ್ಷ್ಮೀಶ
8 ಕೆಮ್ಮನೆ ಮೀಸೆವೊತ್ತನೇ ಪಂಪ
ಪಠ್ಯಪೂರಕ ಅಧ್ಯಯನ
1 ಉದಾತ್ತ ಚಿಂತನೆಗಳು ಸಂಗ್ರಹ
2 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು ಸಂಗ್ರಹ
3 ಭಗತ್ ಸಿಂಗ್ ಡಾ. ಜಿ. ರಾಮಕೃಷ್ಣ
4 ವಸಂತ ಮುಖ ತೋರಲಿಲ್ಲ ಡಾ. ವಿಜಯಶ್ರೀ ಸಬರದ
5 ಸ್ವದೇಶೀ ಸೂತ್ರದ ಸರಳ ಹಬ್ಬ ಶಿವಾನಂದ ಕಳವೆ
6 ನಾನು ಪ್ರಾಸ ಬಿಟ್ಟ ಕತೆ ಎಂ. ಗೋವಿಂದ ಪೈ
7 ತಾಯಿ ಭಾರತಿಯ ಅಮರಪುತ್ರರು ಚಕ್ರವರ್ತಿ ಸೂಲಿಬೆಲೆ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಬ್ಲೂಪ್ರಿಂಟ್

ಒಟ್ಟಾರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಬ್ಲೂಪ್ರಿಂಟ್ ಅನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ವಿಷಯದ ಹೆಸರುಅಂಕಗಳ ಸಂಖ್ಯೆಕಾಲಾವಧಿ
ಭಾಷಾ ಪತ್ರಿಕೆ I
ಕನ್ನಡ / ಇಂಗ್ಲಿಷ್ / ಹಿಂದಿ / ಸಂಸ್ಕೃತ / ತೆಲುಗು / ತಮಿಳು / ಮರಾಠಿ / ಉರ್ದು
100
ಥಿಯರಿ: 100
ಆಂತರಿಕ ಅಂಕಗಳು: 25
3 ಗಂಟೆ 15 ನಿಮಿಷ
ಭಾಷಾ ಪೇಪರ್ II
ಕನ್ನಡ / ಇಂಗ್ಲಿಷ್
100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆ 15 ನಿಮಿಷ
ಭಾಷಾ ಪತ್ರಿಕೆ III
ಹಿಂದಿ / ಕನ್ನಡ / ಇಂಗ್ಲಿಷ್ / ಅರೇಬಿಕ್ / ಉರ್ದು / ಸಂಸ್ಕೃತ / ಕೊಂಕಣಿ / ಆದಾಯ
100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆ 15 ನಿಮಿಷ
ಗಣಿತ100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆ 15 ನಿಮಿಷ
ವಿಜ್ಞಾನ100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆ 15 ನಿಮಿಷ
ಸಮಾಜ ವಿಜ್ಞಾನ100 ಅಂಕಗಳು
ಥಿಯರಿ: 80
ಆಂತರಿಕ ಅಂಕಗಳು: 20 ಅಂಕಗಳು
3 ಗಂಟೆ 15 ನಿಮಿಷ

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಗಣಿತ ವಿಷಯದ ಬ್ಲೂಪ್ರಿಂಟ್

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಗಣಿತ ವಿಷಯದ ಬ್ಲೂಪ್ರಿಂಟ್
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ತ್ರಿಭುಜಗಳು 8
2. ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು 8
3. ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು 7
4. ಸಂಖ್ಯಾಶಾಸ್ತ್ರ 6
5. ವರ್ಗ ಸಮೀಕರಣಗಳು 6
6. ಬಹುಪದೋಕ್ತಿಗಳು 6
7. ಸಮಾಂತರ ಶ್ರೇಢಿಗಳು 6
8. ತ್ರಿಕೋನಮಿತಿಯ ಪ್ರಸ್ತಾವನೆ 5
9. ರಚನೆಗಳು 5
10. ನಿರ್ದೇಶಾಂಕ ರೇಖಾಗಣಿತ 5
11. ವಾಸ್ತವ ಸಂಖ್ಯೆಗಳು 4
12. ತ್ರಿಕೋನಮಿತಿಯ ಕೆಲವು ಅನ್ವಯಗಳು 4
13. ಸಂಭವನೀಯತೆ 3
14. ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು 3
ಒಟ್ಟು 80
ಆಂತರಿಕ ಅಂಕಗಳು 20

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ವಿಜ್ಞಾನ ವಿಷಯದ ಬ್ಲೂಪ್ರಿಂಟ್

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ವಿಜ್ಞಾನ ವಿಷಯದ ಬ್ಲೂಪ್ರಿಂಟ್
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ವಿದ್ಯುಚ್ಛಕ್ತಿ 7
2. ಬೆಳಕು, ಪ್ರತಿಫಲನ ಮತ್ತು ವಕ್ರೀಭವನ 7
3. ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು 6
4. ಲೋಹಗಳು ಮತ್ತು ಅಲೋಹಗಳು 6
5. ಜೀವ ಕ್ರಿಯೆಗಳು 6
6. ವಿದ್ಯುತ್‌ಪ್ರವಾಹದ ಕಾಂತೀಯ ಪರಿಣಾಮಗಳು 6
7. ಕಾರ್ಬನ್ ಮತ್ತು ಅದರ ಸಂಯುಕ್ತಗಳು 6
8. ಅನುವಂಶೀಯತೆ ಮತ್ತು ಜೀವವಿಕಾಸ 6
9. ನಿಯಂತ್ರಣ ಮತ್ತು ಸಹಭಾಗಿತ್ವ 5
10. ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ 5
11. ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು 5
12. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು 4
13. ಧಾತುಗಳ ಆವರ್ತನೀಯ ವರ್ಗೀಕರಣ 3
14. ಶಕ್ತಿಯ ಆಕರಗಳು 3
15. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ 3
16. ನಮ್ಮ ಪರಿಸರ 2
ಒಟ್ಟು 80
ಆಂತರಿಕ ಅಂಕಗಳು 20

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಸಮಾಜ ವಿಜ್ಞಾನ ವಿಷಯದ ಬ್ಲೂಪ್ರಿಂಟ್

ಇತಿಹಾಸ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಭಾರತಕ್ಕೆ ಯೂರೋಪಿಯನ್ನರ ಆಗಮನ 2
2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ 2
3. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು 3
4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು 2
5. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು 2
6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857) 3
7. ಸ್ವಾತಂತ್ರ್ಯ ಹೋರಾಟ 2
8. ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ 4
9. ಸ್ವಾತಂತ್ರ್ಯೋತ್ತರ ಭಾರತ 2
10. 20ನೇ ಶತಮಾನದ ರಾಜಕೀಯ ಆಯಾಮಗಳು 3
ಒಟ್ಟು 25
ಭೂಗೋಳ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಭಾರತದ ಸ್ಥಾನ ಮತ್ತು ವಿಸ್ತೀರ್ಣ 1
2. ಭಾರತದ ಮೇಲ್ಮೈಲಕ್ಷಣಗಳು 2
3. ಭಾರತದ ವಾಯುಗುಣ 2
4. ಭಾರತದ ಮಣ್ಣುಗಳು 1
5. ಭಾರತದ ಅರಣ್ಯ ಸಂಪತ್ತು 2
6. ಭಾರತದ ಜಲಸಂಪನ್ಮೂಲಗಳು 2
7. ಭಾರತದ ಭೂ ಸಂಪನ್ಮೂಲಗಳು 2
8. ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು 2
9. ಭಾರತದ ಸಾರಿಗೆ ಮತ್ತು ಸಂಪರ್ಕ 3
10. ಭಾರತದ ಕೈಗಾರಿಕೆಗಳು 2
11. ಭಾರತದ ನೈಸರ್ಗಿಕ ವಿಪತ್ತುಗಳು 2
12. ಭಾರತದ ಜನಸಂಖ್ಯೆ 2
ಒಟ್ಟು 23
ರಾಜ್ಯಶಾಸ್ತ್ರ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು 2
2. ಭಾರತದ ವಿದೇಶಾಂಗ ನೀತಿ 2
3. ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ 2
4. ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ 2
5. ಜಾಗತಿಕ ಸಂಸ್ಥೆಗಳು 2
ಒಟ್ಟು 10
ಸಮಾಜಶಾಸ್ತ್ರ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಸಾಮಾಜಿಕ ಸ್ತರ ವಿನ್ಯಾಸ 2
2. ದುಡಿಮೆ 2
3. ಸಾಮಾಜಿಕ ಚಳವಳಿಗಳು 2
4. ಸಾಮಾಜಿಕ ಸಮಸ್ಯೆಗಳು 2
ಒಟ್ಟು 8
ಅರ್ಥಶಾಸ್ತ್ರ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಅಭಿವೃದ್ಧಿ 2
2. ಗ್ರಾಮೀಣ ಅಭಿವೃದ್ದಿ 1
3. ಹಣ ಮತ್ತು ಸಾಲ 2
4. ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ 2
ಒಟ್ಟು 7
ವ್ಯವಹಾರ ಅಧ್ಯಯನ
ಅಧ್ಯಾಯ ಸಂಖ್ಯೆ ಅಧ್ಯಾಯದ ಹೆಸರು ಅಂಕಗಳು
1. ಬ್ಯಾಂಕಿನ ವ್ಯವಹಾರಗಳು 2
2. ಉದ್ಯಮಗಾರಿಕೆ 1
3. ವ್ಯವಹಾರದ ಜಾಗತೀಕರಣ 2
4. ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ 2
ಒಟ್ಟು 7
ಒಟ್ಟು (ಇತಿಹಾಸ)
ಒಟ್ಟು (ಭೂಗೋಳ)
ಒಟ್ಟು (ರಾಜಕೀಯ ವಿಜ್ಞಾನ)
ಒಟ್ಟು (ಸಮಾಜಶಾಸ್ತ್ರ)
ಒಟ್ಟು (ಅರ್ಥಶಾಸ್ತ್ರ)
ಒಟ್ಟು (ವ್ಯವಹಾರ ಅಧ್ಯಯನ)
ಒಟ್ಟು
25
23
10
8
7
7
80
ಆಂತರಿಕ ಅಂಕಗಳು 20

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಇಂಗ್ಲಿಷ್ ವಿಷಯದ ಬ್ಲೂಪ್ರಿಂಟ್ -ದ್ವಿತೀಯ ಭಾಷೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022-23: ಇಂಗ್ಲಿಷ್ ವಿಷಯದ ಬ್ಲೂಪ್ರಿಂಟ್
ಕ್ರಮ ಸಂಖ್ಯೆ ವಿಭಾಗ ಅಂಕಗಳು
1. Prose 30
2. Poetry 30
3. Non-Detail (Supplementary) 07
4. Grammar and Vocabulary 19
5. Composition (Letter+Essay) 10
6. Comprehension Passage 04
Total 100

ಎಸ್‌ಎಸ್‌ಎಲ್‌ಸಿ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ (FAQs) ಪ್ರಶ್ನೆಗಳು

ಪ್ರ. 1: ವಿಜ್ಞಾನದಲ್ಲಿ ಚಿತ್ರಗಳು ಎಷ್ಟು ಅಂಕಗಳಿಗೆ ಬರುತ್ತವೆ?

ಉತ್ತರ: 16 ಅಂಕಗಳು – 12 ಅಂಕಗಳು ಚಿತ್ರ ಬಿಡಿಸುವುದಕ್ಕೆ, 4 ಅಂಕಗಳು ಚಿತ್ರಗಳನ್ನು ಕುರಿತ ಪ್ರಶ್ನೆಗಳು.

ಪ್ರ. 2: ಸಮಾಜ ವಿಜ್ಞಾನಕ್ಕೆ ನೀಲಿನಕ್ಷೆ ಇದೆಯೇ?

ಉತ್ತರ: ಇಲ್ಲ. ವಿಷಯಧಾರಿತ ಪ್ರಶ್ನೆಗಳನ್ನು ನೀಡುವರು. 

ಪ್ರ. 3: ಭೂಪಟಕ್ಕೆ ಎಷ್ಟು ಅಂಕಗಳು ಇರುತ್ತವೆ?

ಉತ್ತರ: 5 ಅಂಕಗಳು, ಸ್ಥಳಗಳನ್ನು ಸರಿಯಾಗಿ ಗುರುತಿಸಬೇಕು. 

ಪ್ರ. 4: ಭೌತಶಾಸ್ತ್ರದ ಸಂಭವನೀಯ ನಿಯಮಗಳು ಮತ್ತು ಅನುವಂಶೀಯತೆ ಮತ್ತು ಜೀವವಿಕಾಸ ಪಾಠದ ಮುಖ್ಯಾಂಶಗಳನ್ನು ತಿಳಿಸಿ?

ಉತ್ತರ: ಓಮ್‌ನ ನಿಯಮ, ಫ್ಲೆಮಿಂಗನ ನಿಯಮ, ಜೌಲನ ಉಷ್ಣೋತ್ಪತ್ತಿ ನಿಯಮ, ಪ್ರತಿಫಲನ ನಿಯಮಗಳು, ವಕ್ರೀಭವನ ನಿಯಮಗಳು. 

ಪ್ರ. 5: ಕಳೆದ 5 ವರ್ಷಗಳ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳನ್ನು ನಾನು ಎಲ್ಲಿಂದ ಡೌನ್‌ಲೋಡ್ ಮಾಡಬಹುದು?

ಉತ್ತರ: ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಳೆದ 5 ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು KSEEB ಯ ಅಧಿಕೃತ ವೆಬ್‌ಸೈಟ್‌ನಿಂದ ಮತ್ತು Embibeನಿಂದ ಡೌನ್‌ಲೋಡ್ ಮಾಡಬಹುದು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.  “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪಠ್ಯಕ್ರಮ“ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ