Saas ಮೂಲಕ AI ನ ಅನ್‌ಲಾಕ್ ಮಾಡುವಿಕೆ
ಅವರ ಪ್ರಗತಿಯನ್ನು ಫಾಸ್ಟ್ಟ್ರ್ಯಾಕ್ ಮಾಡಿ
ನಿಮ್ಮ ಮಗುವಿನ ಕಲಿಕೆಯ ಪ್ರಗತಿಯ ನೈಜ ಚಿತ್ರಣ ಪಡೆಯಿರಿ ಮತ್ತು ಅವರನ್ನು ಸರಿಯಾದ ಹಾದಿಯಲ್ಲಿ ಸಾಗುವಂತೆ ಮಾಡಿ.
ಶಿಕ್ಷಣವನ್ನು ನಿಜವಾಗಿಯೂ ವೈಯಕ್ತೀಕರಿಸುವ ಮತ್ತು ಎಲ್ಲರಿಗೂ ಸಿಗುವಂತೆ ಮಾಡುವ ಗುರಿಯೊಂದಿಗೆ Embibe ಅನ್ನು 2012ರಲ್ಲಿ ಸ್ಥಾಪಿಸಲಾಯಿತು. ಯಾವುದೇ ಇಬ್ಬರು ವಿದ್ಯಾರ್ಥಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ ಎಂಬುದನ್ನು ನಾವು ಒಪ್ಪುತ್ತೇವೆ. ಹಾಗಿದ್ದಲ್ಲಿ ಅವರ ಕಲಿಕಾ ವಿಧಾನಗಳು ಒಂದೇ ಆಗಿರಲು ಹೇಗೆ ಸಾಧ್ಯ? ಆದ್ದರಿಂದಲೇ ನಾವು ಹಿಂದೆಂದೂ ಕಾಣದಂತಹ ಅತ್ಯಂತ ಪ್ರಭಾವಶಾಲಿ ಶಿಕ್ಷಣ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸಿದ್ದೇವೆ. Embibe ಪ್ರತಿ ಮಗುವಿಗೆ ಶಿಕ್ಷಣವನ್ನು ವೈಯಕ್ತೀಕರಿಸಲು AI ಮತ್ತು ದತ್ತಾಂಶ ವಿಜ್ಞಾನವನ್ನು ಬಳಸುತ್ತದೆ. Embibe ನಲ್ಲಿ, ನಿಮ್ಮ ಮಗು ತನ್ನ ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾದ ವಿಶ್ವ ದರ್ಜೆಯ ಕಲಿಕಾ ಕಂಟೆಂಟ್ ಅನ್ನು ಪಡೆಯುತ್ತದೆ. ನಿಮ್ಮ ಮಗು ಸಿಬಿಎಸ್‌ಇ, ಐಸಿಎಸ್‌ಇ ಮತ್ತು ವಿವಿಧ ರಾಜ್ಯ ಶಿಕ್ಷಣ ಬೋರ್ಡ್‌ಗಳ ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡ 45,000+ ಪರಿಕಲ್ಪನೆಗಳ ಆಕರ್ಷಕ ವಿಡಿಯೋ ಕಂಟೆಂಟ್‌ಗಳನ್ನು ಇಲ್ಲಿ ಕಂಡುಕೊಳ್ಳುತ್ತದೆ. ಶಾಲಾ ಶಿಕ್ಷಣದ ಹೊರತಾಗಿ, ಎಂಜಿನಿಯರಿಂಗ್, ವೈದ್ಯಕೀಯ, ಬ್ಯಾಂಕಿಂಗ್, ಟೀಚಿಂಗ್, ವಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದು.
Embibe ಪರಿಪೂರ್ಣವಾಗಿ ದತ್ತಾಂಶ ಆಧಾರಿತವಾಗಿದೆ. ಹಾಗಾಗಿ ನಿಮ್ಮ ಮಗುವಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ನಾವು ಸಹಾಯ ಮಾಡಬಹುದು ಎಂದು ನಾವು ಹೇಳಿದಾಗ, ನಾವು ಅದನ್ನು ಮಾಡಿ ತೋರಿಸುತ್ತೇವೆ! ನಾವು ಮೊದಲು ನಿಮ್ಮ ಮಗುವಿನ ಜ್ಞಾನದ ಮಟ್ಟವನ್ನು ವಿಶ್ಲೇಷಿಸುತ್ತೇವೆ ಮತ್ತು ಅವರ ಸಬಲ ಮತ್ತು ದುರ್ಬಲ ವಿಷಯಗಳನ್ನು ಗುರುತಿಸುತ್ತೇವೆ. ಈ ವಿಶ್ಲೇಷಣೆಯ ಆಧಾರದ ಮೇಲೆ, ನಾವು ಶಿಫಾರಸು ಮಾಡುವ ಕಲಿಕಾ ವಸ್ತುಗಳು ನಿಮ್ಮ ಮಗುವಿನ ಜ್ಞಾನದ ಅಂತರವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಈ ಶಿಫಾರಸುಗಳು ಕೇವಲ ಪ್ರಸ್ತುತ ತರಗತಿಗೆಳಿಗೆ ಮಾತ್ರ ಸಂಬಂಧಿಸಿರದೆ, ಹಿಂದಿನ ತರಗತಿಗಳಲ್ಲಿರಬಹುದಾದ ದುರ್ಬಲ ಟಾಪಿಕ್‌ಗಳಿಗೂ ಮ್ಯಾಪ್ ಮಾಡಲಾಗಿರುತ್ತವೆ. ಈ ಕಲಿಕಾ ವಿಷಯವು ಸಮೃದ್ಧ ಕಂಟೆಂಟ್ ಹೊಂದಿದ್ದು ಮಕ್ಕಳಿಗೆ ಆಸಕ್ತಿದಾಯಕವೆನಿಸಿ ಪರಿಕಲ್ಪನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಂತರ ಬರುವುದೇ ನಮ್ಮ ಅಡಾಪ್ಟೀವ್ ಪ್ರ್ಯಾಕ್ಟೀಸ್ ಫೀಚರ್. ನಮ್ಮ AI ಎಂಜಿನ್‌ನಿಂದ ಆಧರಿಸಿದ, ಪ್ರ್ಯಾಕ್ಟೀಸ್ ಪ್ರಶ್ನೆಗಳು ನಿಮ್ಮ ಮಗುವಿನ ಮಟ್ಟಕ್ಕೆ ಹೊಂದಿಕೊಳ್ಳುತ್ತವೆ. ಇದರಿಂದ ಮಗುವಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮತ್ತು ಪಯಣದುದ್ದಕ್ಕೂ, ಸಲಹೆ ಮತ್ತು ಸುಳಿವುಗಳೊಂದಿಗೆ ಸರಿಯಾದ ಉತ್ತರ ಪಡೆಯಲು ನಾವು ಮಾರ್ಗದರ್ಶನ ಮಾಡುತ್ತೇವೆ. ಪ್ರ್ಯಾಕ್ಟೀಸ್‌ನ ಕೊನೆಯಲ್ಲಿ, ನಾವು ನಿಮ್ಮ ಮಗು ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥೈಸಿಕೊಂಡಿದೆಯೋ ಇಲ್ಲವೋ ಎಂದು ಹೇಳುವುದಷ್ಟೇ ಅಲ್ಲದೇ ಮಗು ಪ್ರಶ್ನೆಯೊಂದರ ಮೇಲೆ ಹೆಚ್ಚು ಸಮಯವನ್ನು ವ್ಯಯಿಸಿದೆಯೇ? ಅಸಡ್ಡೆಯಿಂದ ತಪ್ಪುಗಳನ್ನು ಮಾಡಿದೆಯೇ? ಅತಿಯಾದ ಆತ್ಮವಿಶ್ವಾಸ ಹೊಂದಿದೆಯೇ? ಇತ್ಯಾದಿಯಾಗಿ ಪ್ರ್ಯಾಕ್ಟೀಸ್‌ನಲ್ಲಿ ಪ್ರಶ್ನೆಗಳನ್ನು ಉತ್ತರಿಸಿದ ವಿಧಾನದ ಬಗ್ಗೆಯೂ ವಿವರವಾದ ಫೀಡ್‌ಬ್ಯಾಕ್ ಅನ್ನು ನೀಡುತ್ತೇವೆ. ಈ ವೈಯಕ್ತಿಕ ಫೀಡ್‌ಬ್ಯಾಕ್, ಪರೀಕ್ಷೆಗಳಿಗೆ ತಾನೆಷ್ಟು ಸಿದ್ಧ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮಗುವಿಗೆ ಸಹಾಯ ಮಾಡುತ್ತದೆ.
ನಿಮ್ಮ ಮಗು ಟೆಸ್ಟ್‌ಗೆ ಸಿದ್ಧವಾದಾಗ, ನಾವು ನಿಜವಾದ ಟೆಸ್ಟ್‌ಗಳ ಕ್ಲಿಷ್ಟತೆಯ ಮಟ್ಟಕ್ಕೆ ಮ್ಯಾಪ್ ಮಾಡಲಾದ ಟೆಸ್ಟ್‌ಗಳನ್ನು ನೀಡುತ್ತೇವೆ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಪ್ರಯತ್ನಿಸಿ ಅಥವಾ ನಿಜವಾದ(ಬೋರ್ಡ್) ಟೆಸ್ಟ್‌ಗಳ ಕ್ಲಿಷ್ಟತೆಯ ಮಟ್ಟಕ್ಕೆ ಎಷ್ಟು ಹತ್ತಿರದಲ್ಲಿದೆ ಎಂಬುದನ್ನು ತೋರಿಸುವ ಟೆಸ್ಟ್‌ನ ಗುಣಮಟ್ಟದ ಸ್ಕೋರ್‌ಗಳನ್ನು ತೋರುವ ನಮ್ಮ ಟೆಸ್ಟ್‌ಗಳಲ್ಲಿ ಒಂದನ್ನು ತೆಗೆದುಕೊಳ್ಳಿ. ಟೆಸ್ಟ್ ವಿಭಾಗವು ಕಸ್ಟಮ್ ಟೆಸ್ಟ್‌ಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ, ಅಲ್ಲಿ ನಿಮ್ಮ ಮಗು ತನ್ನ ಆದ್ಯತೆಗಳ ಆಧಾರದ ಮೇಲೆ ಏಕ ಅಥವಾ ಬಹು ವಿಷಯ/ಟಾಪಿಕ್‌ಗಳನ್ನು ಒಳಗೊಂಡಂತೆ ತನ್ನದೇ ಟೆಸ್ಟ್ ರಚಿಸಬಹುದು. ಒಮ್ಮೆ ಟೆಸ್ಟ್ ಪೂರೈಸಿದ ನಂತರ, ವೈಯಕ್ತಿಕ ಫೀಡ್‌ಬ್ಯಾಕ್ ವಿಶ್ಲೇಷಣೆಯು ಮಗುವಿನ ದೌರ್ಬಲ್ಯಗಳು ಮತ್ತು ಸಾಮರ್ಥ್ಯಗಳ ಸಮಗ್ರ ತಿಳುವಳಿಕೆಯನ್ನು ಒದಗಿಸುತ್ತದೆ.
Embibe ನಿಮ್ಮ ಮಗುವಿನಲ್ಲಿರುವ ವಿದ್ಯಾರ್ಥಿಯನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡುತ್ತದೆ. ಪೋಷಕರು ಕೆಲವೊಮ್ಮೆ ತಮ್ಮ ಮಗುವಿನ ಕಲಿಕಾ ಪಯಣದ ವಿಷಯಕ್ಕೆ ಬಂದಾಗ ಅಸಹಾಯಕರಾಗುತ್ತಾರೆ ಮತ್ತು ಅವರ ನಿರಂತರ ಹಸ್ತಕ್ಷೇಪವನ್ನು ಮಕ್ಕಳು ಯಾವಾಗಲೂ ಇಷ್ಟಪಡುವುದಿಲ್ಲ ಎಂದು ನಮಗೆ ತಿಳಿದಿದೆ. Embibe ಸಹಾಯದಿಂದ, ಪೇರೆಂಟ್ ಆ್ಯಪ್ ಮೂಲಕ ನಿಮ್ಮ ಮಗುವಿನ ಕಲಿಕೆಯ ಮೇಲೆ ನಿಗಾ ಇಡಬಹುದು. ನೀವು ಮಗುವಿನ ಕಲಿಕೆಯ ಪ್ರಗತಿಯ ನೈಜ ಅಪ್‌ಡೇಟ್‌ಗಳನ್ನು ಪಡೆಯುತ್ತೀರಿ. ಇದರಿಂದ ನೀವು ಆವನ/ಳ ಪಠ್ಯಕ್ರಮದ ಪೂರ್ಣಗೊಳಿಸುವಿಕೆಯನ್ನು ಟ್ರ್ಯಾಕ್ ಮಾಡಬಹುದು. ಪೂರ್ವ-ಯೋಜಿತ ಪಾಠಗಳನ್ನು ಆಯ್ಕೆ ಮಾಡುವ ಮೂಲಕ ಅಥವಾ ಅವರ ಜ್ಞಾನವನ್ನು ಪರೀಕ್ಷಿಸಲು ಮತ್ತು ಪರೀಕ್ಷೆಯನ್ನು ಮಾಡಲು ನಿಮ್ಮ ಸ್ವಂತ ಪಾಠಗಳನ್ನು ರಚಿಸುವ ಮೂಲಕ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ವೈಯಕ್ತೀಕರಿಸಿದ ಫೀಡ್‌ಬ್ಯಾಕ್‌ನಿಂದ ನೀವು ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿಯಬಹುದು ಮತ್ತು ಅದಕ್ಕೆ ತಕ್ಕಂತೆ ರಿವಿಷನ್ ಪ್ಲಾನ್‌ಗಳನ್ನು ರಚಿಸಬಹುದು. ನಿಮ್ಮ ಮಗುವಿನ ಗಮನವನ್ನು ಕೇಂದ್ರೀಕರಿಸಲು ನಿಮಗೆ ಸಹಾಯ ಮಾಡುವ ಉತ್ತಮ ಮಾರ್ಗವನ್ನು ನಾವು ಪಡೆದುಕೊಂಡಿದ್ದೇವೆ. ನಿಮ್ಮ ಮಗುವಿಗೆ ನೀವು ನಿಯೋಜಿಸಿದ ಕಾರ್ಯಗಳ ಪೂರ್ಣಗೊಳ್ಳುವಿಕೆಯನ್ನು ಆಧರಿಸಿ ಕಸ್ಟಮೈಸ್ ಮಾಡಲಾದ ಅವರ ನೆಚ್ಚಿನ ಚಟುವಟಿಕೆಗಳ ರಿವಾರ್ಡ್‌ಗಳನ್ನು(ಉದಾಹರಣೆಗೆ, ಮೂವೀ ನೈಟ್, ಪಿಜ್ಜಾ ನೈಟ್ ಅಥವಾ ಅವರ ನೆಚ್ಚಿನ ಮ್ಯೂಸಿಯಂನ ಭೇಟಿ) ಅನ್‌ಲಾಕ್ ಮಾಡಿ. ಶಿಕ್ಷಕರಾಗುವ ಕಲ್ಪನೆಯೇ ನಿಮಗಿರದಿದ್ದರೂ, Embibe ನಿಂದಾಗಿ ನೀವು ಶಿಕ್ಷಕರಾಗುತ್ತೀರಿ.
ಒರ್ವ ಪೋಷಕರಾಗಿ ಪೋಷಕ-ಶಿಕ್ಷಕ ಸಭೆಗಳಲ್ಲಿ ಹೆಚ್ಚಿನ ಮಾತುಗಳನ್ನು ನೀವೇ ಆಡಬಹುದು. Embibe ನ ವಿವರವಾದ ವಿಶ್ಲೇಷಣೆ ಮತ್ತು ವೈಯಕ್ತೀಕರಿಸಿದ ಫೀಡ್‌ಬ್ಯಾಕ್, ನಿಮ್ಮ ಮಗುವಿನ ಪ್ರಗತಿ ಮತ್ತು ಅಧ್ಯಯನ ಯೋಜನೆಯನ್ನು ಅರ್ಥಪೂರ್ಣವಾಗಿ ಚರ್ಚಿಸಲು ನಿಮಗೆ ಸಹಾಯಮಾಡುತ್ತದೆ. ನಿಮ್ಮ ಮಗುವಿನ ಜ್ಞಾನದ ಮಟ್ಟಗಳ ಬಗ್ಗೆ ದತ್ತಾಂಶವನ್ನು ಆಧರಿಸಿ ಶಿಕ್ಷಕರೊಂದಿಗೆ ಚರ್ಚಿಸಿ. ಪಾಠದ ಯೋಜನೆಗಳು ಮತ್ತು ಪ್ರ್ಯಾಕ್ಟೀಸ್‌ನ ಅಗತ್ಯವಿರುವ ದುರ್ಬಲ ಟಾಪಿಕ್‌ಗಳನ್ನು ಚರ್ಚಿಸಬಹುದು. ಅವರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರಿಗೆ ಎಲ್ಲಿ ಹೆಚ್ಚಿನ ಗಮನ ಬೇಕು ಎಂಬುದರ ಕುರಿತು ಶಿಕ್ಷಕರೊಂದಿಗೆ ಆಳವಾಗಿ ಚರ್ಚೆ ಮಾಡಬಹುದು. ಅಂತಿಮವಾಗಿ, ಇದು ನಿಮ್ಮ ಶಿಕ್ಷಣ ಹೂಡಿಕೆಯಿಂದಾದ ನಿಜವಾದ ಲಾಭವನ್ನು ಅಳೆಯಲು ಒಂದು ಮಾರ್ಗವೆನ್ನಬಹುದಾಗಿದೆ.